Breaking News

ಗುತ್ತಿಗಾರಿನ ಕಿರಣ ರಂಗ ಅಧ್ಯಯನ ಸಂಸ್ಥೆಯಿಂದ ತೀರ್ಥರಾಮ ಹೊಸೊಳಿಕೆಗೆ ಕಿರಣ ಗೌರವ ಸನ್ಮಾನ

ಗುತ್ತಿಗಾರಿನ ಕಿರಣ ರಂಗ ಅಧ್ಯಯನ ಸಂಸ್ಥೆ ವತಿಯಿಂದ ತೀರ್ಥರಾಮ ಹೊಸೊಳಿಕೆಯವರಿಗೆ ಕಿರಣ ಗೌರವ ಸನ್ಮಾನವು ಫೆ.೧೨ ರಂದು ಹೊಸೊಳಿಕೆ ಕಟ್ಟೆಮನೆ ತರವಾಡು ಮನೆಯಲ್ಲಿ ನಡೆಯಿತು. ಕುಟುಂಬದ ಹಿರಿಯರಾದ ಮಾಧವ ಗೌಡ ಹೊಸೊಳಿಕೆ ಸನ್ಮಾನ ಕಾರ್ಯಕ್ರಮ ನಡೆಸಿದರು ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಕರ್ನಾಟಕ ಅರೆಭಾಷೆ ಅಕಾಡೆಮಿ ಸದಸ್ಯ ಎಕೆ ಹಿಮಕರ, ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ ವಳಲಂಬೆ ಅಧ್ಯಕ್ಷ ಕೇಶವ ಹೊಸೊಳಿಕೆ, ತರವಾಡು ಮನೆ ಯಜಮಾನ ಗಣಪಯ್ಯ ಹೊಸೊಳಿಕೆ ಉಪಸ್ಥಿತರಿದ್ದರು. ಕಿರಣ ರಂಗ ಅಧ್ಯಕ್ಷ ಯೋಗೀಶ ಹೊಸೊಳಿಕೆ ಸ್ವಾಗತಿಸಿ, ದಿನೇಶ್ ಹೊಸೊಳಿಕೆ ಪ್ರಾರ್ಥಿಸಿ ,ಸವಿತಾ ಹೊಸೊಳಿಕೆ ಸನ್ಮಾನಿತರನ್ನು ಪರಿಚಯಿಸಿ, ವೆಂಕಟ್ರಮಣ ಹೊಸೊಳಿಕೆ ಧನ್ಯವಾದವಿತ್ತರು, ಕಾರ್ಯಕ್ರಮವನ್ನು ಲವಕುಮಾರ್ ಹೊಸೊಳಿಕೆ ನಿರ್ವಹಿಸಿದರು. ಕುಟುಂಬದ ಸದಸ್ಯರು , ಸ್ಥಳೀಯರು ಉಪಸ್ಥಿತರಿದ್ದರು.

ಪಾರ್ಟಿ ಸಣ್ಣದಿರಲಿ , ದೊಡ್ಡದಿರಲಿ, ಎಲ್ಲಿಯೇ ಇರಲಿ ಸಂಗೀತದ ಜೊತೆಗೆ ಮನರಂಜಿಸಲು ಕರೆ ಮಾಡಿ : ೯೪೮೦೦೬೪೧೮೮

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.