Breaking News

ರಸ ಶಾಸ್ತ್ರ ಮತ್ತು ಭೈಷಜ್ಯ (ಎಮ್.ಡಿ) ಸ್ನಾತಕೋತ್ತರ ವಿಭಾಗದಲ್ಲಿ ಡಾ.ಸಲೀಮಾ ಬೆಳ್ಳಾರೆಗೆ ೯ನೇ ರ‍್ಯಾಂಕ್

ರಾಜೀವ ಗಾಂಧಿ ಆರೋಗ್ಯ ವಿ.ವಿ ನಡೆಸಿದ ೨೦೧೭_೨೦೧೮ನೇ ಸಾಲಿನ ರಸಶಾಸ್ತ್ರ ಮತ್ತು ಭೈಷಜ್ಯ (ಎಮ್.ಡಿ) ಸ್ನಾತಕೋತ್ತರ ವಿಭಾಗದ ಪರೀಕ್ಷೆಯಲ್ಲಿ ಆಳ್ವಾಸ್ ಆಯುರ್ವೇದ ಕಾಲೇಜ್ ವಿಧ್ಯಾರ್ಥಿನಿ ಡಾ. ಸಲೀಮ ಬೆಳ್ಳಾರೆ ರಾಜ್ಯಕ್ಕೆ ೯ನೇ ರ‍್ಯಾಂಕ್‌ನೊಂದಿಗೆ ತೇರ್ಗಡೆಯಾಗಿದ್ದಾರೆ. ಇವರು ಅಯ್ಯನಕಟ್ಟೆ ದ.ಕ.ಜಿ.ಪ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ವಿದ್ಯಾಭೋಧಿನಿ ಪ್ರೌಢ ಶಾಲೆ ಬಾಳಿಲದಲ್ಲಿ ಪ್ರೌಢ ಶಿಕ್ಷಣ, ವಿದ್ಯಾರಶ್ಮಿ ವಿದ್ಯಾಲಯ ಸವಣೂರಿನಲ್ಲಿ ಪದವಿಪೂರ್ವ ಶಿಕ್ಷಣದೊಂದಿಗೆ ಕನ್ನಡ ಮಾಧ್ಯಮಗಳಲ್ಲಿ ವಿದ್ಯಾಭ್ಯಾಸ ಪೂರೈಸಿದ್ದರು. ಉಡುಪಿಯ ಎಸ್.ಡಿ.ಎಮ್ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ಬಿ.ಎ.ಎಮ್.ಎಸ್ ಪದವಿಯನ್ನು ಪೂರೈಸಿದರು. ಇವರು ಬೆಳ್ಳಾರೆಯ ಮಹಮ್ಮದ್ ಟಿ.ಎ ಹಾಗೂ ಆಮಿನ ಟಿ.ಎ ದಂಪತಿಗಳ ಪುತ್ರಿ. ಡಾ. ಝೈನುದ್ದೀನ್ ಉಳ್ಳಾಲರವರ ಪತ್ನಿ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.