ತೊಡಿಕಾನ: ಮಹಾಶಿವರಾತ್ರಿ ಉತ್ಸವ- ದರ್ಶನ ಬಲಿ

ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಉತ್ಸವ ಹಾಗೂ ದರ್ಶನ ಬಲಿ, ಬಟ್ಟಲು ಕಾಣಿಕೆ ಫೆ. ೧೩ ಮತ್ತು ೧೪ರಂದು ನಡೆಯಿತು.
ಫೆ.೧೩ರಂದು ಮಹಾಶಿವರಾತ್ರಿ ಉತ್ಸವ ಪ್ರಯುಕ್ತ ವಿಶೇಷ ಪೂಜೆ ನಡೆಯಿತು. ಫೆ.೧೪ರಂದು ಬೆಳಿಗ್ಗೆ ದರ್ಶನ ಬಲಿ, ಬಟ್ಟಲು ಕಾಣಿಕೆ ನಡೆಯಿತು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಯು.ಕೆ ಕೇಶವ ಉಳುವಾರು, ಸದಸ್ಯರಾದ ಪಿ.ಬಿ. ದಿವಾಕರ ರೈ, ಸೋಮಶೇಖರ ಕೋಯಿಂಗಾಜೆ, ಕೆ.ಕೆ ಬಾಲಕೃಷ್ಣ ಕುಂಟುಕಾಡು, ಕೇಶವ ಪ್ರಸಾದ್ ತೊಡಿಕಾನ, ಮಾಲತಿ ಬೋಜಪ್ಪ, ಜಿ.ಪಂ ಸದಸ್ಯ ಹರೀಶ್ ಕಂಜಿಪಿಲಿ, ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಕಿಶೋರ್ ಕುಮಾರ್ ಉಳುವಾರು, ಮಾಜಿ ಸದಸ್ಯರಾದ ಕೆ.ಕೆ ನಾರಯಣ, ಶ್ರೀಮತಿ ಚಂದ್ರಕಲಾ ನಾರಾಯಣ, ಅರತೋಂಡು ಸೊಸೈಟಿಯ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಎ.ಪಿ.ಎಂ.ಸಿ ಉಪಾಧ್ಯಕ್ಷ ದೀಪಕ್ ಕುತ್ತಮೊಟ್ಟೆ, ನಿವೃತ್ತ ಪ್ರಾಂಶುಪಾಲ ಕೆ.ಆರ್ ಗಂಗಾಧರ್, ಪಿ.ಬಿ ಪ್ರಭಾಕರ ರೈ, ಪದ್ಮನಾಭ ಕುರುಂಜಿ, ತೀರ್ಥರಾಮ ಪರ್ನೋಜಿ, ನಾಗಪ್ಪ ಗೌಡ ಬಾಳೆಕಜೆ, ತಾ.ಪಂ ಸದಸ್ಯೆ ಪುಷ್ಪಾ ಮೇದಪ್ಪ. ವೆಂಕಟ್ರಮಣ ಭಟ್ ದೊಡ್ಡಡ್ಕ, ಮತ್ತಿತರರು ಇದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.