HomePage_Banner
HomePage_Banner
Breaking News

ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮೇದಿನಡ್ಕ ಶ್ರೀ ಮುತ್ತುಮಾರಿಯಮ್ಮ ದೇವಸ್ಥಾನಕ್ಕೆ ೧ ವರೆ ಲಕ್ಷ ದೇಣಿಗೆ

ಅಜ್ವಾವರ ಗ್ರಾಮದ ಮೇದಿನಡ್ಕ ಶ್ರೀ ಮುತ್ತುಮಾರಿಯಮ್ಮ ದೇವಸ್ಥಾನದ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ಕುಂಭಾಭಿಷೇಕವು ಫೆ.17 ರಿಂದ 19ರ ತನಕ ನಡೆಯಿತು.ಇದರ ಜೀರ್ಣೋದ್ಧಾರದ ಖರ್ಚಿಗೆ ಜಿ.ಪಂ.ಸದಸ್ಯ ನವೀನ್‌ಕುಮಾರ್ ರೈ, ನೇತೃತ್ವದಲ್ಲಿ ಧರ್ಮಸ್ಥಳ ಕ್ಷೇತ್ರಕ್ಕೆ ಹೋಗಿ ಮನವಿ ನೀಡಿದರು.ಇದಕ್ಕೆ ಸ್ಪದಿಸಿದ ವೀರೇಂದ್ರ ಹೆಗ್ಡೆಯವರು ಸುಳ್ಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಕಚೇರಿಗೆ ಚಕ್‌ನ್ನು ಕಳುಹಿಸಿ ಫೆ.೧೯ರಂದು ಸುಳ್ಯ ಯೋಜನಾಧಿಕಾರಿ ಸಂತೋಷ ಕುಮಾರ್ ರೈ ಮತ್ತು ಸಿಬ್ಬಂದಿಯವರೊಂದಿಗೆ ಶ್ರೀ ಮುತ್ತುಮಾರಿಯಮ್ಮ ದೇವಸ್ಥಾನಕ್ಕೆ ಹೋಗಿ ಚಕ್‌ನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ.ಜಿ.ಪ.ಸದಸ್ಯ ನವೀನ್ ಕುಮಾರ್ ರೈ, ಮಹೇಶ್ ಕುಮಾರ್ ರೈ, ಭಾಸ್ಕರ ಬಾಯಂಬು, ಮುತ್ತುಮಾರಿಯಮ್ಮ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ರಾಧಾಕೃಷ್ಣ ಮೇದಿನಡ್ಕ, ಕೋಶಾಧಿಕಾರಿ ವಿನೋದನ್ ಮೇದಿನಡ್ಕ, ಕಾರ್ಯದರ್ಶಿ ವಿನಾಯಕಮೂರ್ತಿ ಮೇದಿನಡ್ಕ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ದಯಾಳನ್ ಮೇದಿನಡ್ಕ, ಜಿರ್ಣೋದ್ಧಾರ ಸಮಿತಿ ಅಧ್ಯಕ್ಷ ವಿಘ್ನೇಶ್ವರ ಮೇದಿನಡ್ಕ, ಕೋಶಾಧಿಕಾರಿ ನವೀನ್ ಮೇದಿನಡ್ಕ, ಕಾರ್ಯದರ್ಶಿ ನಟೇಶನ್ ಮೇದಿನಡ್ಕ, ಜತೆ ಕಾರ್ಯದರ್ಶಿ ರಾಜಶೇಖರ ಮೇದಿನಡ್ಕ ಮತ್ತಿತರರು ಉಪಸ್ಥಿತರಿದ್ದರು.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.