HomePage_Banner
HomePage_Banner
HomePage_Banner
HomePage_Banner

ಕುಕ್ಕೆ ಸುಬ್ರಹ್ಮಣ್ಯ ಸವಾರಿ ಮಂಟಪದ ಬಳಿ ಭಾರಿ ಗಾತ್ರದ ಅಶ್ವತ ಮರ ಬಿದ್ದು ದುರ್ಘಟನೆ

ಇತಿಹಾಸ ಪ್ರಸಿದ್ಧ ನಾಗ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸವಾರಿ ಮಂಟಪದ ಬಳಿ ಹಳೇ ಕಾಲದ ಅಶ್ವತ ಮರದ ಭಾರೀ ಗಾತ್ರದ ಮರದ ಗೆಲ್ಲು ಮುರಿದು ಬಿದ್ದು ೫ಕಾರುಗಳು ತೀವ್ರವಾಗಿ ಜಖಂಗೊಂಡಿದೆ. ಈ ಘಟನೆಯಿಂದ ವಾಹನ ಮಾಲಕರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಇಂದು ಮಧ್ಯಾಹ್ನ  ಇದ್ದಕಿದ್ದಂತೆ ಹಳೇ ಮರದ ದೊಡ್ಡ ಕೊಂಬೆ ನೆಲಕ್ಕುರುಳಿದ್ದು, ಆ ಮರದ ಕೆಳಗಡೆ ಪಾರ್ಕಿಂಗ್ ಮಾಡಿದ್ದ ವಾಹನಗಳ ಮೇಲೆ ಬಿದ್ದಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸಂಭಂದಪಟ್ಟ ಸವಾರಿ ಮಟ್ಟಪದ ಬಳಿ ತುಂಬಾನೇ ಹಳೆದಾಗಿದ್ದ ಅಶ್ವತ ಮರವಿತ್ತು. ಸುಬ್ರಮ್ಮಣ್ಯ ದೇವಸ್ಥಾನಕ್ಕೆ ಬರುವ ಯಾಂತ್ರಿಕರು ಸವಾರಿ ಮಂಟಪದ ಇರುವ ವಿಶಾಲ ಮೈದಾನದಲ್ಲಿ ಗಾಡಿಗಳನ್ನು ಪಾರ್ಕ್ ಮಾಡಿ ದೇವಸ್ಥಾನಕ್ಕೆ ತೆಳುತ್ತಾರೆ. ಹೀಗೆ ಯಾಂತ್ರಿಕರು ಪಾರ್ಕ್ ಮಾಡಿದ ಗಾಡಿಯ ಮೇಲೆ ಈ ಭಾರಿ ಗಾತ್ರದ ಮರದ ರೆಂಬೆ ಬಿದ್ದಿದೆ. ಈ ವೇಳೆ ಗಾಡಿಯಲ್ಲಿ ಯಾರೂ ಇಲ್ಲದ ಕಾರಣ ಹೆಚ್ಚಿನ ಅಪಾಯ ತಪ್ಪಿದೆ. ಅಲ್ಲಿ ಸಾಮಾನ್ಯವಾಗಿ ಹೆಚ್ಚಿನ ಜನರು ಓಡಾಡುತ್ತಾರೆ. ಆದರೆ ಮರ ಬಿದ್ದ ಸಮಯ ದೇವಾಲಯದಲ್ಲಿ ಪೂಜೆ ಸಮಯವಾದ್ದರಿಂದ ಜನರ ಓಡಾಟ ವಿರಳವಾಗಿತ್ತು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.