HomePage_Banner
HomePage_Banner
HomePage_Banner
Breaking News

ಅಡಿಕೆ ನಿಷೇಧ ಭೀತಿ: ಸುಳ್ಯದಲ್ಲಿ ಕಾಂಗ್ರೆಸ್ ಪ್ರತಿಭಟನೆ

ಅಡಿಕೆಯಲ್ಲಿ ಕ್ಯಾನ್ಸರ್‌ಕಾರಕ ಅಂಶಗಳಿವೆ ಎಂದು ಕೇಂದ್ರ ಸರಕಾರ ಸುಪ್ರೀಂಕೋರ್ಟಿಗೆ ಹೇಳಿಕೆ ಸಲ್ಲಿಸಿ ಅಡಿಕೆ ನಿಷೇಧ ಭೀತಿ ಎದುರಾಗಿರುವುದನ್ನು ಖಂಡಿಸಿ ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸುಳ್ಯ ತಾಲೂಕು ಕಛೆರಿ ಎದುರು ಪ್ರತಿಭಟನೆ ನಡೆಯಿತು .

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್‌ಕುಮಾರ್, ಅಡಿಕೆ ನಿಷೇಧದ ಕುರಿತ ಕೇಂದ್ರ ಸರಕಾರದ ಸಚಿವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ ಎಂದು ನಮ್ಮ ಸಂಸದ ನಳಿನ್‌ಕುಮಾರ್ ಕಟೀಲ್ ಹೇಳಿದ್ದಾರೆ. ಸಂಸತ್ತಿನಲ್ಲಿ ಸಚಿವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲವೆಂದಾದರೆ ಮತ್ತೆ ಯಾವುದನ್ನು ಗಂಭೀರವಾಗಿ ಪರಿಗಣಿಸಬೇಕು ? ಎಂದು ಪ್ರಶ್ನಿಸಿದರು. ಇದೇ ಊರಿನ ಡಿ.ವಿ,ಸದಾನಂದ ಗೌಡರು ಅಂದು ಅಡಿಕೆಗಾಗಿ ಪಾದಯಾತ್ರೆ ನಡೆಸಿದರು. ಅವರ ಆಗಿನ ಅನುಕಂಪ ಈಗ ಯಾಕೆ ಇಲ್ಲ? ಶೋಭಾ ಕರಂದ್ಲಾಜೆ ಸೇರಿದಂತೆ ಸಂಸದರು ಸುಮ್ಮನಿರುವುದೇಕೆ? ಎಂದು ಪ್ರಶ್ನಿಸಿದರು.

ಕೆಪಿಸಿಸಿ ಕಾರ್ಯದರ್ಶಿ ಎಂ.ವೆಂಕಪ್ಪ ಗೌಡ ಮಾತನಾಡಿ, ಸಂಸತ್ತಿನಲ್ಲಿ ಈ ಅಂಶ ಪ್ರಕಟಗೊಂಡಾಗ ನಮ್ಮ ಸಂಸದರು ಡೊಂಬರಾಟ ಮಾಡಿಕೊಂಡಿದ್ದರೇ?, ಶೋಭಾ ಕರಂದ್ಲಾಜೆ ಡ್ಯಾನ್ಸ್ ಮಾಡಿಕೊಂಡಿದ್ದರೇ? ಈಗ ಈ ವಿಚಾರ ರೈತ ವಿರೋಧಿ ಎಂದು ಅನಿಸತೊಡಗಿದಾಗ ಬೀದಿ ನಾಟಕ ಮಾಡುತ್ತಿದ್ದಾರೆ. ಅಡಿಕೆ ಬೆಳೆಗಾರರಿಗೆ ರಕ್ಷಣೆ ಕೊಡದಿದ್ದರೆ ನಿಮ್ಮನ್ನು ಜನ ಈ ಭಾಗಕ್ಕೆ ಕಾಲಿಡಲೂ ಬಿಡಲಾರರು ಎಂದರು. ಅಡಿಕೆ ಬೆಳೆಗಾರರ ಹಿತರಕ್ಷಣೆ ಕಾಯಬೇಕಾದ ಕ್ಯಾಂಪ್ಕೋ ರಿಯಲ್ ಎಸ್ಟೇಟ್ ಬ್ಯಸಿನೆಸ್ ಮಾಡುತ್ತಿದೆ ಎಂದು ಆರೋಪಿಸಿದ ಅವರು ರಾಹುಲ್ ಗಾಂಧಿ ಈ ಭಾಗಕ್ಕೆ ಬಂದಾಗ ಅವರ ಮೂಲಕ ಪ್ರಧಾನಿಯವರಿಗೆ ಮನವಿ ಸಲ್ಲಿಸುವುದಾಗಿ ಹೇಳಿದರು.
ದ.ಕ.ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಧನಂಜಯ ಅಡ್ಪಂಗಾಯ ಮಾತನಾಡಿ, ಈ ಹೋರಾಟ ರಾಜಕೀಯಕ್ಕಾಗಿ ಅಲ್ಲ. ನಮ್ಮ ಬದುಕಿಗಾಗಿ ಅನ್ನಭಾಗ್ಯದ ಹೆಸರಿನಲ್ಲಿ ಸಿದ್ರಾಮಯ್ಯ ರೈತರಿಗೆ ಅಕ್ಕಿ ನೀಡುತ್ತಿದ್ದರೆ ನರೇಂದ್ರ ಮೋದಿಯವರು ಅದೇ ಅಕ್ಕಿಯನ್ನು ಮುಷ್ಟಿ ಅಕ್ಕಿಯ ಹೆಸರಿನಲ್ಲಿ ರೈತರಿಂದ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜಯಪ್ರಕಾಶ್ ರೈ ಸ್ವಾಗತಿಸಿ, ಕಿಸಾನ್ ಘಟಕದ ಶಿವರಾಮ ರೈ ವಂದಿಸಿದರು.
ಕೆಪಿಸಿಸಿ ಕಾರ್ಯದರ್ಶಿ ಭರತ್ ಮುಂಡೋಡಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಕೋಲ್ಚಾರ್, ಯುವ ಕಾಂಗ್ರೆಸ್ ಅಧ್ಯಕ್ಷ ಸಿದ್ದಿಕ್ ಕೊಕ್ಕೋ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಜಿ.ಕೆ.ಹಮೀದ್, ಕಾಂಗ್ರೆಸ್ ಮುಖಂಡರಾದ ಎಸ್.ಸಂಶುದ್ದೀನ್, ಮಹಮ್ಮದ್ ಕುಂಞಿ ಗೂನಡ್ಕ, ಅಶೋಕ್ ಚೂಂತಾರು, ಕೆ.ಎಂ.ಮುಸ್ತಪಾ,ಕೃಷ್ಣಪ್ಪ ಗೌಡ ನೆಕ್ರೆಪ್ಪಾಡಿ, ಅನಿಲ್ ರೈ ಬೆಳ್ಳಾರೆ, ಚಂದ್ರಲಿಂಗಂ, ಡಾ.ರಘು, ಸುಧೀರ್ ರೈ ಮೇನಾಲ, ಮೋಹನಿ ಪೆಲತ್ತಡ್ಕ, ಅಶೋಕ್ ನೆಕ್ರಾಜೆ, ಸೋಮಶೇಖರ ಕೊಯಿಂಗಾಜೆ, ರಾಜಾರಾಂ ಬೆಟ್ಟ, ಶಿವಕುಮಾರ್ ಕೌಡಿಚ್ಚಾರ್, ದಿನೇಶ್ ಅಂಬೆಕಲ್ಲು, ಶಿವಕುಮಾರ್ ಕಂದಡ್ಕ, ಲೀಲಾ ಮನಮೋಹನ್, ಇಸ್ಮಾಯಿಲ್ ಪಡ್ಪಿನಂಗಡಿ, ಲಕ್ಷ್ಮಣ ಬೊಳ್ಳಾಜೆ, ಅಬ್ದುಲ್ ಮಜೀದ್ ಜಾಲ್ಸೂರು, ತೀರ್ಥರಾಮ ಪರ್ನೋಜಿ, ಚಂದ್ರಶೇಖರ ನರಿಯೂರು, ಪ್ರಸಾದ್ ರೈ ಮೇನಾಲ, ರಾಹುಲ್ ಅಡ್ಪಂಗಾಯ, ಕಾಂತಿಮೋಹನ್, ಪ್ರವೀಣಾ ರೈ ಮರುವಂಜ, ಮೂಸಾಕುಂಞಿ ಪೈಂಬೆಚ್ಚಾಲ್, ತೀರ್ಥರಾಮ ಜಾಲ್ಸೂರು, ಪ್ರಶಾಂತ್ ರೈ ಮರುವಂಜ, ಸುರೇಶ್ ಅಮೈ, ತೇಜಕುಮಾರ್ ಬಡ್ಡಡ್ಕ, ನಂದರಾಜ್ ಸಂಕೇಶ, ಭವಾನಿಶಂಕರ ಕಲ್ಮಡ್ಕ, ಲಕ್ಷಣ ಶೆಣೈ, ಜಯಪ್ರಕಾಶ್ ನೆಕ್ರೆಪ್ಪಾಡಿ, ಸತ್ಯಕುಮಾರ್ ಆಡಿಂಜ, ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.