HomePage_Banner
HomePage_Banner
HomePage_Banner
HomePage_Banner

ದೇರಾಜೆ ಶ್ರೀ ಮಲೆಉಳ್ಳಾಕುಲು ಮತ್ತು ಧರ್ಮದೈವ ,ವಿಷ್ಣುಮೂರ್ತಿ ದೈವಸ್ಥಾನದ ನವೀಕರಣ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ


ಸುಮಾರು ೩೦೦ ವರ್ಷಗಳ ಇತಿಹಾಸವಿರುವ ೪೦ ಕುಟುಂಬಗಳನ್ನು ಹೊಂದಿರುವ ನೂರು ವರ್ಷಗಳಿಂದ ಆರಾಧಿಸುತ್ತಿರುವ ಶ್ರೀ ವೆಂಕ್ರಟಮಣ ದೇವರ ಮುಡಿಪು, ಶ್ರೀ ಮಲೆಉಳ್ಳಾಕುಲು ಮತ್ತು ಧರ್ಮದೈವ ,ವಿಷ್ಣುಮೂರ್ತಿ ದೈವಸ್ಥಾನ, ನಾಗನಕಟ್ಟೆಗಳು, ಗುಳಿಗ ,ಪಂಜುರ್ಲಿ,ಕುಪ್ಪೆಪಂಜುರ್ಲಿ, ಮೊದಲಾದ ದೈವ ಮತ್ತು ದೇವಸ್ಥಾನದ ನವೀಕರಣ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಮಾ.೬ ರಿಂದ ೯ರ ತನಕ ನಡೆಯಿತು. ದೈವಜ್ಞರಾದ ಶ್ರೀ ಸುಬ್ರಹ್ಮಣ್ಯ ಭಟ್, ಚೇಕೋಡು, ವಾಸ್ತು ತಜ್ಞರು ಶ್ರೀ ಕೃಷ್ಣ ಪ್ರಸಾದ್ ಮುನಿಯಂಗಳ, ದಾರುಶಿಲ್ಪಿ ಶ್ರೀ ವೆಂಕಟ್ರಮಣ ಆಚಾರ್ಯ ಮರ್ಕಂಜ, ಕುಟುಂಬದ ಹಿರಿಯ ಬಾಲಣ್ಣ ಗೌಡ ದೇರಾಜೆ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಕೇಪಣ್ಣ ಗೌಡ ದೇರಾಜೆ, ಇವರ ನೇತೃತ್ವದಲ್ಲಿ ದೇರಾಜೆ ಗುಂಡ್ಲ, ಇರ್ಣೆ, ಕಳುಬೈಲು ಹತ್ತು ಸಮಸ್ತ ಸಂಮುಖದಲ್ಲಿ ಮಾ.೬ರಂದು ಬೆಳಿಗ್ಗೆ ಉಗ್ರಾಣ ತುಂಬಿಸುವ ಕಾರ್ಯಕ್ರಮ ನಡೆಯಿತು. .ಸಂಜೆ ತಂತ್ರಿವರ್ಯರ ಆಗಮನ,ರಾತ್ರಿ ಸಾಮೂಹಿಕ ಪ್ರಾರ್ಥನೆ, ಆಚಾರ್ಯವರಣ, ಪುಣ್ಯಾಹ, ಪ್ರಾಸಾದಶುದ್ಧಿ, ರಕ್ಷೆಘ್ನಹೋಮ, ವಾಸ್ತುಹೋಮ, ವಾಸ್ತು ಬಲಿ ನಡೆಯಿತು. ಮಾ.೭ ರಂದು ತ್ರಿಕಾಲಪೂಜೆ, ಗಣಹೋಮ, ಸ್ಥಳ ಶುದ್ಧಿ, ಬಿಂಬ ಶುದ್ಧಿ, ಮಂಟಪ ಸಂಸ್ಕಾರ,ಕುಂಭೇಶ ಕರ್ಕರಿಪೂಜೆ,ಶಯ್ಯಾಪೂಜೆ, ಜೀವೋದ್ವಾಶನೆ, ಸಂಜೆ ಅಧಿವಾಸಹೋಮ, ಕಲಶಪೂಜೆ,ತ್ರಿಕಾಲ ಪೂಜೆ, ಜ್ಞಾನಾಧಿವಾಸವ, ಅಧಿವಾಸಪೂಜೆ, ಆಶ್ಲೇಷಬಲಿಪೂಜೆ ಮತ್ತು ಮಾ.೮ರಂದು ಬೆಳಿಗ್ಗೆ ಗಣಹೋಮ, ಶ್ರೀ ದೈವಗಳ ಪ್ರತಿಷ್ಠೆ, ಕಲಶಾಭಿಷೇಕ, ಮಹಾಪೂಜೆ,ಪ್ರಸಾದ ವಿತರಣೆ, ಶುದ್ಧಿ ಕರ್ಮಗಳು, ಹಾಗೂ ಮಾ.೯ ರಂದು ಗಣಹೋಮ, ನಾಗಪ್ರತಿಷ್ಠೆ, ಶ್ರೀ ದೈವಗಳ ಪ್ರತಿಷ್ಠೆ, ಕಲಶಾಭಿಷೇಕ,ಪ್ರಸಾದ ವಿತರಣೆ ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.