HomePage_Banner
HomePage_Banner
HomePage_Banner
Breaking News

ಅನೂಪ್ ಬಂಡಾರಿ ನಿರ್ದೇಶನದ ರಾಜರಥ ಸಿನಿಮಾದ ಸಾಂಗ್ ಸೂಪರ್ ಹಿಟ್: ಸುಳ್ಯದವರೂ ಅಂತೂ ಈ ಸಾಂಗ್‌ನ ನೋಡಲೇಬೇಕು…… ಯಾಕೇಂದ್ರೆ ಈ ಸ್ಟೋರಿ ನೋಡಿ

ಈ ವರ್ಷದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ರಾಜರಥ ಚಿತ್ರದ ವಿಡಿಯೋ ಸಾಂಗ್ ಬಿಡುಗಡೆ ಆಗಿದೆ. ಕನ್ನಡ ಹಾಗೂ ತೆಲುಗಿನಲ್ಲೂ ರಾಜರಥ ಚಿತ್ರ ಬಿಡುಗಡೆ ಆಗುತ್ತಿದ್ದು ಕನ್ನಡ ಮತ್ತು ತೆಲುಗು ಎರಡು ಭಾಷೆಯಲ್ಲಿ ವಿಡಿಯೋ ಸಾಂಗ್ ರಿಲೀಸ್ ಮಾಡಿದ್ದಾರೆ ನಿರ್ದೇಶಕ ಅನೂಪ್ ಬಂಡಾರಿ. ನಾಲ್ಕು ವರ್ಷದ ಲವ್ ಸ್ಟೋರಿಯನ್ನ ಕ್ಯೂಟ್ ಕಥೆಯನ್ನ ಹೇಳುವ ಈ ಹಾಡು ಲವ್ ಫೇಲ್ಯೂರ್ ಆಗಿರುವ ಹುಡುಗರು ನೊಡಲೇಬೇಕು.

 

ಅನೂಪ್ ಬಂಡಾರಿ ಬರೆದಿರುವ ಈ ಹಾಡಿಗೆ ನಕುಲ್ ಅಭಯಂಕರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಹೀರೋ ಎಂಟ್ರಿ ಹೇಗಿರಬೇಕು’ ಅಂತ ಪಾಠ ಮಾಡಿದ ನಿರೂಪ್ ಸುಂದರ ತಾಣಗಳಲ್ಲಿ ಹಾಡನ್ನ ಚಿತ್ರೀಕರಿಸಲಾಗಿದ್ದು ನಟಿ ಅವಂತಿಕಾ ಶೆಟ್ಟಿ ಹೊಸ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಾರೆ. ಕಾಲೇಜ್ ಡೇಸ್ ಹಾಡಿನ ಸಂಗೀತ ಕೂಡ ಕೇಳುಗರಿಗೆ ವಿಭಿನ್ನ ಅನ್ನಿಸುತ್ತೆ. ರಾಜರಥ ಚಿತ್ರದಿಂದ ಬಿಡುಗಡೆ ಆಗಿರುವ ಹಾಡು ಇಂಜನಿಯರಿಂಗ್ ವಿದ್ಯಾರ್ಥಿಯ ನಾಲ್ಕು ವರ್ಷದ ಲವ್ ಸ್ಟೋರಿ ಆಗಿದೆ. ಇದೇ ಕಾರಣದಿಂದ ಸ್ಯಾಂಡಲ್ ವುಡ್‌ನ ಕಾಲೇಜ್ ಕುಮಾರ ಅಂತಾನೇ ಫೇಮಸ್ ಆಗಿರುವ ಶಿವರಾಜ್ ಕುಮಾರ್ ಅವರಿಂದಲೇ ಈ ಹಾಡನ್ನ ಬಿಡುಗಡೆ ಮಾಡಿಸಿದೆ ಸಿನಿಮಾ ತಂಡ. ಸದ್ಯ ಚಿತ್ರೀಕರಣ ಮುಗಿಸಿರುವ ರಾಜರಥ ಚಿತ್ರತಂಡ ಆದಷ್ಟು ಬೇಗ ಸಿನಿಮಾವನ್ನ ಪ್ರೇಕ್ಷಕರ ಎದುರು ತರಲು ಸಿದ್ದತೆ ನಡೆಸಿದ್ದಾರೆ. ಸಾಕಷ್ಟು ಕುತೂಹಲಗಳೊಂದಿಗೆ ಬೆಳ್ಳೆತೆರೆಗೆ ಬರಲು ತಯಾರಾಗಿರುವ ಚಿತ್ರದ ಹಾಡು ಮಾತ್ರ ಎಲ್ಲರಿಗೂ ಮೆಚ್ಚುಗೆ ಆಗುವ ಲಕ್ಷಣಗಳು ಕಾಣುತ್ತಿದೆ.

ಸುಳ್ಯದವರೂ ಯಾಕೆ ನೋಡಬೇಕು?: ಹೌದು ಸುಳ್ಯದವರು ಈ ಸಿನಿಮಾವನ್ನು ನೋಡಲೆಬೇಕು ಯಾಕೆಂದ್ರೆ ಈ ಸಿನಿಮಾದ ಒಂದು ಸಾಂಗ್‌ನಲ್ಲಿ “ಸುಳ್ಯ ದಾಟಿ ಸಂಪಾಜೆ ಮಡಿಕೇರಿಲಿ ತಂಪಾದೆ”

ಅಂತಾ ಒಂದು ಲೈನ್ ಹಾಕಿ ಹಾಡಿದ್ದಾರೆ. ಮಡಿಕೇರಿಯ ಅಸುಪಾಸಿನಲ್ಲಿ ಈ ಸಿನಿಮಾದ ಚಿತ್ರೀಕರಣ ನಡೆದಿದೆ. ಈಗ ಸಾಂಗ್‌ನ್ನು ಸುಳ್ಯ ತಾಲೂಕಿನ ಹುಡುಗ ಹುಡುಗಿಯರು ತಮ್ಮ ವ್ಯಾಟ್ಸಪ್ ಸ್ಟೇಟಸ್ಸ್‌ನಲ್ಲಿ ಹಾಕಿ “ಸುಳ್ಯ ನಮ್ಮರೂ” ಅಂತಾ ಕೋಟ್ ಹಾಕಿ ಖುಷಿ ಪಡುತ್ತಿದ್ದಾರೆ. ಇನ್ನೂ ಈ ಸಾಂಗ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

 

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.