ಪರಶುರಾಮ ಸೃಷ್ಟಿಯ ಸಪ್ತ ಕ್ಷೇತ್ರಗಳಲ್ಲಿ ಒಂದಾದ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಬ್ರಹ್ಮ ರಥ ನೀಡಲು ಉದ್ಯಮಿ ಮುತ್ತಪ್ಪ ರೈ ಹಾಗೂ ಬಿಡದಿ ರಿಯಾಲಿಟಿ ವೆಂಚರ್ ಪಾಲುದಾರ ಅಜಿತ್ ಶೆಟ್ಟಿ ನಿರ್ಧರಿಸಿದ್ದಾರೆ.
ಜಂಟಿಯಾಗಿ ಎರಡೂವರೆ ಕೋಟಿ ಮೌಲ್ಯದ ಬ್ರಹ್ಮರಥವನ್ನು ದೇವಸ್ಥಾನಕ್ಕೆ ನೀಡಲು ನಿರ್ಧರಿಸಿದ್ದಾರೆ. ಗುರುವಾರ ಇಬ್ಬರೂ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳಿ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಇದಾದ ಬಳಿಕ ಬ್ರಹ್ಮರಥ ನೀಡುವುದಕ್ಕೆ ಎಲೆ ವೀಳ್ಯ ಸ್ವೀಕರಿಸಲಿದ್ದಾರೆ.
ಬಳಿಕ ಬ್ರಹ್ಮರಥ ಕೆತ್ತನೆಯ ಕಾರ್ಯ ಆರಂಭವಾಗಲಿದೆ. ಬ್ರಹ್ಮರಥವನ್ನ ರಾಷ್ಟ್ರ, ರಾಜ್ಯ, ಶಿಲ್ಪಕಲಾ ಅಕಾಡಮಿ ಪ್ರಶಸ್ತಿ ಪುರಸ್ಕೃತ, ರಾಷ್ಟ್ರೀಯ ಶಿಲ್ಪ ಗುರು ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿರುವ ಖ್ಯಾತ ಶಿಲ್ಪಿ, ಕುಂದಾಪುರ ತಾಲೂಕಿನ ಕೋಟಾದ ಶಿಲ್ಪಿ ಲಕ್ಷ್ಮೀ ನಾರಾಯಣ ಆಚಾರ್ಯರ ಉಸ್ತುವಾರಿಯಲ್ಲಿ ತಯಾರಿಸಲಾಗುತ್ತೆ. ರಥದ ಕೆತ್ತನೆಗೆ ದಾಂಡೇಲಿ ಅರಣ್ಯದಿಂದ ದೊಡ್ಡ ಮರ ತರಲಾಗತ್ತೆ. ಬ್ರಹ್ಮರಥ ೬೪.೧೦ ಅಡಿ ಉದ್ದ, ೧೮ ಅಡಿ ಅಗಲವಿರಲಿದೆ.
ಈ ಹಿಂದೆ ಮುತ್ತಪ್ಪ ರೈ ತಮ್ಮ ಗ್ರಾಮದ ದೇವರು ಪುತ್ತೂರು ಮಹಾಲಿಂಗೇಶ್ವರನಿಗೆ ೧ ಕೋಟಿ ಮೌಲ್ಯದ ಬ್ರಹ್ಮರಥವನ್ನು ಕೊಟ್ಟು ಗಮನ ಸೆಳೆದಿದ್ದರು. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೂ ಬ್ರಹ್ಮರಥ ಬೇಕೆಂಬ ಬೇಡಿಕೆ ಕಳೆದ ೧೦ ವರ್ಷಗಳಿಂದಲೂ ಇತ್ತು. ಈ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿ ಕೂಡ ಮನವಿ ಸಲ್ಲಿಸಿತ್ತು.
ಇದೀಗ ಮುತ್ತಪ್ಪ ರೈ ಮತ್ತು ಅಜಿತ್ ಶೆಟ್ಟಿ ಜಂಟಿಯಾಗಿ ಎರಡೂವರೆ ಕೋಟಿ ಮೌಲ್ಯದ ಬ್ರಹ್ಮರಥವನ್ನು ನೀಡಲು ಮುಂದಾಗಿದ್ದಾರೆ. ಮುತ್ತಪ್ಪ ರೈ ಈ ಹಿಂದೆ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ೧ಕೋಟಿ ರೂ ವೆಚ್ಚದ ಬ್ರಹ್ಮರಥವನ್ನು ತಮ್ಮ ಸ್ವಂತ ಖರ್ಚಿನಲ್ಲಿ ನಿರ್ಮಿಸಿ ದೇವಸ್ಥಾನಕ್ಕೆ ನೀಡಿದ್ದರು. ಇದೀಗ ಕುಕ್ಕೆ ಸುಬ್ರಹ್ಮಣ್ಯಕ್ಕೆ ನೀಡಲಿದ್ದಾರೆ.
Super….. Jai mutthappanna…….. He is the one who living for to help others…………we proud he is our (jayakarnataka) founder president .lv u muthappanaa
NYC Anna muthapanna