ರಾಕೆಟ್ ತಂತ್ರಜ್ಞಾನದ ಬಗ್ಗೆ ಉನ್ನತ ವ್ಯಾಸಂಗಕ್ಕಾಗಿ ಎಣ್ಮೂರು ಗ್ರಾಮದ ಅಲೆಂಗಾರಗುತ್ತು ನಿವಾಸಿ ಅಭಿರಾಮ್ ರೈ ಕೋಟೆದಡಿಗುತ್ತುರವರು ಜರ್ಮನಿಯ ಬರ್ಲಿನ್ ಯುನಿವರ್ಸಿಟಿಗೆ ತೆರಳಲಿದ್ದಾರೆ.
ಎಣ್ಮೂರು ಗ್ರಾಮದ ಅಲೆಂಗಾರಗುತ್ತು ದಿ.ನಾರಾಯಣ ರೈಯವರ ಮೊಮ್ಮಗ, ಹಾಗೂ ಎಣ್ಮೂರು ಕಟ್ಟಬೀಡು ಕೆ.ಎನ್. ರಘುನಾಥ ರೈ ಹಾಗೂ ಶ್ರೀಮತಿ ಶೋಭಾ ಆರ್.ರೈ ಕೋಟೆದಡಿಗುತ್ತು ದಂಪತಿಯ ಪುತ್ರರಾಗಿರುವ ಅಭಿರಾಮ್ ರೈ ಕೆ. ಬೆಂಗಳೂರಿನ ಎಂ.ಎಸ್.ರಾಮಯ್ಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪೂರೈಸಿದ್ದು, ಎರಡು ವರ್ಷ ಮೈಸೂರಿನ ಇನ್ಫೋಸಿಸ್ ಸಂಸ್ಥೆಯಲ್ಲಿ ಏರೋಸ್ಪೇಸ್ ಡಿಪಾರ್ಟ್ಮೆಂಟ್ನಲ್ಲಿ ಕಾಸ್ಟಿಂಗ್ ಇಂಜಿನಿಯರ್ ಆಗಿದ್ದರು. ಇದೀಗ ರಾಕೆಟ್ ತಂತ್ರಜ್ಞಾನದ ಕುರಿತು ಉನ್ನತ ವ್ಯಾಸಂಗಕ್ಕಾಗಿ ಜರ್ಮನಿಯ ಟೆಕ್ನಿಕಲ್ ಯುನಿವರ್ಸಿಟಿ ಆಫ್ ಬರ್ಲಿನ್ನಲ್ಲಿ ಅವಕಾಶ ಪಡೆದಿದ್ದು, ೨ ವರ್ಷಗಳ ಮಾಸ್ಟರ್ ಇನ್ ಸ್ಪೇಸ್ ಇಂಜಿನಿಯರಿಂಗ್ ಕೋರ್ಸನ್ನು ಅವರು ಬರ್ಲಿನ್ ಯುನಿವರ್ಸಿಟಿಯಲ್ಲಿ ಮಾಡಲಿದ್ದಾರೆ.