ಗಾಂಧಿನಗರ ಮಾ.ಹಿ.ಪ್ರಾ.ಶಾಲೆಯಲ್ಲಿ ತೀರ್ಥರಾಮರಿಗೆ ಅಭಿನಂದನಾ ಕಾರ್ಯಕ್ರಮ

Advt_Headding_Middle
Advt_Headding_Middle

ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಕಸ್ತೂರಿ ಪುರಸ್ಕಾರ ಪಡೆದ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಯ ಪ್ರ. ದ. ಸಹಾಯಕರಾದ ತೀರ್ಥರಾಮರಿಗೆ ಅಭಿನಂದನಾ ಕಾರ್ಯಕ್ರಮವು ಮಾ. ೨೨ರಂದು ಸುಳ್ಯ ಗಾಂಧಿನಗರದ ಮಾ.ಹಿ.ಪ್ರಾ.ಶಾಲೆಯಲ್ಲಿ ನಡೆಯಿತು.

ಶಾಲಾ ಎಸ್‌ಡಿಎಂಸಿ ಅಧ್ಯಕ್ಷರಾದ ಅಬ್ದುಲ್ ಅಝೀಜ್ ಅಧ್ಯಕ್ಷತೆ ವಹಿಸಿದ್ದರು. ಗಾಂಧಿನಗರ ಸ.ಪ.ಪೂ. ಕಾಲೇಜಿನ ಸಹಶಿಕ್ಷಕರಾದ ಚಿನ್ನಪ್ಪ ಗೌಡ ಅಭಿನಂದನಾ ಕಾರ್ಯಕ್ರಮ ನಡೆಸಿಕೊಟ್ಟರು. ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಜೆ.ಕೆ.ರೈ, ಖಜಾಂಜಿ ಮೊದಿನ್ (ಫ್ಯಾನ್ಸಿ), ಶಿಕ್ಷಣ ಸಂಯೋಜಕರಾದ ಸೇರ ಕೋಟಿಯಪ್ಪ ಪೂಜಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಯ ಪ್ರಥಮ ದರ್ಜೆ ಸಹಾಯಕ ಶಿವಪ್ರಸಾದ್ ಕೆ.ವಿ., ಶಿಕ್ಷಕಿ ಹೇಮಾವತಿ ಬಿ. ಮಾತನಾಡಿ ಶುಭ ಹಾರೈಸಿದರು. ಅಭಿನಂದನೆ ಸ್ವೀಕರಿಸಿದ ತೀರ್ಥರಾಮರು ಕೃತಜ್ಞತೆ ಸಲ್ಲಿಸಿದರು. ಮುಖ್ಯ ಶಿಕ್ಷಕಿ ಶ್ರೀಮತಿ ಭವಾನಿ ಎ.ಜಿ. ಸ್ವಾಗತಿಸಿ, ಪರಿಚಯಿಸಿದರು.
ಈ ಸಂದರ್ಭದಲ್ಲಿ ಹಾಜಿ ಅಬೂಬಕ್ಕರ್ ಕಟ್ಟೆಕ್ಕಾರ್, ಎಸ್‌ಡಿಎಂಸಿ ಸದಸ್ಯರಾದ ಶ್ರೀಮತಿ ಭವಾನಿ, ಫೌಝಿಯಾ, ಮೈಮುನಾ, ಲಲಿತಾ ಪಿ.ಕೆ., ಶಿವಕುಮಾರ್, ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಶೋಭಾ, ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ದೇವರಾಜ್ ಕುದ್ಪಾಜೆ, ಶಿಕ್ಷಕಿಯರಾದ ಶ್ರೀಮತಿ ದೇವಮ್ಮ, ಶ್ರೀಮತಿ ಪುಷ್ಪಾವತಿ ಮೊದಲಾದವರು ಉಪಸ್ಥಿತರಿದ್ದರು. ಶಿಕ್ಷಕಿ ದಮಯಂತಿ ಕೆ. ವಂದಿಸಿದರು. ಶಿಕ್ಷಕಿಯರಾದ ಶ್ರೀಮತಿ ಜಯಶ್ರೀ ಎಂ.ಕೆ., ಶ್ರೀಮತಿ ರಾಜೇಶ್ವರಿ ಎಂ.ಪಿ. ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿ ವೃಂದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.