ಎ. ೯- ೧೦: ಬೆಳ್ಳಿಪ್ಪಾಡಿ -ದೇವರಗುಂಡ ತರವಾಡು ಮನೆಯಲ್ಲಿ ಧರ್ಮದೈವ ಮತ್ತು ಉಪದೈವಗಳ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ದೈವಗಳ ಧರ್ಮ ನಡಾವಳಿ

Advt_Headding_Middle
Advt_Headding_Middle

ಮಂಡೆಕೋಲು ಗ್ರಾಮದ ಬೆಳ್ಳಿಪ್ಪಾಡಿ -ದೇವರಗುಂಡ ತರವಾಡು ಮನೆಯಲ್ಲಿ ಎ. ೯ರಿಂದ ೧೦ರವರೆಗೆ ಧರ್ಮದೈವ ಹಾಗೂ ಉಪದೈವಗಳ ೯ನೇ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ದೈವಗಳ ಧರ್ಮ ನಡಾವಳಿಗಳು ನಡೆಯಲಿರುವುದು.

 


ಎ.೨ರಂದು ಪೂ. ೮-೦೦ಕ್ಕೆ ಗೊನೆ ಕಡಿಯುವುದು, ಎ. ೯ರಂದು ಪೂ. ೮-೦೦ರಿಂದ ಶ್ರೀ ಗಣಪತಿ ಹವನ, ಶುದ್ಧಿ ಕಲಶ, ನಾಗತಂಬಿಲ, ನಾಗದೇವರಿಗೆ ಅಭಿಷೇಕ, ಶ್ರೀ ವೆಂಕಟ್ರಮಣ ದೇವರ ಹರಿಸೇವೆ, ಪೂ. ೧೦-೩೦ರಿಂದ ಪ್ರತಿಷ್ಠಾ ವಾರ್ಷಿಕೋತ್ಸವ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿರುವುದು. ಸಂಜೆ ಘಂಟೆ ೫-೦೦ಕ್ಕೆ ಗುರುಕಾರ್ನೋರಿಗೆ ಬಡಿಸುವುದು ನಂತರ ಸಂಜೆ ೭-೦೦ಕ್ಕೆ ಭಂಡಾರ ತೆಗೆದು, ರಾತ್ರಿ ಘಂ.೮-೦೦ರಿಂದ ವರ್ಣಾರ ಪಂಜುರ್ಲಿ ದೈವದ ನಡಾವಳಿ, ಪಿಲಿಭೂತ ದೈವದ ನಡಾವಳಿ, ಪುರುಷ ಭೂತ ದೈವದ ನಡಾವಳಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿರುವುದು. ಎ. ೧೦ರಂದು ಪೂ. ೯-೦೦ರಿಂದ ರುದ್ರಚಾಮುಂಡಿ ದೈವದ ನಡಾವಳಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆದು, ಸಂಜೆ ಗಂ.೬-೦೦ರಿಂದ ಗುಳಿಗ ದೈವದ ನಡಾವಳಿ, ಕೊರತ್ತಿ ದೈವದ ನಡಾವಳಿ , ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿರುವುದು ಎಂದು ಕುಟುಂಬದ ಯಜಮಾನ ಬಿ.ಕೃಷ್ಣಪ್ಪ ಗೌಡರು ತಿಳಿಸಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.