ಸಿಹಿ ಸಂಗ್ರಹಿಸಲು ಬಂದವರು ಕಹಿ ಅನುಭವಿಸಿ ಪರಾರಿಯಾದರು

Advt_Headding_Middle
Advt_Headding_Middle


ಚೆಂಬು ಗ್ರಾಮದ ಊರುಬೈಲಿನ ಕೆಲವು ಪರಿಸರದಲ್ಲಿ ಕೇರಳ ಮೂಲದ ತಂಡವೊಂದು, ರಬ್ಬರ್ ತೋಟದಲ್ಲಿ ಅಲ್ಲಲ್ಲಿ ಜೇನು ಪೆಟ್ಟಿಗೆ ಇಟ್ಟು, ಜೇನು ಸಂಗ್ರಹಿಸುತ್ತಿದ್ದರು. ಕೆಲವು ಸಮಯದಿಂದ ಪಾನಮತ್ತರಾಗಿ ಊರುಬೈಲು ಸೇತುವೆ ಬಳಿ ಸ್ನಾನ ಮಾಡಿಕೊಂಡು, ಅತ್ತ ಇತ್ತ ಹೋಗುವ ಮಹಿಳೆಯರನ್ನು ಛೇಡಿಸುತ್ತಾ ಇದ್ದರು. ಇದನ್ನು ಎಪಿಎಂಸಿ ಸದಸ್ಯ ಎನ್.ಸಿ.ಅನಂತರ ಗಮನಕ್ಕೆ ತರಲಾಗಿತ್ತು. ಸ್ವಲ್ಪ ದಿನದ ಬಳಿಕ ಊರುಬೈಲಿನ ತಾಯಿ ಮಗಳಿಬ್ಬರು ಆಕ್ಟಿವಾದಲ್ಲಿ ಸಂಪಾಜೆ ಕಡೆ ಹೋಗುತ್ತಿದ್ದಾಗ ಈ ತಂಡ ಅಡ್ಡಗಟ್ಟಿ ಅವಾಚ್ಯವಾಗಿ ವರ್ತಿಸಿದರು. ಇದನ್ನು ಕೆಲವು ಜನರ ಗಮನಕ್ಕೆ ತರಲಾಯಿತು. ಎನ್.ಸಿ.ಅನಂತರು ಈ ಬಗ್ಗೆ ಹೊಳೆಯಲ್ಲಿ ಸ್ನಾನ ಮಾಡುತ್ತಿದ್ದ ಕೇರಳ ಮೂಲದ ವ್ಯಕ್ತಿಗಳಲ್ಲಿ ಕೇಳಿದರು. ಈ ಬಗ್ಗೆ ನಾವೇನು ಮಾಡಲಿಲ್ಲವೆಂದು ಅವರು ಹೇಳಿದರು. ಕೂಡಲೇ ದೂರಿತ್ತ ಮಹಿಳೆಯರನ್ನು ಕರೆಯಿಸಿ ಎದುರೆದುರು ಕೇಳಿದಾಗ ಇದೇ ವ್ಯಕ್ತಿಗಳು ಕೆಟ್ಟದಾಗಿ ವರ್ತಿಸಿದರೆಂದು ತಿಳಿಸಲಾಯಿತು. ಆ ತಂಡದವರಿಗೆ ಊರವರು ಮತ್ತು ಅನಂತರು ಹೊಡೆದರು. ಕೆಲವರು ಹಾರಿಬಿದ್ದು ತಮ್ಮ ಊರಿಗೆ ಹೋದರು. ಅವರು ಚಲಾಯಿಸುತ್ತಿದ್ದ ಬೈಕ್‌ಗಳನ್ನು ಎನ್.ಸಿ.ಅನಂತರ ಮನೆಯಲ್ಲಿ ತಂದು ಇರಿಸಲಾಯಿತು. ಮಾತುಕತೆಯಲ್ಲಿ ಈ ತಂಡವು ಪರಿಸರದಲ್ಲಿ ಎಲ್ಲಿಯೂ ನಿಲ್ಲಬಾರದೆಂದು ಹೇಳಲಾಯಿತು. ಅವರ ಬೈಕನ್ನು ಹಿಂತಿರುಗಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.