ಬಳ್ಪ: ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರೀ ದೇವಿಯ ಅದ್ಧೂರಿಯ ಬ್ರಹ್ಮರಥೋತ್ಸವ

Advt_Headding_Middle
Advt_Headding_Middle

ಬಳ್ಪ ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರೀ ದೆವಸ್ಥಾನದಲ್ಲಿ ಶ್ರೀ ಶೃಂಗೇರಿ ಶಾರದಾಪೀಠಾಧೀಶ್ವರ ಶ್ರೀ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಭಾರತೀ ತೀರ್ಥ ಮಹಾಸನ್ನಿಧಾನಂಗಳವರ ಹಾಗೂ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರ ಆಶೀರ್ವಾದಗಳೊಂದಿಗೆ ಕ್ಷೇತ್ರ ತಂತ್ರಿಗಳಾದ ಬ್ರಹ್ಮಶ್ರೀ ಪಾವಂಜೆ ವಾಗೀಶ ಶಾಸ್ತ್ರಿಯವರ ನೇತೃತ್ವದಲ್ಲಿ ಧೃಢಕಲಶ – ಬ್ರಹ್ಮರಥ ಸಮರ್ಪಣೆ – ಬ್ರಹ್ಮರಥೋತ್ಸವ ಕಾರ್ಯಕ್ರಮಗಳು ಏ. ೪ರಿಂದ ಏ. ೭ರ ತನಕ ಅದ್ದೂರಿಯಿಂದ ಜರಗಿತು.

ಏ. ೩ರಂದು ಸಂಜೆ ಹಸಿರು ಹೊರೆ ಕಾಣಿಕೆ ಸಮರ್ಪಣೆ, ಉಗ್ರಾಣ ತುಂಬಿಸುವ ಕಾರ್ಯ ನಡೆಯಿತು. ಏ. ೪ರಂದು ಪ್ರಾತಃ ದೇವತಾ ಪ್ರಾರ್ಥನೆ, ಶ್ರೀ ಗಣಪತಿ ಸನ್ನಿಧಿಯಲ್ಲಿ ನವಕಲಶ ಪ್ರತಿಷ್ಠಾ, ಅಧಿವಾಸ ಹೋಮ, ಕಲಶಾಭಿಷೇಕ, ಪ್ರಸನ್ನ ಪೂಜೆ ಹಾಗೂ ಶ್ರೀ ದೇವಿ ಸನ್ನಿಧಿಯಲ್ಲಿ ೪೯ ಕಲಶಪ್ರತಿಷ್ಠಾ, ಅಧಿವಾಸ ಹೋಮ, ದೃಢಕಲಶಾಭಿಷೇಕ, ಪ್ರಸನ್ನಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು. ರಾತ್ರಿ ದಾನಿಗಳು ಮತ್ತು ಭಕ್ತ ಜನರಿಂದ ಅಮ್ಮನವರಿಗೆ ಬ್ರಹ್ಮರಥ ಸಮರ್ಪಣೆ ಹಾಗೂ ಈಶ್ವರ ಮಂಗಲ ಹನುಮಗಿರಿ ಕ್ಷೇತ್ರದ ಆಡಳಿತ ಧರ್ಮದರ್ಶಿ ನನ್ಯ ಅಚ್ಚುತ ಮೂಡೆತ್ತಾಯರಿಂದ ಶ್ರೀ ಆಂಜನೇಯ ಸ್ವಾಮಿಗೆ ರಜತ ಕವಚ ಸಮರ್ಪಣೆ ನಡೆಯಿತು. ಏ. ೫ರಂದು ಪ್ರಾತಃ ಗಣಪತಿ ಹೋಮ, ನವಗ್ರಹಹೋಮ, ದುರ್ಗಾಹೋಮ, ಧ್ವಜಾರೋಹಣ, ನವಕಲಶಾಭಿಷೇಕ, ಮಹಾಪೂಜೆ, ಸಾಯಂಕಾಲ ಉತ್ಸವ ಬಲಿ, ಮಹಾರಂಗಪೂಜೆ, ಬಲಿರಥಾದಿವಾಸವಿಧಿ ನಡೆಯಿತು. ಏ. ೬ರಂದು ಪ್ರಾತಃ ತತ್ವಹೋಮ, ಕಲಶಾಭಿಷೇಕ, ಮಹಾಪೂಜೆ, ಶ್ರೀ ದೇವರ “ರಥಾರೋಹಣ” ನಡೆದು ರಾತ್ರಿ ಶ್ರೀ ತ್ರಿಶೂಲಿನಿ ಅಮ್ಮನವರ “ಬ್ರಹ್ಮರಥೋತ್ಸವ” ಸಿಡಿಮದ್ದು ಪ್ರದರ್ಶನ, ಉತ್ಸವ ಬಲಿ, ನಿತ್ಯಪೂಜೆ, ಶ್ರೀಭೂತಬಲಿ, ಶಯನೋತ್ಸವ ನಡೆಯಿತು. ಏ. ೭ರಂದು ಪ್ರಾತಃ ಸೂರ್ಯೋದಯಕ್ಕೆ ಕವಾಟೋದ್ಘಾಟನೆ, ಉತ್ಸವ ಬಲಿ, ದರ್ಶನಬಲಿ, ರಾಜಾಂಗಣ ಪ್ರಸಾದ, ತುಲಾಭಾರ ಸೇವೆ, ಸುವಾಸಿನಿ ಪೂಜೆ, ಕನ್ನಿಕಾ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಮಹಾಸಮಾರಾಧನೆ ಜರಗಿತು. ಸಾಯಂಕಾಲ ಅವಭೃತ ಯಾತ್ರೆ ಆರಂಭಗೊಂಡು (ಜಳಕ) ಕುಮಾರಧಾರಾ ನದಿಗೆ ದೇವರ ಸವಾರಿ ಕಟ್ಟೆಪೂಜೆಗಳು, ಅವಭೃತೋತ್ಸವ, ಧ್ವಜಾವರೋಹಣ, ಸಂಪ್ರೋಕ್ಷಣ, ಮಂತ್ರಾಕ್ಷತೆಯೊಂದಿಗೆ ಉತ್ಸವ ಸಮಾಪನಗೊಂಡಿತು. ಏ. ೫ರಂದು ಸಂಜೆ ಕೋಟ ಮಹಾಜಗುತ್ತು ಯಕ್ಷಕೂಟ ಮಹಿಳಾ ವೇದಿಕೆ, ಮಂಗಲ್ಪಾಡಿ ಇವರಿಂದ ಯಕ್ಷಗಾನ ತಾಳಮದ್ದಳೆ “ಭಕ್ತ ಚಂದ್ರಹಾಸ”, ಏ.೬ರಂದು ಸಂಜೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.) ಪಂಜ ವಲಯದ ಒಕ್ಕ್ಕೂಟಗಳ ಸದಸ್ಯರಿಂದ ’ಸಾಂಸ್ಕೃತಿಕ ವೈವಿಧ್ಯ’ ನಡೆಯಿತು. ಏ. ೪ರಂದು ಮತ್ತು ಏ. ೬ರಂದು ಸಂಜೆ ಶ್ರೀ ಸಿದ್ಧಿವಿನಾಯಕ ಭಜನಾ ಮಂಡಳಿ ಸಂಪ್ಯಾಡಿ, ಬೀದಿಗುಡ್ಡೆ ಇದರ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು.

 ಕಿಕ್ಕಿರಿದ ಜನಸಂದಣಿಯ ಮಧ್ಯೆ ಶ್ರೀ ತ್ರಿಶೂಲಿನೀ ಅಮ್ಮನವರ ಈ ಶತಮಾನದ ಮೊದಲ ರಥೋತ್ಸವ ನಡೆಯಿತು.
ರಥೋತ್ಸವ ಸಂದರ್ಭದಲ್ಲಿ ಭಕ್ತರ ಉದ್ಘೋಷ ಮುಗಿಳು ಮುಟ್ಟಿತ್ತು.
ರಥೋತ್ಸವ ಹಿಂತಿರುಗಿ ಬಂದ ಬಳಿಕ ಸುಮಾರು ೪೫ ನಿಮಿಷಗಳಷ್ಟು ಕಾಲ ಸಿಡಿಮದ್ದು ಪ್ರದರ್ಶನ ನಡೆಯಿತು.
ರಥೋತ್ಸವದ ದಿನ ರಾತ್ರಿ ಅನ್ನ ಸಂತರ್ಪಣೆಯ ಬದಲಾಗಿ ಇಡ್ಲಿ, ಸಾಂಬಾರು, ಪಾಯಸ, ಅವಳಕ್ಕಿ, ರಸಾಯನ ನೀಡಲಾಯಿತು.
ರಥೋತ್ಸವವನ್ನು ಭಕ್ತರ ಅಪೇಕ್ಷೆ ಮೇರೆಗೆ ಬೀದಿಯುದ್ದಕ್ಕೂ ಎಳೆಯಲಾಯಿತು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.