HomePage_Banner
HomePage_Banner
HomePage_Banner
Breaking News

ಮರಿಯಾನೆಯನ್ನು ತಾಯಿಯಾನೆ ಜೊತೆ ಸೇರಿಸಲು ಅರಣ್ಯ ಇಲಾಖೆ ಸಿಬ್ಬಂದಿಗಳ ಹರಸಾಹಸ-ಕೊನೆಗೂ ತಾಯಿ ಮಡಿಲು ಸೇರದ ಮರಿ ಆನೆ:  ಸಕ್ರೆಬೈಲು ಆನೆ ಶಿಬರಕ್ಕೆ ಪಯಣಿಸಿದ ೬ತಿಂಗಳ ಮರಿಯಾನೆ-ವಿಡಿಯೋ

ಗುಂಪಿನಿಂದ ಬೇರೆಯಾಗಿದ್ದ ಮರಿಯಾನೆಯನ್ನು ತಾಯಿಯಾನೆಯೊಂದಿಗೆ ಸೇರಿಸುವ ಯತ್ನ ಕೊನೆಗೂ ಸಫಲವಾಗಿಲ್ಲ. ಮರಿ ಆನೆ ಅಸ್ವಸ್ಥವಾಗಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಸೂಚನೆಯಂತೆ ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲು ಆನೆ ಶಿಬಿರಕ್ಕೆ ಕೊಂಡೊಯ್ಯಲಾಗಿದೆ.
ಐದು ದಿನಗಳ ಹಿಂದೆ ಸುಳ್ಯ ಸಮೀಪದ ಭಸ್ಮಡ್ಕದ ಪಯಸ್ವಿನಿ ನದಿ ತಟಕ್ಕೆ ಬಂದಿದ್ದ ಆನೆಗಳ ಹಿಂಡು ರವಿವಾರ ಅರಣ್ಯದತ್ತ ಮರಳಿತ್ತು. ಆದರೆ ಅವುಗಳನ್ನು ಹಿಂಬಾಲಿಸಲಾಗದ


ಗಂಡು ಮರಿಯಾನೆ ನದಿ ತೀರದಲ್ಲೇ ಬಾಕಿಯಾಗಿತ್ತು.

ಮರಿಯಾನೆಯನ್ನು ಕುರುಂಜಿಕಾರ‍್ಸ್ ಫಾರ್ಮ್ಸ್‌ನ ತೋಟದಲ್ಲಿ ರಕ್ಷಿಸಿ ಪಶು ವೈದ್ಯರಿಂದ ಚಿಕಿತ್ಸೆ ನೀಡಲಾಗಿತ್ತು. ಆನೆಗಳ ಗುಂಪು ಮರಿಯಾನೆಯನ್ನು ಅರಸಿ ಬರಬಹುದು ಎಂದು ಸೋಮವಾರ ಮಧ್ಯಾಹ್ನ ತನಕ ಕಾದರೂ ಅವು ಬಾರದಿದ್ದರಿಂದ ಹಾಗೂ ಹಾಗೂ ಮರಿ ಆನೆ ತಾನಾಗಿ ಅರಣ್ಯದತ್ತ ತೆರಳುವಷ್ಟು ಆರೋಗ್ಯದಲ್ಲಿ ನಿರೀಕ್ಷಿತ ಚೇತರಿಕೆ ಕಂಡು ಬಾರದಿರುವ ಕಾರಣ ಸಕ್ರೆಬೈಲು ಶಿಬಿರಕ್ಕೆ ಕೊಂಡೊಯ್ಯಲಾಯಿತು.

ಸೋಮವಾರ ಬೆಳಗ್ಗೆ ಮರಿ ಆನೆಯನ್ನು ರೋಶನ್ ಅವರ ತೋಟದಲ್ಲಿ ಇರಿಸಿ ಸುಳ್ಯ ಪಶು ಇಲಾಖೆ ವೈದ್ಯಾಧಿಕಾರಿ ಡಾ| ನಿತಿನ್ ಪ್ರಭು ಅವರು ಚಿಕಿತ್ಸೆ ಮುಂದುವರಿಸಿದ್ದರು. ಆನೆ ದೇಹದಲ್ಲಿ ನೀರಿನಾಂಶ ಹೆಚ್ಚಳಕ್ಕೆ ಪೂರಕವಾಗಿ ವಿವಿಧ ದ್ರಾವಣಗಳ ಮಿಶ್ರಣದ ೧೨.೫ ಬಾಟಲ್ ಡ್ರಿಪ್ಸ್ ನೀಡಿದರು. ಸಂಜೆ ಸಕ್ರೆಬೈಲಿಗೆ ತೆರಳುವ ಮೊದಲು ಆನೆ ತಾನಾಗಿಯೇ ನೀರು ಕುಡಿಯುವಷ್ಟು ಆರೋಗ್ಯ ಸುಧಾರಿಸಿತ್ತು.

ನಮ್ಮ ವೆಬ್‌ಸೈಟ್‌ನಲ್ಲಿ  ಜಾಹೀರಾತು ಕೊಡಲು

ಸಂಪರ್ಕಿಸಿ: 9481872949

 

 

ನೀರಾಟವಾಡಿದ ಮರಿಯಾನೆ

ಮಧ್ಯಾಹ್ನದ ಅನಂತರ ಮರಿಯಾನೆ ದೇಹದಲ್ಲಿ ಸುಧಾರಣೆ ಕಂಡು ಬಂದಿತ್ತು. ತೋಟದಲ್ಲಿ ವೀಕ್ಷಣೆಗೆ ಬಂದಿದ್ದ ನೂರಾರು ಜನರನ್ನು ಕಂಡು ಆನೆ ತನ್ನ ಚೇಷ್ಟೆ ಪ್ರದರ್ಶಿಸಿತ್ತು. ಕೆಲವರು ಪೋಟೋ ತೆಗೆದು ಸಂಭ್ರಮಿಸಿದರು. ಮಿಕ್ಕವರು ಆನೆಯ ಸೊಂಡಿಲು ಸ್ಪರ್ಶಿಸಿ ಖುಷಿಪಟ್ಟರು. ಪೈಪು ಮೂಲಕ ದೇಹದ ಮೇಲೆ ನೀರು ಹಾಯಿಸಿದಾಗಲೂ ಮೈ ಒಡ್ಡಿ ಖುಷಿ ಪಟ್ಟಿತ್ತು. ಸ್ಪಿಂಕ್ಲರ್ ನೀರಿಗೆ ಸೊಂಡಿಲು ಒಡ್ಡಿ, ಕೆಲ ಕಾಲ ಆಟವಾಡಿತ್ತು.

ಫಿಕಫ್‌ನಲ್ಲಿ ಸಕ್ರೆಬೈಲಿಗೆ
ಸಂಜೆ ೫.೩೦ ರ ಹೊತ್ತಿಗೆ ಆನೆಯನ್ನು ಸಕ್ರೆಬೈಲ್ ಕ್ಯಾಂಪ್‌ಗೆ ಕೊಂಡೊಯ್ಯುವ ಸಿದ್ಧತೆ ಪೂರ್ಣಗೊಂಡಿತ್ತು. ಫಿಕಪ್ ವಾಹನದಲ್ಲಿ ಬೈಹುಲ್ ಮತ್ತು ಅಡಿಕೆ ಸಿಪ್ಪೆ ತುಂಬಿದ ಗೋಣಿ ಇರಿಸಿ, ಆನೆಗೆ ತೊಂದರೆ ಆಗದಂತೆ ಎಚ್ಚರಿಕೆ ವಹಿಸಲಾಗಿತ್ತು. ರವಿವಾರದಿಂದಲೇ ಆನೆಯೊಂದಿಗಿದ್ದ ಊರವರು, ಮೂರು ದಿನಗಳಿಂದ ನಿದ್ದೆಯಿಲ್ಲದೇ ಮರಿಯಾನೆ ರಕ್ಷಿಸಿದ ಅರಣ್ಯ ಇಲಾಖೆಯ ಸಿಬಂದಿ ಮರಿಯಾನೆ ತೆರಳುತ್ತಿರುವುದನ್ನು ಕಂಡು ಕಣ್ಣೀರು ಸುರಿಸಿದರು.

ಆತಂಕ ಕೊನೆಯಾಗಿಲ್ಲ
ಮರಿಯಾನೆ ಗುಂಪಿನೊಂದಿಗೆ ಸೇರದೆ ಇರುವ ಕಾರಣ ಹಿಂಡಾನೆ ಮರಳಿ ನದಿ ಕಡೆಗೆ ಬರುವ ಸಾಧ್ಯತೆ ಹೆಚ್ಚಿದ್ದು, ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ. ಅರಣ್ಯ ಇಲಾಖೆ ಸಿಬಂದಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ನದಿಗೆ ತಾಗಿಕೊಂಡಿರುವ ಮೇದಿನಡ್ಕ ರಕ್ಷಿತಾರಣ್ಯದಲ್ಲಿ ಹಿಂಡಾನೆ ಗುಂಪು ಘೀಳಿಡುತ್ತಿರುವ ಸದ್ದು ಕೇಳಿ ಬಂದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.