HomePage_Banner
HomePage_Banner

ಕಾಯರ್ತೋಡಿ: ಯುವ ಮತದಾರರ ಪ್ರತಿಜ್ಞೆ ಸ್ವೀಕಾರ ಮತ್ತು ಅಂಬೆಡ್ಕರ್ ಜನ್ಮಾ ದಿನಾಚರಣೆ ವಾರ್ಷಿಕ ಕ್ರೀಡಾಕೂಟ

ಕಾಯರ್ತೋಡಿ ಮಿತ್ರ ಬಳಗದ ವತಿಯಿಂದ ವಿಷು ಹಬ್ಬ ಅಂಬೆಡ್ಕರ್ ಜನ್ಮದಿನಾಚರಣೆ ಯುವ ಮತದಾರರ ಪ್ರತಿಜ್ಞೆ ಸ್ವೀಕಾರ ಹಾಗೂ ವಾರ್ಷಿಕ ಕ್ರೀಡಾಕೂಟ ಎ.೧೫ರಂದು ಕಾಯರ್ತೋಡಿ ಬೈಲಿನಲ್ಲಿ ನಡೆಯಿತು.
ಮಿತ್ರ ಬಳಗದ ಅಧ್ಯಕ್ಷ ದೇವಿಪ್ರಸಾದ್ ಜಿ.ಸಿ. ಅಧ್ಯಕ್ಷತೆ ವಹಿಸಿದ್ದರು. ಸ್ಥಾಪಕಾಧ್ಯಕ್ಷ ಶ್ರೀಧರರಾವ್ ಉದ್ಘಾಟಿಸಿ ಮಾತನಾಡಿದರು. ಮಿತ್ರ ಬಳಗದ ಪೂರ್ವಾಧ್ಯಕ್ಷ ಎ.ಟಿ. ಕುಸುಮಾಧರ ಮತದಾನದ ಪ್ರತಿಜ್ಞಾ ವಿಧಿ ಬೋಧಿಸಿದರು. ಶ್ರೀ.ಕ್ಷೇ.ಧ.ಗ್ರಾ.ಯೋಜನೆ ಗಾಂಧಿನಗರ ಒಕ್ಕೂಟದ ಅಧ್ಯಕ್ಷ ಶೀನಪ್ಪ ಪಡ್ರೆ ಉಪಸ್ಥಿತರಿದ್ದರು.
ಮಹೇಶ್ ಕುದ್ಪಾಜೆ ಸ್ವಾಗತಿಸಿ, ಜೀವನ್ ಕೆ ವಂದಿಸಿದರು. ದೇವರಾಜ ಕುದ್ಪಾಜೆ ಕಾರ್ಯಕ್ರಮ ನಿರೂಪಿಸಿದರು. ಈ ಬಳಿಕ ಕ್ರೀಡಾಕೂಟ ಕೂಟ ನಡೆಯಿತು.

About The Author

Related posts

1 Comment

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.