HomePage_Banner
HomePage_Banner

ಕೊಂಚ ಹೆಚ್ಚಿದ ತೆಂಗು, ಕೊಕ್ಕೋ ಬೆಲೆ- ಮಾರುಕಟ್ಟೆಯಲ್ಲಿ ಹೇಗಿದೆ ಬೇರೆ ಕೃಷಿ ಉತ್ಪನ್ನಗಳ ಧಾರಣೆ

ಕಳೆದ ಎರಡು ತಿಂಗಳುಗಳಿಂದ ಚಿಂತಾಜನಕ ಸ್ಥಿತಿಯಲ್ಲಿದ್ದ ಕೃಷಿ ಉತ್ಪನ್ನಗಳ ಧಾರಣೆ ಕಳೆದೊಂದು ವಾರದಲ್ಲಿ ಏರಿಳಿಕೆ ಕಂಡಿವೆ. ಅಡಿಕೆ, ತೆಂಗು, ಕೊಕ್ಕೋ ಕೊಂಚ ಏರುಮುಖ, ಕಾಳುಮೆಣಸು ಇಳಿಕೆ, ರಬ್ಬರ್ ಸ್ಥಿತಿ ಧಾರಣೆಯಲ್ಲಿ ಮುಂದುವರಿಯುತ್ತಿವೆ.

ಏರುಗತಿ ಕಾಣದ ಅಡಿಕೆ: 

ಹಿಂದಿನ ಶನಿವಾರ ೨೬೨ರೂ.ನಲ್ಲಿದ್ದ ಹಳೆ ಅಡಿಕೆ, ಈ ಶನಿವಾರ 265ರೂ.ಗೆ ಖರೀದಿಯಾಗಿದೆ. ಹೊಸ ಅಡಿಕೆ 220ರೂ.ನಲ್ಲಿ ಸ್ಥಿರವಾಗಿದೆ. ಸಾಮಾನ್ಯವಾಗಿ ಈ ಹೊತ್ತಿನಲ್ಲಿ ಧಾರಣೆ ಧಾರಣೆ ಏರಿಕೆ ಕಾಣಬೇಕಿತ್ತು ಆದರೆ ಮಾರುಕಟ್ಟೆ ಹಿಡಿತ ಬಿಗಿಯಾಗಿ ಇರುವುದರಿಂದ ಧಾರಣೆ ಚೇತರಿಕೆ ಹಾದಿ ಹಿಡಿಯುತ್ತಿಲ್ಲ, ಇದಕ್ಕೆ ಪೂರಕವಾಗಿ ಇಂಡೋನೇಷ್ಯಾ, ಥ್ಯಾಲಂಡ್, ಬರ್ಮಾ, ಶ್ರೀಲಂಕಾದಿಂದ ಈಗಲೂ ಅಡಿಕೆ ಆಮದಾಗುತ್ತಿವೆ ಎಂದೇ ಹೇಳಲಾಗುತ್ತಿದೆ. ಆದ್ದರಿಂದ ದೊಡ್ಡ ಪ್ರಮಾಣದಲ್ಲಿ ಧಾರಣೆ ಏರಿಕೆ ನಿರೀಕ್ಷಿಸುವುದು ಕಷ್ಟವೇ ಆಗಿದೆ. ಹಿಂದಿನ ವಾರ 25ರೂ.ಗೆ ಇಳಿಕೆಯಾಗಿದ ಕಾಳು ಮೆಣಸಿನ ಬೆಲೆ ಈ ವಾರ ಮತ್ತೆ ೫ರೂ ಕುಸಿತ ಕಂಡಿದೆ. ಕಾಳುಮೆಣಸು 320ರೂ.ಗೆ ಬಿಕರಿಯಾಗಿದೆ. ಹಿಂದಿನ ವರ್ಷ ಕಾಳುಮೆಣಸು ಬೆಲೆ 680ರೂ ವರೆಗೂ ತಲುಪಿದ್ದ ಧಾರಣೆ ಈ ಬಾರಿ ಅರ್ಧಾಂಶ ಕುಸಿತ ಕಂಡಿದೆ.

ಕೊಕ್ಕೋಗೆ ಕೆ.ಜಿ.ಗೆ 53ರೂ.

ಮುಂದಿನ ತಿಂಗಳು ಕೊಕ್ಕೋ ಸೀಸನ್ ಆದ ಕಾರಣ ಕೊಕ್ಕೋ ಧಾರಣೆಯಲ್ಲಿ ಏರಿಕೆ ಕಂಡುಬರುತ್ತಿದ್ದು 53ರೂ.ನಲ್ಲಿದ್ದ ಹಸಿ ಕೊಕ್ಕೋ 56ರೂ.ಗೆ ಖರೀದಿಯಾಗಿದೆ. ೫ರೂ ಏರಿಕೆ ಕಂಡಿರುವ ಒಣ ಕೊಕ್ಕೋ 175ರೂ. ತಲುಪಿದೆ. ಕೊಕ್ಕೋ ಬೆಳೆಗೆ ಒಣ ಹವೆ ಇದ್ದಷ್ಟು ಉತ್ತಮ. ಮಳೆ ಸುರಿದರೆ ಧಾರಣೆ ಮೇಲೆ ಹೊಡೆದ ಬೀಳುತ್ತದೆ. ಕೊಕ್ಕೋ ಬೆಲೆ ದೇಶೀಯವಾಗಿ ಏರುಮುಖವಾಗಿ ಸಾಗುವ ಸಾಧ್ಯತೆ ಹೆಚ್ಚಿದೆ.

ಗೇರುಬೀಜ ದರ ಕುಸಿತ:

ಈಗ ಗೇರುಬೀಜದ ಸೀಸನ್ ಫಸಲು ಕೈಗೆ ಸಿಗುತ್ತಿದ್ದಂತೆ ಮಾರುಕಟ್ಟೆ ಹಾದಿ ಹಿಡಿಯುವವರು ಅಧಿಕ. ಈ ಕಾರಣಕ್ಕಾಗಿಯೇ ಗೊತ್ತಿಲ್ಲ 142ರೂ.ನಿಂದ 150ರೂ.ವರೆಗೆ ಬೆಲೆ ಕುದುರಿಸುತ್ತಿದ್ದ ಗೇರುಬೀಜ, ಈ ಶನಿವಾರ 135ರೂ.ಗೆ ಕುಸಿದಿದೆ.

ರಬ್ಬರ್ : ಸಣ್ಣ ಪ್ರಮಾಣದ ಏರಿಕೆ

ಐವತ್ತು ಪೈಸೆ ಕುಸಿತ ಕಂಡಿರುವ ರಬ್ಬರ್ ಆರ್.ಎಸ್.ಎಸ್.4ಧಾರಣೆ ಶನಿವಾರ 116.5ರೂ.ಗೆ ಕುಸಿತವಾಗಿದೆ. 108ರೂ.ನಲ್ಲಿದ್ದ ಲಾಟ್ ಶ್ರೇಣಿ, ಈ ವಾರ 108.5ರೂ.ಗೆ ಏರಿಕೆಯಾಗಿದೆ. 5ರೂ ಕುಸಿತ ಕಂಡಿರುವ ಸ್ಕ್ಯಾಪ್ 2ದರ 66.ರೂ.ಗೆ ಖರೀದಿ ನಡೆಸಿದೆ. ಆರ್.ಎಸ್.ಎಸ್. 5ದರ 112ರೂ, ಸ್ಕ್ಯಾಪ್ 1ಧಾರಣೆ 75ರೂ.ನಲ್ಲಿ ಸ್ಥರವಾಗಿದೆ. ರಬ್ಬರ್ ಧಾರಣೆ ಏರಿಕೆ ಹಾದಿ ಹಿಡಿಯುವುದು ಕಷ್ಟವೇ ಸರಿ ಆದರೂ ಇರುವ ಧಾರಣೆಯಲ್ಲಿ ಸಣ್ಣ ಪ್ರಮಾಣದ ಏರಿಳಿಕೆ ದಾಖಲಾಗುತ್ತಿವೆ.

ತೆಂಗಿನಕಾಯಿ ಧಾರಣೆ ಏರಿಳಿತ: 
ಹಿಂದಿನ ವಾರ ಇಳಿಕೆಯಾಗಿದ್ದ ತೆಂಗು ಧಾರಣೆ ಈ ಬಾರಿ ಕೊಂಚ ಏರಿಕೆ ಕಂಡಿದೆ. 41ರೂ.ನಲ್ಲಿದ್ದ ಧಾರಣೆ ಹಿಂದಿನ ಶನಿವಾರ 39ರೂ.ಗೆ ಖರೀದಿಯಾಗಿತ್ತು. ಈ ಶನಿವಾರ ಮತ್ತೆ 41ರೂ.ಗೆ ತಲುಪಿದೆ. ಹಿಂದಿನ ವರ್ಷಕ್ಕಿಂತ ಈ ವರ್ಷ ತೆಂಗಿನಕಾಯಿಗೆ ಉತ್ತಮ ಬೆಲೆ ಚಾಲ್ತಿಯಲ್ಲಿದೆ.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.