’ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ’ ಕುರಿತ ಸಿನಿಮಾ ’ಕಾನೂರಾಯಣ’ ಇಂದು ರಾಜ್ಯಾದ್ಯಾಂತ ತೆರೆ ಕಂಡಿದೆ. ಸುಳ್ಯದ ಸಂತೋಷ್ ಥಿಯೇಟರ್ನಲ್ಲಿ ಕೂಡಾ ಈ ಸಿನಿಮಾ ಪ್ರಸಾರವಾಗಲಿದ್ದು,
ಚೆನ್ನಕೇಶವ ದೇವಾಲಯದ ಮೊಕ್ತೇಸರ ಹರಪ್ರಸಾದ್ ತುದಿಯಡ್ಕರವರಿಂದ ಸಿನಿಮಾಕ್ಕೆ ಚಾಲನೆ ದೊರೆಯಿತು. ಈ ವೇಳೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಸೀತರಾಮ ಶೆಟ್ಟಿ, ಯೋಜನಾಧಿಕಾರಿ ಸಂತೋಷ್ ಹಾಗೂ ಎಲ್ಲಾ ಗ್ರಾಮಭಿವೃದ್ಧಿ ಯೋಜನೆಯ ಪಧಾದಿಕಾರಿಗಳು ಉಪಸ್ಥಿತರಿದ್ದರು.