HomePage_Banner
HomePage_Banner
Breaking News

ಈ ಬಾರಿಯ ಚುನಾವಣೆಯಲ್ಲಿ ಆದಿ ದ್ರಾವಿಡ ಸಮುದಾಯದವರು ಅವರವರ ಪಕ್ಷದ ಅಭ್ಯರ್ಥಿ ಪರ ಮತ ಚಲಾಯಿಸಬಹುದು

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಆದಿ ದ್ರಾವಿಡ ಸಮುದಾಯದವರು ಅವರವರ ಪಕ್ಷದ ಅಭ್ಯರ್ಥಿಯ ಪರವಾಗಿ ಮತ ಚಲಾಯಿಸಬಹುದು ಹಾಗೂ ಮತಯಾಚನೆ ಮಾಡಬಹುದು ಎಂದು ಆದಿ ದ್ರಾವಿಡ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಬಾಬು ಕೆ.ಎಮ್. ಹಾಗೂ ಅಧ್ಯಕ್ಷ ಮೋನಪ್ಪ ರಾಜರಾಮ್ ಪುರ ಹೇಳಿದ್ದಾರೆ. ಎ.೨೭ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಟಿ ನಡೆಸಿದ ಅವರು ಈ ವಿಷಯ ತಿಳಿಸಿದರು.
ಇತ್ತೀಚಿಗೆ ನಾವು ಜಿಲ್ಲಾ ಸಂಘದ ಸೂಚನೆಯ ಮೇರೆಗೆ ಪತ್ರಿಕಾಗೋಷ್ಟಿ ನಡೆಸಿ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಯ ಆಯ್ಕೆ ಸಂದರ್ಭ ಆದಿ ದ್ರಾವಿಡ ಸಮಾಜಕ್ಕೆ ಮನ್ನಣೆ ನೀಡದಿರುವುದನ್ನು ಹೇಳಿದ್ದೆವು. ಸೀಟು ನೀಡದ ಬೇಸರ ಈಗಲೂ ಇದೆ. 
ಜಿಲ್ಲಾ ಸಮಿತಿಯ ಸಭೆಯಲ್ಲಿ ಇತ್ತೀಚಿಗೆ ಚರ್ಚೆ ನಡೆದು ಈ ಭಾರೀ ಆದಿ ದ್ರಾವಿಡ ಸಮುದಾಯದವರೂ ಯಾವ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೋ ಆದೇ ಪಕ್ಷದ ಪರ ದುಡಿಯಬಹುದು ಎಂಬ ನಿರ್ಧಾರ ಮಾಡಲಾಯಿತು. ೨೦೨೩ ಇಸವಿಯಲ್ಲಿ ಅಭ್ಯರ್ಥಿಯ ಆಯ್ಕೆ ನಡೆಯುವಾಗ ಆದಿ ದ್ರಾವಿಡ ಸಂಘವನ್ನು ಗಣನೆಗೆ ತೆಗೆದುಕೊಳ್ಳುವಂತೆ ರಾಷ್ಟ್ರೀಯ ಪಕ್ಷಗಳನ್ನು ಕೇಳುವೆ ಎಂದು ಹಾಗೂ ಇದಕ್ಕಾಗಿ ೨೦೨೦ಲೇ ಜಿಲ್ಲಾ ಸಮಿತಿ ವತಿಯಿಂದ ವೇದಿಕೆಯನ್ನು ನಿರ್ಮಿಸಿಕೊಂಡು ಸಿದ್ಧತೆ ನಡೆಸಿಕೊಳ್ಳುವುದಾಗಿಯೂ ನಿರ್ಧರಿಸಲಾಗಿದೆ. ಜಿಲ್ಲಾ ಸಮಿತಿಯಲ್ಲಿ ಆದ ನಿರ್ಣಯದ ಪ್ರಕಾರ ಸುಳ್ಯದಲ್ಲಿ ಈ ಭಾರೀ ನಾವು ಕೆಲಸ ಮಾಡುತ್ತೇವೆ ಎಂದು ಬಾಬು ಕೆ.ಎಂ. ಹೇಳಿದರು.


ನಾವು ಶಾಸಕರ ವಿರೋಧಿಗಳಲ್ಲ
ಕಳೆದ ಪತ್ರಿಕಾಗೋಷ್ಟಿಯಲ್ಲಿ ಶಾಸಕ ಅಂಗಾರರ ಬಗ್ಗೆ ಬಾಯಿ ತಪ್ಪಿ ಕೆಲವು ವಿಚಾರಗಳನ್ನು ಮಾತನಾಡಿದ್ದೆವು ಅದಕ್ಕಾಗಿ ವಿಷಾದ ವ್ಯಕ್ತಪಡಿಸುತ್ತೇವೆ. ನಮ್ಮ ಶಾಸಕರು ತಾಲೂಕಿನಾದ್ಯಂತ ಕಾಲೋನಿಗಳ ರಸ್ತೆ, ಕಾಂಕ್ರೀಟಿಕರಣ, ಮೂಲಭೂತ ಸೌಕರ್ಯಗಳಾದ ನೀರು, ಮನೆ, ಶೌಚಾಲಯಗಳು, ಅಭಿವೃದ್ದಿಗೆ ಸಹಕಾರ ನೀಡಿದ್ದಾರೆ. ಮಹಮ್ಮಾಯಿ ದೇವರ ದೇವಸ್ಥಾನಗಳನ್ನು ಜೀರ್ಣೋದ್ದಾರ ಗೊಳಿಸಲು ಸಹಕರಿಸಿದ್ದಾರೆ ಎಂದು ಬಾಬು ಕೆ.ಎಮ್. ಹೇಳಿದರು.
ಅಂಬೇಡ್ಕರ್ ಭವನದ ಕುರಿತು ನೀಡಿದ ಹೇಳಿಕೆಯ ಕುರಿತು ಪತ್ರಕರ್ತರು ಪ್ರಶ್ನಿಸಿದಾಗ ಉತ್ತರಿಸಿದ ಬಾಬುರವರು ಬಾಯಿತಪ್ಪಿನಿಂದ ಆ ರೀತಿ ಹೇಳಿದ್ದೆವು. ಅದಕ್ಕೆ ಅನುದಾನದ ಕೊರತೆಯು ಇದೆ ಇತ್ತೀಚೆಗೆ ಸಮಾಜಕಲ್ಯಾಣ ಸಚಿವರು ಸುಳ್ಯಕ್ಕೆ ಬಂದಾಗ ಅನುದಾನ ಕೊಡುವುದಾಗಿ ಹೇಳಿದ್ದರು ಆದರೆ ಅವರು ಕೊಡಲಿಲ್ಲ ಎಂದು ಹೇಳಿದರು. ಇದರಲ್ಲಿ ರಾಜಕೀಯ ನಡೆದಿರಬಹುದು ಎಂದು ವಿಜಯ್ ಆಲಡ್ಕ ಹೇಳಿದರು. ಆಗ ಪತ್ರಿಕಾಗೋಷ್ಟಿಯಲ್ಲಿದ್ದ ಮೋನಪ್ಪ ರಾಜರಾಮ್ ಪುರರವರು ರಾಜಕೀಯ ನಡೆದಿಲ್ಲ ಶಾಸಕರು ಹೋಗಿರಲಿಕ್ಕಿಲ್ಲ ಎಂದು ಹೇಳಿದರು.

ನಮ್ಮ ಪಕ್ಷದವರೇ ಶಾಸಕರಾಗುತ್ತಾರೆ
ಈ ಭಾರೀಯ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಅಂಗಾರರವರು ೧೨೦೦೦ಕ್ಕೂ ಅಧಿಕ ಮತಗಳನ್ನು ಪಡೆದು ಗೆಲ್ಲುವುದು ಗ್ಯಾರಂಟಿ. ನಾವು ಕೂಡಾ ಈಗಾಗಲೇ ಫೀಲ್ಡ್‌ನಲ್ಲಿ ತೊಡಗಿಸಿಕೊಂಡಿದ್ದೇವೆ ಎಂದು ಬಾಬು ಹಾಗೂ ವಿಜಯ್ ಆಲಡ್ಕ ಹೇಳಿದರೆ, “ನಾವು ಕೂಡಾ ಡಾ.ರಘು ಅವರ ಪರ ಫೀಲ್ಡ್ ಮಾಡುತ್ತಿದ್ದೇವೆ ಹೋದಲೆಲ್ಲ ನಮ್ಮ ಪರ ಒಲವಿದೆ. ಜನರು ಬದಲಾವಣೆ ಬೇಕೆಂಬ ಮಾತನಾಡುತ್ತಿದ್ದಾರೆ. ಆದ್ದರಿಂದ ಡಾ.ರಘುರವರು ಅಂಗಾರರಿಗಿಂತ ಕನಿಷ್ಟ ೨೦೦೦ಸಾವಿರ ಮತವನ್ನಾದರೂ ಹೆಚ್ಚು ಪಡೆದು ಗೆಲ್ಲುವುದು ನಿಜ ಎಂದು ಮೋನಪ್ಪ ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ಮಲ್ಲೇಶ್ ಕುಡೆಕಲ್ಲು ಇದ್ದರು.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.