Breaking News

ಸಾಲ ಮನ್ನಾ ಅನುಷ್ಠಾನಗೊಂಡಿಲ್ಲ ಎಂದು ಸುಳ್ಳು ಹೇಳುವ ಬಿಜೆಪಿಗರಿಗೆ ಮತದಾರರು ಮುಂಬರುವ ಚುನಾವಣೆಯಲ್ಲಿ ಬುದ್ಧಿ ಕಲಿಸಲಿದ್ದಾರೆ- ವೆಂಕಪ್ಪ ಗೌಡ

Advt_Headding_Middle
Advt_Headding_Middle

ಭಾರತೀಯ ಜನತಾ ಪಾರ್ಟಿಯವರು ಮನೆ-ಮನೆಗೆ ನೀಡುತ್ತಿರುವ ಕರ ಪತ್ರದಲ್ಲಿ ಬಿಜೆಪಿಯಿಂದ ಸಾಮಾನ್ಯ ಮತದಾರರಿಗೆ ಏನು ಲಾಭವಾಗಿದೆ ಎಂದು ಹೇಳಲಾದ ಅಂಶಗಳಲ್ಲಿ ಜನಸಾಮಾನ್ಯರಿಗೆ ಮುಟ್ಟುವ ಯೋಜನೆ ಯಾವುದೂ ಇರುವುದಿಲ್ಲ. ಬದಲಾಗಿ ಹಿಂದಿನ ಕೇಂದ್ರ ಸರಕಾರ ಜಾರಿಗೆ ತಂದಿರುವ ರಾಷ್ಟ್ರೀಯ ಹೆದ್ದಾರಿಗಳ ಮುಂದುವರಿದ ಭಾಗದ ಮಂಜೂರಾತಿ ಆದೇಶಗಳು ತಮ್ಮದೆಂದು ಬಿಂಬಿಸಿಕೊಂಡಿದ್ದಾರೆ. ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರದಿಂದ ಯಾವ ಯಾವ ಇಲಾಖೆಗೆ ಮತ್ತು ಯಾವ ಯಾವ ಹಣಕಾಸು ಯೋಜನೆಯಡಿಯಲ್ಲಿ ರಾಜ್ಯದ ಪಾಲಿಗೆ ಸಂದಾಯವಾಗಬೇಕೋ ಅಂತಹ ಸಂದಾಯವಾಗಬೇಕಾದ ವಿವರಗಳನ್ನೇ ಈ ಜಿಲ್ಲೆಗೆ ಕೊಟ್ಟಿದ್ದೇವೆ ಮತ್ತು ಕೊಡುತ್ತಿದ್ದೇವೆ ಎಂದು ಮುದ್ರಿಸಿರುವುದನ್ನು ಬಿಟ್ಟರೆ ಈ ಚುನಾವಣೆಯಲ್ಲಿ ಈ ಜಿಲ್ಲೆಯ ಜನತೆ ಯಾಕೆ ಮತ ಕೊಡಬೇಕು ಎಂಬ ಸೂಚ್ಯವಾದ ವಿವರಗಳು ಇರುವುದಿಲ್ಲ. ಹಾಗಾಗಿ ಜನರಿಗೆ ವೈಯುಕ್ತಿಕವಾಗಿ ದೊರೆಯಲಾಗದ ಅಂಕಿ-ಅಂಶಗಳ ವಿವರಗಳಿಗಾಗಿ ಜನ-ಸಾಮಾನ್ಯರು ಈ ಬಾರಿ ಬಿಜೆಪಿಗೆ ಮತ ಹಾಕುವುದಿಲ್ಲ.
ಈ ಭಾರಿ ಕಾಂಗ್ರೆಸ್ ಸರಕಾರ ಪ್ರತಿಯೊಬ್ಬ ರೈತರಿಗೂ ರೂ. ೫೦,೦೦೦/-ಸಾಲ ಮನ್ನಾ ಮಾಡುವುದರ ಮೂಲಕ ರಾಜ್ಯದಲ್ಲಿ ರೂ. ೮,೧೬೫/- ಕೋಟಿ ಸಹಕಾರಿ ಸಂಘಗಳ ಸಾಲ ಮನ್ನಾ ಮಾಡಿದ್ದರೂ ಅದು ಅನುಷ್ಠಾನಗೊಂಡಿಲ್ಲವೆಂದು ಮೊಸರಿನಲ್ಲಿ ಕಲ್ಲು ಹುಡುಕುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ. ವಾಸ್ತವವಾಗಿ ಎಲ್ಲಾ ಸಹಕಾರಿ ಸಂಘಗಳಿಂದಲೂ ಸಾಲಗಾರರಿಗೆ ತಮ್ಮ ಸಾಲ ಸಂದಾಯ ಕುರಿತು ನೋಟೀಸು ನೀಡಲಾಗಿದ್ದು, ಅದರಲ್ಲಿ ರೂ. ೫೦,೦೦೦/- ಸಾಲ ಮನ್ನಾವಾಗಿದ್ದು, ಉಳಿಕೆ ಹಣವನ್ನು ಮರುಪಾವತಿ ಮಾಡುವಂತೆ ಬ್ಯಾಂಕಿನ ಕಾರ್ಯದರ್ಶಿಗಳು ನೋಟೀಸು ನೀಡಿರುವುದು ಬಿಜೆಪಿಯವರಿಗೆ ತಿಳಿದಿದ್ದರೂ ಸಾಲಗಾರರನ್ನು ಗೊಂದಲಕ್ಕೀಡು ಮಾಡುವರೇ ಸಾಲದ ಹಣ ಸಹಕಾರಿ ಸಂಘಗಳಿಗೆ ಬಂದಿಲ್ಲ ಎಂದು ಸುಳ್ಳು ಹೇಳತೊಡಗಿದ್ದಾರೆ. ಆದರೆ ವಾಸ್ತವಾಗಿ ನನ್ನ ಹೆಸರಿಗೆ ಸಹಕಾರಿ ಸಂಘದಿಂದ ನೀಡಲಾದ ನೋಟೀಸಿನಲ್ಲಿ ರೂ. ೫೦,೦೦೦/- ಸಾಲ ಮನ್ನಾ ಆಗಿದೆ ಎಂದು ತಿಳಿಸಿದ್ದು ಬಿಜೆಪಿಯವರಿಗೆ ತಿಳುವಳಿಕೆಯ ಕೊರತೆ ಇದ್ದರೆ ಸದ್ರಿ ನೋಟೀಸನ್ನು ಅವರಿಗೆ ನೀಡಲು ಸಿದ್ಧನಿರುತ್ತೇನೆ. ಎಂದು ಕೆಪಿಸಿಸಿ ಕಾರ್ಯದರ್ಶಿ ಎಂ. ವೆಂಕಪ್ಪ ಗೌಡ, ಸುಳ್ಯ ಇವರು ಪ್ರತಿಕ್ರ್ರಯಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.