ಬಿಎಸ್‌ಪಿ ಅಭ್ಯರ್ಥಿ ಪರ ಪೂರ್ಣ ಪ್ರಚಾರ: ಎಂ.ಬಿ.ಸದಾಶಿವ

Advt_Headding_Middle
Advt_Headding_Middle

ರಾಷ್ಟ್ರೀಯ ಮಟ್ಟದಲ್ಲಿ ಆದ ರಾಜಕೀಯ ಒಪ್ಪಂದದಂತೆ ಕರ್ನಾಟಕದ ಈ ಬಾರಿಯ ಚುನಾವಣೆಯನ್ನು ಜೆಡಿಎಸ್ ಹಾಗೂ ಬಿಎಸ್‌ಪಿ ಮೈತ್ರಿಯಾಗಿ ಎದುರಿಸಲಿದೆ. ರಾಜ್ಯದ 20 ವಿಧಾನಸಭಾ ಕ್ಷೇತ್ರಗಳನ್ನು ಜೆಡಿಎಸ್ ಬಿಎಸ್‌ಪಿಗೆ ಬಿಟ್ಟುಕೊಟ್ಟಿದೆ. ಅದರಲ್ಲಿ ಸುಳ್ಯವೂ ಒಂದು. ಈ ಬಾರಿಯ ಬಿಎಸ್‌ಪಿಯ ಅಭ್ಯರ್ಥಿ ಪರ ಜೆಡಿಎಸ್ ಪೂರ್ಣ ಪ್ರಮಾಣದಲ್ಲಿ ಪ್ರಚಾರದಲ್ಲಿ ತೊಡಗಿಸಿಕೊಳ್ಳಲಿದೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ.ಬಿ.ಸದಾಶಿವ ಹೇಳಿದ್ದಾರೆ.


ಸುಳ್ಯದ ಯುವಜನ ಸಂಯುಕ್ತ ಮಂಡಳಿಯಲ್ಲಿ ನಡೆದ ಉಭಯ ಪಕ್ಷಗಳ ಜಂಟಿ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದ ಈ ಬಾರಿಯ ಚುನಾವಣೆ ಅತ್ಯಂತ ಮಹತ್ವವಾದುದು. ೨ ರಾಜಕೀಯ ಪಕ್ಷಗಳು ಪರಸ್ಪರ ದೋಷಾರೋಪಣೆ ಮತ್ತು ದ್ವೇಷದ ರಾಜಕೀಯದಲ್ಲಿ ತೊಡಗಿದೆ. ಸ್ವಾಭಿಮಾನ ಮತ್ತು ದಲಿತರ ಧ್ವನಿಯಾಗಿರುವ ಬಿಎಸ್‌ಪಿಯೊಂದಿಗೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಇಲ್ಲಿ ಬಿಎಸ್‌ಪಿ ಅಭ್ಯರ್ಥಿಯ ವಿಜಯಕ್ಕೆ ಜೆಡಿಎಸ್ ಕಾರ್ಯಕರ್ತರು ಕೂಡಾ ಪೂರ್ಣ ಪ್ರಮಾಣದಲ್ಲಿ ದುಡಿಯುತ್ತೇವೆ ಎಂದು ಹೇಳಿದರು.
ನಾವು ಬಹಿರಂಗವಾಗಿ ದೊಡ್ಡ ದೊಡ್ಡ ಸಭೆಗಳನ್ನು ನಡೆಸುವುದಿಲ್ಲ. ಅದರ ಬದಲು ಗ್ರಾಮೀಣ ಪ್ರದೇಶಗಳಿಗೆ ತೆರಳಿ ಅದೃಶ್ಯ ಮತದಾರರ ಮನವೊಲಿಸುತ್ತೇವೆ. ಸುಳ್ಯದಲ್ಲಿ ಇರುವ ಸಮಸ್ಯೆಗಳನ್ನೂ ಇದುವರೆಗೆ ಇಲ್ಲಿನ ಶಾಸಕರಿಗೆ ಪರಿಹರಿಸಲಾಗಿಲ್ಲ. ಎರಡು ಪಕ್ಷಗಳ ನಾಯಕರುಗಳು ಉದ್ರೇಕಕಾರಿ ಭಾಷಣಗಳನ್ನು ಮಾತ್ರ ಮಾಡುತ್ತಾರೆ. ರೈತರ ಸಮಸ್ಯೆ, ಹಳದಿ ರೋಗ ಸಮಸ್ಯೆ, ಮರಳು ಸಮಸ್ಯೆ ಮೊದಲಾದ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಿ ಸ್ಪಂದಿಸುವ ಭರವಸೆ ನೀಡುತ್ತೇವೆ. ಶಾಂತಿಗೆ ಒತ್ತುನೀಡಿ ಪ್ರಗತಿಯ ಗುರಿಯೊಂದಿಗೆ ಮುನ್ನಡೆಯುತ್ತೇವೆ ಎಂದು ಎಂ.ಬಿ.ಸದಾಶಿವ ಹೇಳಿದರು.
ಬಿಎಸ್‌ಪಿ ರಾಜ್ಯ ಕಾರ್ಯದರ್ಶಿ ವೇಲಾಯುಧನ್ ಮಾತನಾಡಿ, ಜೆಡಿಎಸ್ ಪಕ್ಷದ ಪ್ರಣಾಳಿಕೆಗಳು ನಮ್ಮ ಆಶಯಕ್ಕೆ ಪೂರಕವಾಗಿಯೇ ಇದೆ. ೨ ಪಕ್ಷಗಳು ಸೇರಿ ಜನಪರವಾಗಿ ದುಡಿತ್ತೇವೆ. ಒಡೆದು ಅಧಿಕಾರ ಪಡೆಯುವ ಬದಲು ಕೆಲಸದ ಮೂಲಕ ಅಧಿಕಾರ ಪಡೆಯುತ್ತೇವೆ ಎಂದು ಹೇಳಿದರು.
ಪ್ರೊ. ವೆಂಕಟೇಶ್ ಟಿಕೆಟ್ ಆಕಾಂಕ್ಷಿಯಾಗಿದ್ದದ್ದು ನಿಜ. ಆದರೆ ನಮ್ಮಲ್ಲಿ ಅಭ್ಯರ್ಥಿಗಳ ಆಯ್ಕೆ ರಾಜ್ಯಮಟ್ಟದಲ್ಲಿ ನಡೆಯುತ್ತದೆ. ಅದರಂತೆ ರಘು ಧರ್ಮಸೇನಾ ಅವರಿಗೆ ಟಿಕೆಟ್ ನೀಡಲಾಗಿದೆ ಎಂದು ಪತ್ರಕರ್ತರ ಪ್ರಶ್ನೆಗೆ ವೇಲಾಯುಧನ್ ಉತ್ತರಿಸಿದರು. ವೆಂಕಟೇಶ್ ಅವರು ಜೆಡಿಎಸ್‌ಗೆ ರಾಜೀನಾಮೆ ನೀಡಿ ಬಿಎಸ್‌ಪಿ ಸದಸ್ಯತ್ವ ಸ್ವೀಕರಿಸುವ ಮುಂಚೆ ನಮ್ಮ ಯಾವ ನಾಯಕರಿಗೂ ಮಾಹಿತಿ ನೀಡಿಲ್ಲ ಎಂದು ಎಂ.ಬಿ.ಸದಾಶಿವ ಹೇಳಿದರು.
ಜೆಡಿಎಸ್ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಜಾಕೆ ಮಾಧವ ಗೌಡ, ತಾಲೂಕು ಅಧ್ಯಕ್ಷ ದಯಾಕರ ಆಳ್ವ, ಅಭ್ಯರ್ಥಿ ರಘು ಧರ್ಮಸೇನ, ಬಿಎಸ್‌ಪಿ ಜಿಲ್ಲಾಧ್ಯಕ್ಷ ಗೋಪಾಲ ಹೊತ್ತೂರು, ಜೆಡಿಎಸ್ ಮುಖಂಡರಾದ ಮಹಮ್ಮದ್ ಇಕ್ಬಾಲ್ ಎಲಿಮಲೆ, ಪಿ.ಎ.ಉಮ್ಮರ್, ಜ್ಯೋತಿ ಪ್ರೇಮಾನಂದ, ಜೀವನ್ ನಾರ್ಕೋಡು, ಸತ್ಯನಾರಾಯಣ ಚಿಮ್ಟಿಕಲ್ಲು, ಚೋಮ, ರಾಕೇಶ್ ಕುಂಟಿಕಾನ, ಬಿಎಸ್‌ಪಿ ಮುಖಂಡರಾದ ಗೋಪಾಲ್ ಪಡ್ಪಿನಂಗಡಿ, ನಾರಾಯಣ ಬೋದಿ, ಶಿವರಾಮ್, ಶಶಿಕಲಾ ಪತ್ರಿಕಾಗೋಷ್ಠಿಯಲ್ಲಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.