Breaking News

ಸುಳ್ಯದಲ್ಲಿ ಕಾಂಗ್ರೆಸ್ ಪರ ಡಿಕೆಶಿ ರೋಡ್ ಶೋ

Advt_Headding_Middle
Advt_Headding_Middle

ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ರಘು ಅವರ ಪರ ಮತ ಯಾಚನೆಗಾಗಿ ಮೇ.೨ರಂದು ಸುಳ್ಯ ನಗರದಲ್ಲಿ ರೋಡ್ ಶೋ ನಡೆಯಿತು. ಇದರಲ್ಲಿ ರಾಜ್ಯ ಇಂಧನ ಸಚಿವ ಹಾಗೂ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭಾಗವಹಿಸಿದ್ದರು. ೪.೩೦ಕ್ಕೆ ಆಗಮಿಸಬೇಕಾಗಿದ್ದ ಡಿಕೆಶಿ ೭.೩೦ಕ್ಕೆ ಆಗಮಿಸಿದ್ದರೂ ಕಾರ್ಯಕರ್ತರ ಉತ್ಸಾಹ ತಗ್ಗಿರಲಿಲ್ಲ. ಡಿಕೆಶಿಯವರೊಂದಿಗೆ ಅಭ್ಯರ್ಥಿ ರಘು, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಧನಂಜಯ ಅಡ್ಪಂಗಾಯ ಮೊದಲಾದವರು ತೆರೆದ ಜೀಪಿನಲ್ಲಿ ಸಂಚರಿಸಿ ಜನರತ್ತ ಕೈಬೀಸಿದರು. ಸಿಂಗಾರಿಮೇಳ ರೋಡ್ ಶೋಗೆ ಆಕರ್ಷಣೆ ನೀಡಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.