ಏನೆಕಲ್ಲು ಮಾದನಮನೆ ಮಲ್ಲಾರ ಮನೆ ಕುಟುಂಬದ ಧರ್ಮದೈವ,ಪರಿವಾರ ದೈವಗಳ ಪುನರ್ ಪ್ರತಿಷ್ಠೆ ಬ್ರಹ್ಮಕಲಶಾಭಿಷೇಕವು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಮೇ ೧ ಮತ್ತು ೨ ರಂದು ವಿಜೃಂಭಣೆಯಿಂದ ನಡೆಯಿತು.
ಈ ಸಂದರ್ಭದಲ್ಲಿ ಕುಟುಂಬ ದೈವಗಳ ಆಡಳಿತ ಮಂಡಳಿಯ ಗೌರವಾಧ್ಯಕ್ಷ ರುಕ್ಮಯ್ಯ ಗೌಡ ಮಲ್ಲಾರ ಅಧ್ಯಕ್ಷ ಮಾಧವ ಗೌಡ ಮಲ್ಲಾರ, ಕಾರ್ಯದರ್ಶಿ ರಾಮಕೃಷ್ಣ ಮಲ್ಲಾರ,ಉಪಾಧ್ಯಕ್ಷ ತೇರಕುಮಾರ, ಸಹ ಕಾರ್ಯದರ್ಶಿ ಕಿರಣ್
ಖಜಾಂಜಿ ಪರಮೇಶ್ವರ ಗೌಡ,ಸದಸ್ಯರಾದ ಲೋಕನಾಥ ಮಲ್ಲಾರ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಮತ್ತು ಆಡಳಿತ ಮಂಡಳಿ ಸದಸ್ಯ ಶಿವಪ್ರಸಾದ್ ಮಾದನ ಮನೆ,ಮತ್ತು ಸರ್ವ ಸದಸ್ಯರು,ಬ್ರಹ್ಮಕಲಶೋತ್ಸವ ಸಮಿತಿ ಹಾಗೂ ವಿವಿಧ ಸಮಿತಿಗಳ ಸಂಚಾಲಕರು ಮತ್ತು ಮಲ್ಲಾರ ಮನೆ,ಮಾದನ ಮನೆ ಕುಟುಂಬದ ಸರ್ವಸದಸ್ಯರು ಹಾಗೂ ನೂರಾರು ಮಂದಿ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.