HomePage_Banner
HomePage_Banner
Breaking News

ಸುಳ್ಯ ಮೀಸಲಾತಿ ಮುಕ್ತಿ ಸಮಿತಿಯ ಪಕ್ಷೇತರ ಅಭ್ಯರ್ಥಿ ಸಂಜೀವರಿಂದ ಚುನಾವಣಾ ಪ್ರಚಾರ ಸಭೆ

ಸುಳ್ಯ ಮೀಸಲಾತಿ ಮುಕ್ತಿ ಸಮಿತಿ ಸುಳ್ಯ ಇದರ ಆಶ್ರಯದಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ಬಿ.ಕೆ. ಸಂಜೀವರವರ ನೇತೃತ್ವದಲ್ಲಿ ಅಮರ ಸುಳ್ಯ ಜನತೆಯ ಸುರಕ್ಷಾ ಕವಚ ಎಂಬ ಧ್ಯೇಯದಡಿ ಚುನಾವಣಾ ಪ್ರಚಾರ ಸಭೆ ಸುಳ್ಯ ಖಾಸಗಿ ಬಸ್ ನಿಲ್ದಾಣದಲ್ಲಿ ಮೇ.೩ರಂದು ನಡೆಯಿತು. ಈ ಸಭೆಯನ್ನುದ್ದೇಶಿಸಿ ಮೀಸಲಾತಿ ಮುಕ್ತಿ ಸಮಿತಿ ಅಧ್ಯಕ್ಷ ಪ್ರದೀಪ್ ಕುಮಾರ್ ಮಾತನಾಡಿ ಸುಳ್ಯದ ಅಭಿವೃದ್ಧಿಗಾಗಿ ಪಕ್ಷದ ವತಿಯಿಂದ ನೀಡಿರುವ ೩೦ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಹಾಗೂ ನಮ್ಮ ಅಭ್ಯರ್ಥಿಯು ರಾಜಕೀಯ ಮಾಡುವ ಉದ್ದೇಶದಿಂದ ಚುನಾವಣಾ ಕಣಕ್ಕೆ ಇಳಿಯದೆ ನಮ್ಮಲ್ಲಿರುವ ರಾಜಕೀಯ ವ್ಯವಸ್ಥೆಯನ್ನು ಬದಲಾವಣೆ ಮಾಡಬೇಕೆಂಬ ಉದ್ದೇಶದಿಂದ ಹಾಗೂ ಸುಮಾರು ೭೦ವರ್ಷಗಳ ಕಾಲ ಸುಳ್ಯವನ್ನು ಮೀಸಲಾತಿ ಕ್ಷೇತ್ರವಾಗಿ ಇಟ್ಟುಕೊಂಡು ಅಭಿವೃದ್ಧಿ ಇಲ್ಲದೆ ಕಂಗಾಲಾಗಿರುವುದು ಸುಳ್ಯ ಕ್ಷೇತ್ರಕ್ಕೆ ಬಂದೊದಗಿರುವುದು ಒಂದು ದುರಂತ. ಇದ್ದರಿಂದ ಮುಕ್ತಿ ಹೊಂದಲು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಸಂಜೀವ ಬಿ.ಕೆ.ರವರಿಗೆ ಮತ ನೀಡುವಂತೆ ಮನವಿ ಮಾಡಿಕೊಂಡರು. ನಂತರ ಮಾತನಾಡಿದ ಪಕ್ಷೇತರ ಅಭ್ಯರ್ಥಿ ಸಂಜೀವ ಬಿ.ಕೆ. ಮಾತನಾಡಿ ಸುಳ್ಯದ ಜನತೆ ಈ ಬಾರಿ ರಾಷ್ಟೀಯ ಪಕ್ಷಗಳ ಮಾತಿಗೆ ಮರುಳಾಗದೇ ಸುಳ್ಯದ ಹಿತ ದೃಷ್ಟಿಯಿಂದ ಸುಳ್ಯ ಸಮಗ್ರ ಅಭಿವೃದ್ಧಿಗೆ ನಮ್ಮ ಪಕ್ಷದ ಹೆಲ್ಮೆಟ್ ಗುರುತಿಗೆ ಮತದಾನ ಮಾಡಿ ನಮ್ಮನ್ನು ಜಯಶೀಲರನ್ನಾಗಿ ಮಾಡಿಕೊಡಬೇಕೆಂದು ವಿನಂತಿಸಿಕೊಂಡರು. ನಂತರ ಮಾತನಾಡಿದ ಸಾಮಾಜಿಕ ಹೋರಾಟಗಾರ ಶಾರೀಕ್ ಇತ್ತೀಚಿನ ೨ವರ್ಷದಿಂದ ಸುಳ್ಯದ ಪ್ರತಿಯೊಂದು ಸಮಸ್ಯೆಯನ್ನು ಮಾಹಿತಿ ಹಕ್ಕಿನ ಮೂಲಕ ಹೋರಾಟ ನಡೆಸಿ ಬಗೆಹರಿಸುವಲ್ಲಿ ಸಫಲರಾಗಿದ್ದು ನಾವು ಬೆಂಬಲಿಸುವ ಸಂಜಿವ ಬಿ.ಕೆ.ರವರಿಗೆ ಮತ ನೀಡುವಂತೆ ಕೋರಿಕೊಂಡರು. ಸಮಿತಿಯ ನಿರ್ದೆಶಕರಾದ ರಶೀದ್ ಜಟ್ಟಿಪಳ್ಳ ಮಾತನಾಡಿ ಸುಳ್ಯದ ಶಾಸಕರನ್ನು ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈಯವರು ವಿರುದ್ಧ ಅಕ್ರೋಶ

 

ವ್ಯಕ್ತಪಡಿಸಿದರು. ರಸ್ತೆ ಅಭಿವೃದ್ಧಿಯ ವಿಷಯದಲ್ಲಿ ರಾಜಕೀಯ ಮಾಡಿ ಹಗ್ಗ ಜಗ್ಗಾಟ ಮಾಡಿಕೊಂಡು ಸುಳ್ಯವನ್ನು ಕತ್ತಲೆಯಲ್ಲಿ ಇಟ್ಟಿರುವುದೆ ರಾಷ್ಟೀಯ ಪಕ್ಷಗಳು ಮಾಡಿದಂತಹ ಒಂದು ಸಾಧನೆ. ಸುಳ್ಯದ ಶಾಸಕರು ಮಾಡಬೇಕಾದ ಕೆಲಸವನ್ನು ನಮ್ಮ ಪಕ್ಷದ ಹೋರಾಟಗಾರ ಶಾರೀಕ್‌ರವರು ಮಾಡುತ್ತಿದ್ದು ಇಲ್ಲಿಯ ಶಾಸಕರು ಅಂಗಾರರ ಅಥವಾ ಶಾರೀಕರೋ ಎಂದು ಪ್ರಶ್ನಿಸಿದರು. ಪಕ್ಷೇತರ ಅಭ್ಯರ್ಥಿ ಸಂಜೀವರು ವಿಜಯಿಯಾದಲ್ಲಿ ಸ್ವಚ್ಛ ಕುಡಿಯುವ ನೀರು, ಸುಳ್ಯದ ಎಲ್ಲಾ ಸರಕಾರಿ ಶಾಲೆಗಳ ಅಭಿವೃದ್ಧಿ, ತುಳು ಹಾಗೂ ಅರೆಭಾಷೆಗೆ ವಿಶೇಷ ಸ್ಥಾನಮಾನವನ್ನು ನೀಡಲು ಹೋರಾಟ ಮಾಡುವದಾಗಿ ಈ ಸಂದರ್ಭದಲ್ಲಿ ಹೇಳಿದರು.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.