Breaking News

ರಂಗತ್ತಮಲೆ ಜನಾರ್ಧನ ನಾಯ್ಕ್ ಆತ್ಮಹತ್ಯೆ

Advt_Headding_Middle
Advt_Headding_Middle

ಆಲೆಟ್ಟಿ ಗ್ರಾಮದ ರಂಗತ್ತಮಲೆ ನಿವಾಸಿ ಆರ್.ಡಿ. ಜನಾರ್ಧನ ನಾಯ್ಕ್ ಎಂಬವರು ಎ.೨೮ರಂದು ತಮ್ಮ ಮನೆಯಲ್ಲಿ ಸಂಜೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ. ಅವರಿಗೆ ೬೧ವರ್ಷ ವಯಸ್ಸಾಗಿತ್ತು. ಮೃತರು ಪ್ರಗತಿಪರ ಕೃಷಿಕರಾಗಿದ್ದು ಕೃಷಿ ಕಾರ್ಯಮಾಡಲು ಸಾಲವನ್ನು ಹೊಂದಿದ್ದರು ಸಾಲ ಮರುಪಾವತಿಸಲು ಸಾಧ್ಯವಾಗದೆ ಈ ಕೃತ್ಯವನ್ನು ಮಾಡಿಕೊಂಡಿರುವುದಾಗಿ ಸ್ಥಳೀಯರು ತಿಳಿಸಿದರು. ಅವರು ಪತ್ನಿ ಶ್ರೀಮತಿ ನೀಲಾವತಿ, ಪುತ್ರರಾದ ಕಮಲಾಕ್ಷ, ದಯಾನಂದ, ಯಶೋದರ, ಪುತ್ರಿಯರಾದ ಜಲಜಾಕ್ಷಿ , ವೇದಾವತಿ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.