ಬಾಡಿಗೆ ವ್ಯಕ್ತಿಗಳಿಂದ ಕಾಂಗ್ರೆಸ್ ಪ್ರಚಾರ : ವೆಂಕಟ್ ವಳಲಂಬೆ

Advt_Headding_Middle
Advt_Headding_Middle

ಸುಳ್ಯ: ಕಾಂಗ್ರೆಸ್ ಪಕ್ಷಕ್ಕೆ ಚುನಾವಣಾ ಪ್ರಚಾರಕ್ಕೆ ತಮ್ಮ ಕಾರ್ಯಕರ್ತರಿಲ್ಲದ ಕಾರಣ ಬಾಡಿಗೆ ವ್ಯಕ್ತಿಗಳಿಂದ ಮತ ಯಾಚನೆ ನಡೆಸಬೇಕಾದ ಅನಿವಾರ್ಯತೆ ಬಂದಿದೆ ಎಂದು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಹೇಳಿದ್ದಾರೆ.
ಸುಳ್ಯದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, “ಇಂತಹ ಬಾಡಿಗೆ ವ್ಯಕ್ತಿಗಳು ಮತ ಯಾಚನೆಗೆ ತೆರಳುವ ವೇಳೆ ನಮ್ಮ ಶಾಸಕರ ಕುರಿತು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ನಮ್ಮ ಕ್ಷೇತ್ರದ ಮತದಾರರಿಗೆ ಅಂಗಾರರ ವ್ಯಕ್ತಿತ್ವ ಚೆನ್ನಾಗಿ ಗೊತ್ತಿದೆ ಎಂದರಲ್ಲದೆ, ಇಂಧನ ಸಚಿವ ಡಿ.ಕೆ.ಶಿವಕುಮಾರ್‌ರವರು ಶಾಸಕರ ಅಂಗಾರರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಇದು ಕಾಂಗ್ರೆಸ್ ಸಂಪ್ರದಾಯ. ಇದಕ್ಕೆ ಮೇ.೧೨ರಂದು ಮತದಾರರು ಉತ್ತರಿಸಲಿದ್ದಾರೆ ಎಂದರು.
ಡಿನೋಟಿಫೈ ಪ್ರಕರಣದಲ್ಲಿ ಕಾಂಗ್ರೆಸ್ಸಿಗರೇ ಯಡಿಯೂರಪ್ಪನವರ ಮೇಲೆ ಇಲ್ಲ ಸಲ್ಲದ ಆರೋಪ ಹೊರಿಸಿ ಜೈಲಿಗೆ ಕಳುಹಿಸಿದರು. ಈಗ ಅಂತ ಫೋಟೊವನ್ನು ವ್ಯಾಟ್ಸಾಪ್‌ಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಇದಕ್ಕೆ ಮತದಾರರು ಸೂಕ್ತ ಉತ್ತರ ನೀಡಿದ್ದಾರೆ. ಹಾಗಾದರೆ ಮೇಟಿ ಜೈಲಿಗೆ ಹೋದ ಫೋಟೊ ಯಾಕಿಲ್ಲ ಎಂದು ಪ್ರಶ್ನಿಸುತ್ತಿದ್ದಾರೆ ಎಂದು ವೆಂಕಟ್ ವಳಲಂಬೆ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮಂಡಲ ಸಮಿತಿ ಮಾಧ್ಯಮ ವಕ್ತಾರ ಮುಳಿಯ ಕೇಶವ ಭಟ್, ಪ್ರಧಾನ ಕಾರ್ಯದರ್ಶಿ ಸುಬೋದ್ ಶೆಟ್ಟಿ ಮೇನಾಲ, ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ, ನಗರ ಬಿಜೆಪಿ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ, ಮಾಜಿ ಜಿ.ಪಂ. ಸದಸ್ಯ ನವೀನ್ ರೈ ಮೇನಾಲ, ಚಂದ್ರಾ ಕೋಲ್ಚಾರ್, ಚುನಾವಣಾ ಉಸ್ತುವಾರಿ ಎ.ವಿ. ತೀರ್ಥರಾಮ, ಜಯರಾಮ ರೈ ಜಾಲ್ಸೂರು, ಕುಶಾಲಪ್ಪ ಪೆರುವಾಜೆ ಇದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.