Breaking News

ಅಂಗಾರರು ದಲಿತರಿಗಾಗಿ ಏನೂ ಮಾಡಿಲ್ಲ. ಆದರೆ ತನಗಾಗಿ ಬೇನಾಮಿ ಆಸ್ತಿ ಮಾಡಿದ್ದಾರೆ : ಕಾಂಗ್ರೆಸ್ ಎಸ್.ಸಿ. ಘಟಕ ಆರೋಪ

Advt_Headding_Middle
Advt_Headding_Middle

“ಸುಳ್ಯ ಶಾಸಕ ಎಸ್.ಅಂಗಾರರು ದಲಿತರಿಗಾಗಿ ಏನನ್ನೂ ಮಾಡಿಲ್ಲ. ಆದರೆ ತನಗಾಗಿ ಪೆಟ್ರೋಲ್ ಬಂಕ್, ಖಾಸಗಿ ಶಾಲೆ, ಹಲವು ಕಡೆ ಜಮೀನು ಸೇರಿದಂತೆ ಬೇನಾಮಿ ಆಸ್ತಿ ಮಾಡಿದ್ದಾರೆ“ ಎಂದು ಕಾಂಗ್ರೆಸ್ ಎಸ್.ಸಿ.ಮೋರ್ಚಾ ಆರೋಪಿಸಿದೆ.
ಸುಳ್ಯದಲ್ಲಿ ಪತ್ರಿಕಾಗೋಷ್ಟಿಯನ್ನುzಶಿಸಿ ಮಾತನಾಡಿದ ಎಸ್.ಸಿ. ಮೋರ್ಚಾದ ಜಿಲ್ಲಾ ಪ್ರ.ಕಾರ್ಯದರ್ಶಿ ಪ್ರಕಾಶ್ ಬಂಗ್ಲೆಗುಡ್ಡೆ ಮತ್ತು ನಂದರಾಜ್ ಸಂಕೇಶರು ಈ ಆರೋಪ ಮಾಡಿದರು.
ಸುಳ್ಯ ತಾಲೂಕಿನಲ್ಲಿ ಮೊಗೇರ ಸಮುದಾಯ ಭವನಕ್ಕೆ ಸಮಾಜ ಕಲ್ಯಾಣ ಇಲಾಖೆಯಿಂದ ರೂ.೨೦ ಲಕ್ಷ ಅನುದಾನ ಬಂದಿದ್ದರೂ ಜಾಗ ಮಂಜೂರಾತಿಯಲ್ಲಿ ವಿಳಂಬವಾದುದರಿಂದ ಕಾಮಗಾರಿ ನಡೆದಿಲ್ಲ. ಆದಿದ್ರಾವಿಡ ಸಂಘದವರು ಕೂಡಾ ತಮ್ಮ ಸಮುದಾಯ ಭವನಕ್ಕೆ ಪ್ರಯತ್ನಿಸುತ್ತಿದ್ದರೂ ಆಗಿಲ್ಲ. ಅಂಬೇಡ್ಕರ್ ಭವನ ನಿರ್ಮಿಸಲು ಕೂಡಾ ಶಾಸಕ ಅಂಗಾರರಿಗೆ ಕಿಂಚಿತ್ತೂ ಕಾಳಜಿ ಇಲ್ಲ. ಸುಬ್ರಹ್ಮಣ್ಯದ ಕುಲ್ಕುಂದದಲ್ಲಿರುವ ಭಾಗೀರಥಿ ಎಂಬವರು ತಮಗೆ ವಾಸಕ್ಕೆ ಮನೆ ಇಲ್ಲ ಎಂದು ಮೂರು ಸಲ ಶಾಸಕರನ್ನು ಭೇಟಿ ಮಾಡಿದ್ದರೂ ಅವರಿಗೆ ಮನೆ ದೊರೆತಿಲ್ಲ. ಸುಳ್ಯ ನಗರದಲ್ಲೇ ದಲಿತರಿಗೆ ಮೂಲ ಭೂತ ಸೌಕರ್ಯಗಳಿಲ್ಲ. ಹೀಗೆ ದಲಿತರ ಪ್ರತಿನಿಧಿಯಾದ ಅಂಗಾರರು ದಲಿತರಿಗೆ ಏನೂ ಮಾಡಿಲ್ಲ. ಡಾ| ರಘು ಅವರು ಗೆದ್ದರೆ ಈ ಎಲ್ಲ ಸಮಸ್ಯೆಗಳು ಪರಿಹಾರವಾಗಲಿದೆ. ಮಾತ್ರವಲ್ಲ ಅವರು ಸಚಿವರಾಗಿಯೂ ಕ್ಷೇತ್ರಕ್ಕೆ ಸೇವೆ ನೀಡಲಿದ್ದಾರೆ ಎಂದು ಪ್ರಕಾಶ್ ಬಂಗೆಗುಡ್ಡೆ ಹೇಳಿದರು.
ಆದರ್ಶ ಗ್ರಾಮದ ಬಳ್ಪದಲ್ಲಿ ಇನ್ನೂ ಕೂಡಾ ದಲಿತರಿಗೆ ಮೀಸಲಾದ ಜಾಗ ದಲಿತರಿಗೆ ಸಿಕ್ಕಿಲ್ಲ. ದಲಿತರ ನಾಯಕ ದಲಿತರಿಗೆ ಶಾಪವಾಗುವಂತೆ ಅಂಗಾರರು ಕಾರ್ಯ ನಿರ್ವಹಿಸುತ್ತಿದ್ದಾರೆ. ಸುಳ್ಯದಲ್ಲಿರುವ ಏಕೈಕ ಸರಕಾರಿ ಕಾಲೇಜಿನ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಅನ್ನದಾಸೋಹಕ್ಕೆ ಶಾಸಕರು ಪ್ರಯತ್ನಿಸಬೇಕಾಗಿತ್ತು. ಆದರೆ ಪುಣಚ ಹಾಗೂ ಕಲ್ಲಡ್ಕದ ಶಾಲೆಗಳಿಗೆ ದೇಗುಲದಿಂದ ಅನಧಿಕೃತವಾಗಿ ಸುಮಾರು ೨ ಕೋಟಿಯ ೮೯ ಲಕ್ಷ ಹಣ ಹೋಗುತ್ತಿತ್ತು ಎಂದರು.
ಬಿಜೆಪಿ ಸರಕಾರವಿದ್ದಾಗ ಎಸ್.ಸಿ.ಮೋರ್ಚಾದವರು ಅಂಗಾರರಿಗೆ ಮಂತ್ರಿ ಸ್ಥಾನ ನೀಡುವಂತೆ ಒತ್ತಾಯಿಸಿದ್ದರು. ಆಗ ಪಕ್ಷದ ನಾಯಕರು ಬಂದು ಅವರಿಗೆ ಬೆದರಿಕೆಯೊಡ್ಡಿ ಅಂಗಾರರನ್ನು ಶಾಸಕ ಮಾಡಿದ್ದು ನಾವು, ಮಂತ್ರಿ ಸ್ಥಾನ ಕೇಳಲು ನೀವ್ಯಾರು ಎಂದು ಕೇಳಿದ್ದರು ಎಂದ ಅವರು, ವೇದಾವತಿಯವರಿಗೆ ಬಂದ ಪೆಟ್ರೋಲ್ ಪಂಪ್‌ನ್ನು ಇತರರಿಗೆ ನೀಡಿದ್ದು, ಸುಳ್ಯದ ಮೀನು ಮಾರುಕಟ್ಟೆ ಮತ್ತು ಮೀನುಗಾರಿಕಾ ನಿಗಮದಲ್ಲಿ ದಲಿತರಿಗೆ ಬಂದ ಸ್ಟಾಲ್‌ಗಳನ್ನು ಬೇರೆಯವರು ನಡೆಸುತ್ತಿರುವುದು ಇದೆಲ್ಲ ದಲಿತ ಸವಲತ್ತುಗಳ ದುರುಪಯೋಗ“ ಎಂದು ಹೇಳಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.