HomePage_Banner
HomePage_Banner
HomePage_Banner
Breaking News

ರಾಜ್ಯ ಸರಕಾರದಿಂದ ಆಲೆಟ್ಟಿ ಗ್ರಾಮಕ್ಕೆ ೧೪ ಕೋಟಿಗೂ ಮಿಕ್ಕಿ ಅನುದಾನ : ಸತ್ಯಕುಮಾರ್

ರಾಜ್ಯ ಸರಕಾರ ಕಳೆದ ೫ ವರ್ಷಗಳಲ್ಲಿ ಆಲೆಟ್ಟಿ ಗ್ರಾಮಕ್ಕೆ ಸುಮಾರು ೧೪ ಕೋಟಿಗೂ ಮಿಕ್ಕಿ ಅನುದಾನ ನೀಡಿ ಅಭಿವೃದ್ಧಿ ಕಾರ್ಯವನ್ನು ಮಾಡಲು ಸಹಕಾರ ನೀಡಿದೆ“ ಎಂದು ಆಲೆಟ್ಟಿ ಗ್ರಾಮ ಕಾಂಗ್ರೆಸ್ ಪ್ರಮುಖರಾದ ಸತ್ಯಕುಮಾರ್ ಆಡಿಂಜ ಹೇಳಿದರು.
ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, “ನಾರ್ಕೋಡು-ಕೋಲ್ಚಾರ್-ಕಣಕ್ಕೂರು-ಕನ್ನಡಿತೋಡು ರಸ್ತೆ ನಿರ್ಮಾಣಕ್ಕೆ ರೂ.೩ ಕೋಟಿ ಅನುದಾನ (ಶಕುಂತಳಾ ಶೆಟ್ಟಿಯವರಿಂದ)ಅರಂಬೂರಿನಲ್ಲಿ ಸೇತುವೆ ನಿರ್ಮಾಣಕ್ಕೆ ರೂ. ೫ ಕೋಟಿ, ಪೈಂಬೆಚ್ಚಾಲು ತೋಟಕೊಚ್ಚಿ ರಸ್ತೆ ನಡುವಿನ ಸೇತುವೆಗೆ ಅನುದಾನ, ನೆಡ್ಚಿಲ್‌ನಲ್ಲಿ ಕಾಳು ಸಂಕ, ಬಡ್ಡಡ್ಕ ಕಲ್ಲಪಳ್ಳಿ ರಸ್ತೆ ಅಭಿವೃದ್ಧಿಗೆ ರೂ.೧.೨೪ ಕೋಟಿ ಹೀಗೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡಿದೆ. ಮುಂದಿನ ಬಾರಿ ಸುಳ್ಯದಲ್ಲಿ ಡಾ| ರಘು ಅವರು ಶಾಸಕರಾಗಿ ಆಯ್ಕೆಯಾಗಿ ಬಂದರೆ, ಬಡ್ಡಡ್ಕಕ್ಕೆ ಕೆ.ಎಸ್.ಆರ್.ಟಿ.ಸಿ. ಬಸ್ ಸಂಚಾರ ವ್ಯವಸ್ಥೆ, ಪೈಂಬೆಚ್ಚಾಲು ರಸ್ತೆ ಡಾಮರೀಕರಣ, ಏಣಾವರದಲ್ಲಿ ಸೇತುವೆ ಹೀಗೆ ವಿವಿಧ ಅಭಿವೃದ್ಧಿ ಕೆಲಸಗಳನ್ನು ಆದ್ಯತೆಯಲ್ಲಿ ಮಾಡಿಸುವ ಯೋಜನೆಯಿದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಆಲೆಟ್ಟಿ ಕಾಂಗ್ರೆಸ್ ಪ್ರಮುಖರಾದ ತೇಜಕುಮಾರ್ ಬಡ್ಡಡ್ಕ, ಚಂದ್ರಕಾಂತ್ ನಾರ್ಕೋಡು, ಧರ್ಮಪಾಲ ಕೊಯಂಗಾಜೆ, ಯೂಸುಪ್ ಅಂಜಿಕ್ಕಾರ್ ಮೊದಲಾದವರಿದ್ದರು.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.