Breaking News

ಸುಳ್ಯ ಕ್ಷೇತ್ರದ ಜನತೆಗೆ ಶಾಸಕ ಅಂಗಾರರಿಂದ ಅವಮಾನ : ಜಯಪ್ರಕಾಶ್ ರೈ

Advt_Headding_Middle
Advt_Headding_Middle

ಮತದಾರರಿಗೆ ಹಣ, ಹೆಂಡದ ಮೂಲಕ ಆಮಿಷ ಒಡ್ಡಲಾಗುತ್ತಿದೆ ಎಂದು ಶಾಸಕ ಅಂಗಾರ ಅವರು ಹೇಳುವ ಮೂಲಕ ಸುಳ್ಯ ಕ್ಷೇತ್ರದ ಮತದಾರರನ್ನು ಅವಮಾನಿಸುತ್ತಿದ್ದಾರೆ“ ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್ .ಜಯಪ್ರಕಾಶ್ ರೈ ಹೇಳಿದ್ದಾರೆ.
ಸುಳ್ಯದಲ್ಲಿ ಪತ್ರಿಕಾಗೋಷ್ಠಿ ಯನ್ನುದzಶಿಸಿ ಮಾತನಾಡಿದ ಅವರು “ಸುಳ್ಯ ಕ್ಷೇತ್ರದಲ್ಲಾಗಲೀ ದ.ಕ. ಜಿಲ್ಲೆಯಲ್ಲಾಗಲೀ ಹಣ, ಹೆಂಡ ಹಂಚುವ ಮೂಲಕ ಗೆಲುವು ಸಾಧ್ಯವಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಸೋಲಿನ ಹತಾಶೆಯಿಂದ ಶಾಸಕರು ಈ ರೀತಿ ಅಸಂಬದ್ದ ಹೇಳಿಕೆ ನೀಡುತ್ತಿದ್ದಾರೆ. ಹಾಗಾದರೆ ೫ ಬಾರಿ ಅವರು ಗೆಲುವು ಸಾಧಿಸಿದ್ದು ಇಂತಹ ಪ್ರಯೋಗ ಮಾಡಿಯೇ ಎಂದು ಅವರು ಸ್ಪಷ್ಠೀಕರಣ ನೀಡಬೇಕು ಎಂದು ಹೇಳಿದರು.
ಇಂಧನ ಸಚಿವ ಡಿ.ಕೆ. ಶಿವಕುಮಾರ್‌ರವರು ಅಂಗಾರರ ಬಗ್ಗೆ ಹೇಳಿದ್ದು, ಅವರು ಓರ್ವ ಶಾಸಕರಾಗಿ ಕ್ಷೇತ್ರದ ಸಮಸ್ಯೆಯ ಬಗ್ಗೆ ಸಚಿವರಲ್ಲಿ ಮಾತನಾಡಿಲ್ಲ ಎಂಬ ಕಾರಣಕ್ಕೆ. ಆದರೆ ಅದನ್ನು ಅಂಗಾರರು ತಿರುಚಿ ಸಚಿವರ ಸರ್ಟಿಫಿಕೇಟ್ ನಮಗೆ ಅಗತ್ಯವಿಲ್ಲ ಎಂದಿದ್ದಾರೆ. ಅಂಗಾರರು ಈ ಕ್ಷೇತ್ರದ ಪ್ರತಿನಿಧಿ. ಇಲ್ಲಿ ಸರ್ಟಿಪಿಕೇಟ್ ವಿಚಾರ ಬರುವುದಿಲ್ಲ. ಮೊನ್ನೆ ಅವರ ಪಕ್ಷದ ನಾಯಕರು ಎರಡು ವರ್ಷದೊಳಗೆ ಸಬ್‌ಸ್ಟೇಶನ್ ಪೂರ್ಣಗೊಳ್ಳಲಿದೆ ಎಂದಿದ್ದಾರೆ. ೨೫ ವರ್ಷ ಆಗದವರಿಂದ ಎರಡು ವರ್ಷವಲ್ಲ ಇನ್ನೂ ೨೫ ವರ್ಷ ಇದ್ದರೂ ಈ ಕೆಲಸ ಆಗುವುದಿಲ್ಲ ಎಂದರು.
ರೈತರಿಗೆ ಸಾಲಮನ್ನಾ ಹಣ ಪಾವತಿ ಆಗಿಲ್ಲ ಎಂಬ ಬಿಜೆಪಿ ನಾಯಕರ ಹೇಳಿಕೆ ಸರಿಯಲ್ಲ. ಕಾಂಗ್ರೆಸ್ ನೇತೃತ್ವದ ಸೊಸೈಟಿಗಳಲ್ಲಿ ಎಲ್ಲ ರೈತರಿಗೆ ಪಾವತಿಯಾಗಿದೆ. ಯಾಕೆಂದರೆ ಅವರು ಸದಸ್ಯರನ್ನು ಸಂಪರ್ಕಿಸಿ ಕಟಾಫ್ ಡೇಟ್ ಬಗ್ಗೆ ಸರಿಯಾದ ಮಾಹಿತಿ ನೀಡಿದ್ದಾರೆ. ಆದರೆ ಬಿಜೆಪಿ ಆಡಳಿವಿದ್ದ ಸೊಸೈಟಿಯವರು ಇದನ್ನು ಮಾಡಿಲ್ಲ. ಇದಕ್ಕೆ ನಾನೇ ಸಾಕ್ಷಿ. ನಾನು ಸಾಲ ಮರುಪಾವತಿಗಾಗಿ ಸುಳ್ಯ ಸಿ.ಎ.ಬ್ಯಾಂಕಿಇಗೆ ಹೋದ ಮೇಲಷ್ಟೆ ನನ್ನ ಹಣ ಪಾವತಿಯಾಯಿತು ಎಂದು ಜಯಪ್ರಕಾಶ್ ರೈ ಹೇಳಿದರು.
ಕಾರ್ಮಿಕ ಮುಖಂಡರಾದ ಶಿವಕುಮಾರ್ ಕೌಡಿಚ್ಚಾರ್ ಮತ್ತು ಚಂದ್ರಲಿಂಗಂ ಮಾತನಾಡಿ, “ಸುಳ್ಯದವರೇ ಮುಖ್ಯಮಂತ್ರಿಯಾಗಿದ್ದರೂ ನಮ್ಮ ಸಮಸ್ಯೆಗಳು ಬಗೆ ಹರಿದಿರಲಿಲ್ಲ. ಆದರೆ ಸಿದ್ಧರಾಮಯ್ಯ ಸರಕಾರ ನಮ್ಮ ಶೇ.೯೦ ರಷ್ಟು ಬೇಡಿಕೆಯನ್ನು ಈಡೇರಿಸಿದೆ. ಶೇ.೮೦ರಷ್ಟು ಕಾಲೊನಿ ಬಂಧುಗಳು ಕಾಂಗ್ರೆಸ್ ಜತೆಗಿದ್ದಾರೆ. ಹೀಗಾಗಿ ಈ ಬಾರಿ ಡಾ| ರಘು ಗೆಲ್ಲುವುದು ನಿಶ್ಚಿತ“ ಎಂದು ಹೇಳಿದರು. ರಮಾನಾಥ ರೈಯವರು ತಮಿಳು ಬಾಂಧವರ ಪಾಲಿಗೆ ತಮಿಳುನಾಡಿನ ಎಂ.ಟಿ.ಆರ್. ಇದ್ದ ಹಾಗೆ ಎಂದು ಚಂದ್ರಲಿಂಗಂ ಹೇಳಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.