ರೈತರ ಪರ ನಿಲ್ಲುವ ಏಕೈಕ ಪಕ್ಷ ಬಿಜೆಪಿ : ಎ.ವಿ.ತೀರ್ಥರಾಮ

Advt_Headding_Middle
Advt_Headding_Middle

ರೈತರ ಪರವಾಗಿ ನಿಲ್ಲುವ ಏಕೈಕ ಪಕ್ಷ ಬಿಜೆಪಿ. ಈ ಬಾರಿ ಪಕ್ಷದ ಪ್ರಣಾಳಿಕೆಯಲ್ಲಿ ಹತ್ತು ಹಲವು ರೈತ ಪರ ವಾಗ್ದಾನಗಳ ಮೂಲಕ ರೈತರು ಹಾಗೂ ಇತರೆ ವರ್ಗಕ್ಕೂ ನ್ಯಾಯ ಕೊಡಿಸುವ ಪ್ರಾಮಾಣಿಕ ಕೆಲಸ ಬಿಜೆಪಿಯಿಂದ ನಡೆದಿದೆ ಎಂದು ಸುಳ್ಯ ವಿಧಾನ ಸಭಾ ಕ್ಷೇತ್ರ ಬಿಜೆಪಿ ಚುನಾವಣಾ ಸಂಚಾಲಕ ಎ.ವಿ ತೀರ್ಥರಾಮ ಹೇಳಿದರು.
ಸುಳ್ಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದಿನ ಬಿಜೆಪಿ ಆಡಳಿತದ ಅವಧಿಯಲ್ಲಿ ಕೃಷಿಕರ ಪರವಾಗಿ ಪಕ್ಷ ನಿಂತು ಹಲವಾರು ಯೋಜನೆಗಳನ್ನು ಜಾರಿಗೆ ತಂದಿತ್ತು. ಈಗಲೂ ಪ್ರಣಾಳಿಕೆಯಲ್ಲಿ ಹಲವಾರು ಅತ್ಯುತ್ತಮ ಅಂಶಗಳನ್ನು ಜೋಡಿಸಿಕೊಂಡಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ೧ ಲಕ್ಷ ರೂ ತನಕ ಕೃಷಿಕರ ಸಾಲ ಮನ್ನಾ, ಬಡ ಕುಟುಂಬದ ಹೆಣ್ಣುಮಕ್ಕಳ ಕುಟುಂಬಕ್ಕೆ ವಿವಾಹಕ್ಕೆ ನೆರವು, ೨೪ ಗಂಟೆ ವಿದ್ಯುತ್ ಸರಬರಾಜು, ಸ್ತ್ರೀ ಶಕ್ತಿ ಗುಂಪುಗಳಿಗೆ ಕಡಿಮೆ ಬಡ್ಡಿಗೆ ಸಾಲ ಯೋಜನೆ ಸೇರಿದಂತೆ ಎಲ್ಲಾ ವರ್ಗಕ್ಕೂ ಸಾಮಾಜಿಕ ನ್ಯಾಯ ದೊರಕಿಸಲು ಬಿಜೆಪಿ ಬದ್ಧವಾಗಿದೆ ಎಂದರು.
ರಾಜ್ಯ ಸರಕಾರ ಘೋಷಿಸಿದ ಸಹಕಾರಿ ಸಂಘಗಳ ಸದಸ್ಯ ಕೃಷಿಕರ ಸಾಲ ಮನ್ನಾ ೧೩,೦೦೦ ರೈತರಿಗೆ ಇನ್ನೂ ದೊರಕಿಲ್ಲ. ಇದರಿಂದ ರೈತರಿಗೆ ಅನ್ಯಾಯವಾಗಿದೆ. ಅದನ್ನು ದೊರಕಿಸಿಕೊಡಲು ನಮ್ಮ ಪಕ್ಷ ಬದ್ಧವಾಗಿದೆ. ಈ ಹಿಂದಿನ ಬಿಜೆಪಿ ಅಧಿಕಾರದ ಅವಧಿಯಲ್ಲಿ ಜಾರಿಗೆ ತಂದ ಜನಪರ ಯೋಜನೆಗಳ ಜತೆಗೆ ಮತ್ತಷ್ಟೂ ಪ್ರಯೋಜನಕಾರಿ ಯೋಜನೆ ಜಾರಿಗೆ ತರಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಪ್ರಧಾನ ಕಾರ‍್ಯದರ್ಶಿ ಸುಭೋಧ್ ಶೆಟ್ಟಿ ಮೇನಾಲ, ಬಾಲಪ್ಪ ಕಳಂಜ, ಶೀನಪ್ಪ ಬಯಂಬು, ಸಂಜೀವಕುಮಾರ್ ಪೈಚಾರ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.