6 ತಿಂಗಳ ಮಗುವಿನ ಪಾಲಿಗೆ ಯಮನಾದ ತಾಯಿಯ ಹೈಹೀಲ್ಸ್..!

Advt_Headding_Middle
Advt_Headding_Middle
Baby Mohammed

ಥಾಣೆ: ತಾಯಿಯ ಹೈಹೀಲ್ಸ್ ಬ್ಯಾಲೆನ್ಸ್ ತಪ್ಪಿ ೬ ತಿಂಗಳ ಮಗು ಮೊದಲನೇ ಮಹಡಿಯಿಂದ ಬಿದ್ದು ಮೃತಪಟ್ಟ ಘಟನೆ ಮಹಾರಾಷ್ಟ್ರದ ಥಾಣೆ ನಗರದ ಮದುವೆ ಮನೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ರಾಮ್‌ಭಾಗ್‌ನ ಮಾತೋಶ್ರೀ ಕಲ್ಯಾಣ ಮಂಟಪದಲ್ಲಿ ಘಟನೆ ನಡೆದಿದ್ದು, 6ತಿಂಗಳ ಮಗು ಮೊಹಮ್ಮದ್ ಶೇಕ್ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾನೆ.
ವಿವಾಹ ಕಾರ್ಯಕ್ರಮದಲ್ಲಿ ಪತಿ ಹಾಗೂ ಮಗುವಿನ ಜೊತೆ ಭಾಗವಹಿಸಿದ್ದ ಪತ್ನಿ ಫಾಮಿದಾ ಶೇಖ್ (೨೩), ಕಾರ್ಯಕ್ರಮ ಮುಗಿಸಿ ಕಲ್ಯಾಣ ಮಂಟಪದ ಮೊದಲನೇ ಮಹಡಿಯಿಂದ ಕೆಳಗೆ ಇಳಿಯುತ್ತಿದ್ದರು. ಆದರೆ ಈ ವೇಳೆ ಫಾಮಿದಾ ಹೈಹೀಲ್ಸ್ ಧರಿಸಿದ್ದು, ಮೆಟ್ಟಿಲು ಇಳಿಯುವ ವೇಳೆ ಬ್ಯಾಲೆನ್ಸ್ ತಪ್ಪಿದ್ದಾರೆ. ಈ ವೇಳೆ ಎತ್ತಿಕೊಂಡಿದ್ದ ಮಗುವನು ತಾಯಿ ಕೈಬಿಟ್ಟ ಪರಿಣಾಮ ಮಗು ಮೊದಲನೇ ಮಹಡಿಯಿಂದ ಬಿದ್ದು, ನೆಲಕ್ಕಪ್ಪಳ್ಳಿಸಿದ ಪರಿಣಾಮ ಸ್ಥಳದಲ್ಲೇ ಪ್ರಾಣಬಿಟ್ಟಿತು. ಕುಟುಂಬದವರು ಕೂಡಲೇ ಸ್ಥಳೀಯ ರುಕ್ಮಿಣಿ ಬಾಯಿ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಅದಾಗಲೇ ಮಗು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದರು.

ಇದೊಂದು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದೇವೆ ಎಂದು ಮಹಾತ್ಮ ಪುಲೇ ಪೊಲೀಸ್ ಠಾಣೆಯ ಅಧಿಕಾರಿ ವಿಜಯ್ ಕೆದೇಕರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.