ಮಳೆ ಹಿನ್ನಲೆ: ಭಾಷಣ ಮೊಟಕುಗೊಳಿಸಿದ ಯೋಗಿ

Advt_Headding_Middle
Advt_Headding_Middle

ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ರವರು ಮಾತನಾಡುತ್ತಿದ್ದಾಗ ಮಳೆ ಸುರಿಯಲು ಆರಂಭವಾದ ಹಿನ್ನಲೆಯಲ್ಲಿ ಅವರು ತನ್ನ ಭಾಷಣವನ್ನು ಮೊಟಕುಗೊಳಿಸಬೇಕಾಯಿತು. 

ನಿಗದಿತ ಸಮಯಕ್ಕಿಂತ ಒಂದೂವರೆ ತಾಸು ಮುನ್ನವೇ ಸುಳ್ಯಕ್ಕೆ ಆಗಮಿಸಿದ್ದ ಅವರು, ಹೆಲಿಪ್ಯಾಡ್‌ನಿಂದ ನೇರವಾಗಿ ಕೆವಿಜಿ ಆಯುರ್ವೇದಿಕ್ ಕಾಲೇಜು ಆಸ್ಪತ್ರೆಗೆ ತೆರಳಿ ಅಲ್ಲಿ ವಿಶ್ರಾಂತಿ ಪಡೆದರು. ಬಳಿಕ ೪.೨೫ಕ್ಕೆ ಸಭಾ ಸ್ಥಳಕ್ಕೆ ಬಂದರು. ಅಲ್ಲಿಂದ ಚೆನ್ನಕೇಶವ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದು, ೪.೩೪ಕ್ಕೆ ವೇದಿಕೆ ಏರಿದರು. ಅಭ್ಯರ್ಥಿ ಎಸ್.ಅಂಗಾರರ ಭಾಷಣದ ಬಳಿಕ ತನ್ನ ಮಾತು ಆರಂಭಿಸಿದರು. ೪.೪೫ರ ವೇಳೆಗೆ ಮಳೆ ಹನಿ ಹಾಕಲು ಆರಂಭಿಸಿತು. ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆಯವರು, ಯೋಗಿ ಆದಿತ್ಯನಾಥ್‌ರವರಿಗೆ ಕೊಡೆ ಹಿಡಿದು ನಿಂತರು. ಮಳೆ ಜೋರಾಗುವ ಸೂಚನೆ ಅರಿತ ಯೋಗಿಯವರು ಸುದೀರ್ಘ ಭಾಷಣಕ್ಕೆ ಮುಂದಾಗದೆ ಬಿಜೆಪಿ ಅಭ್ಯರ್ಥಿಗೆ ಮತಯಾಚನೆ ಮಾಡಿ ಭಾಷಣ ಮುಗಿಸಿ ವೇದಿಕೆಯಿಂದ ಇಳಿದು, ಕಾರಿನಲ್ಲಿ ತೆರಳಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.