ನನ್ನನ್ನು ನಿರಂತರ ಗೆಲ್ಲಿಸಿದ್ದು ಮತದಾರರೇ ಹೊರತು ಕಾಂಗ್ರೆಸ್ ಅಲ್ಲ: ಅಂಗಾರ

Advt_Headding_Middle

ಈ ಕ್ಷೇತ್ರದಲ್ಲಿ ನನ್ನನ್ನು ನಿರಂತರವಾಗಿ ಗೆಲ್ಲಿಸಿದ್ದು ಮತದಾರರೇ ಹೊರತು ಕಾಂಗ್ರೆಸ್ ನಾಯಕರಲ್ಲ. ಹೀಗಾಗಿ ಅಂಗಾರರೇ ಯಾಕೆ ಎಂದು ಕೇಳುವ ನೈತಿಕತೆ ಕಾಂಗ್ರೆಸ್‌ನವರಿಗೆ ಇಲ್ಲ ಎಂದು ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಎಸ್.ಅಂಗಾರ ಹೇಳಿದರು.
ಸುಳ್ಯದಲ್ಲಿ ನಡೆದ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಮತಯಾಚಿಸಿದ ಅವರು, ೧೯೯೪ರಿಂದ ಜನ ನನ್ನ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಅವರ ವಿಶ್ವಾಸಕ್ಕೆ ಚಯುತಿ ಬಾರದಂತೆ ನಡೆದುಕೊಂಡಿದ್ದೇನೆ ಎಂದು ಹೇಳಿದರು. ಡಿಕೆಶಿಯವರು ಅಂಗಾರರ ಮುಖವನ್ನೇ ನೋಡಿಲ್ಲ ಎಂದು ಹೇಳಿದ್ದಾರೆ. ಅವರು ಓರ್ವ ಸಚಿವ ಆದರೆ ಅವರ ಹಾಗೆ ನಾನು ಸಣ್ಣ ವ್ಯಕ್ತಿಯಾಗುವುದಿಲ್ಲ. ೧೧೦ ಕೆವಿ ಸಬ್‌ಸ್ಟೇಶನ್ ಕುರಿತಂತೆ ೨೪ ಬಾರಿ ಅವರಿಗೆ ಪ್ರಶ್ನೆ ಕೇಳಿದ್ದೇನೆ. ಅಂಗಾರರ ಮುಖ ನೋಡಿಲ್ಲ ಎನ್ನುವಾಗ ಅವರಿಗೆ ಇದೆಲ್ಲಾ ಮರೆತು ಹೋಯಿತೇ? ಎಂದು ಪ್ರಶ್ನಿಸಿದರು. ಅಂಗಾರರು ಬೇನಾಮಿ ಆಸ್ತಿ ಮಾಡಿದ್ದಾರೆ ಎಂದು ಕಾಂಗ್ರೆಸ್‌ನವರು ಆರೋಪಿಸಿದ್ದಾರೆ. ನನ್ನ ಬೇನಾಮಿ ಆಸ್ತಿಯನ್ನು ಸಾಬೀತುಪಡಿಸಿದರೆ ಅದನ್ನು ಅವರಿಗೇ ನೀಡುವುದಾಗಿ ಸವಾಲು ಹಾಕಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.