Breaking News

ಶಾಸಕರ ಬೇನಾಮಿ ಆಸ್ತಿಯ ದಾಖಲೆ ಸಂಗ್ರಹಿಸುತ್ತಿzವೆ : ನಂದರಾಜ ಸಂಕೇಶ

Advt_Headding_Middle
Advt_Headding_Middle


ಶಾಸಕ ಅಂಗಾರರ ಮೇಲೆ ಕಾಂಗ್ರೆಸ್ ಎಸ್ಸಿ ಘಟಕದವರು ಮಾಡಿರುವ ಬೇನಾಮಿ ಆಸ್ತಿ ಆರೋಪಕ್ಕೆ ಶಾಸಕರು ನೀಡಿದ ಉತ್ತರಕ್ಕೆ ಪ್ರತಿಕ್ರಿಯಿಸಿರುವ ನಂದ ರಾಜ ಸಂಕೇಶರವರು, ಬೇನಾಮಿ ಆಸ್ತಿಯ ಕುರಿತು ದಾಖಲೆ ಸಂಗ್ರಹಿಸುತ್ತಿzವೆ. ಬೇನಾಮಿ ಆಸ್ತಿಯನ್ನು ಅವರು ನಮಗೆ ನೀಡುವುದು ಬೇಡ, ಸರಕಾರಕ್ಕೆ ನೀಡಲಿ ಎಂದು ಹೇಳಿದ್ದಾರೆ.
ಸುಳ್ಯದಲ್ಲಿ ಬ್ಲಾಕ್ ಕಾಂಗ್ರೆಸ್ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಶಾಸಕರ ಪ್ರತಿಕ್ರಿಯೆ ಕುರಿತಂತೆ ಅವರಿಗೆ ಪ್ರಶ್ನಿಸಿದಾಗ, ಒಂದು ಎಕ್ರೆಯಲ್ಲಿ ೨೦೦ ರಬ್ಬರ್ ಗಿಡ ನಡೆಬಹುದು. ೫೦೦೦ ಸಾವಿರ ರಬ್ಬರ್ ಗಿಡ ನೆಡಬೇಕಾದರೆ ಎಷ್ಟು ಎಕ್ರೆ ಬೇಕಾಗುತ್ತದೆ. ಇಂತಹ ದಾಖಲೆಗಳನ್ನು ರಬ್ಬರ್ ಮಂಡಳಿ ಮತ್ತು ಸೊಸೈಟಿಯಿಂದ ಸಂಗ್ರಹಿಸುತ್ತಿzವೆ. ನಾವು ಇದನ್ನು ಸಾಬೀತು ಪಡಿಸಿದರೆ ಆ ಆಸ್ತಿಗಳನ್ನು ನಮಗೆ ನೀಡುವುದು ಬೇಡ. ಸರಕಾರಕ್ಕೆ ನೀಡಲಿ ಎಂದು ಹೇಳಿದರು.
ಬೇನಾಮಿ ಆಸ್ತಿಗಳೆಂದರೆ ಇನ್ನೊಬ್ಬರ ಹೆಸರಿನಲ್ಲಿ ಆಸ್ತಿ ಇರುವುದು. ಜಾಗವಾಗಲೀ ಪೆಟ್ರೋಲ್ ಪಂಪ್‌ಗಳಾಗಲೀ ಇನ್ನೊಬ್ಬರ ಹೆಸರಿನಲ್ಲಿ ಮಾಡುತ್ತಾರೆ. ಅವರು ಅದನ್ನು ತಮ್ಮದೆಂದೇ ಮಾಡುತ್ತಾರೆ. ನಾವು ದಾಖಲೆ ತೋರಿಸಿದರೂ ಅವರು ಒಪ್ಪುವುದಿಲ್ಲ. ಇಂತಹ ಆಸ್ತಿಗಳಿಗೆ ಬೇನಾಮಿ ಎಂದು ಕರೆಯುವುದು ಎಂದು ಜಯಪ್ರಕಾಶ್ ರೈ ಹಾಗೂ ದಿನೇಶ್ ಅಂಬೆಕಲ್ಲು ಹೇಳಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.