Breaking News

ಕಾಂಗ್ರೆಸ್‌ಗೆ ಮತಿಭ್ರಮಣೆ: ಕೇಶವ ಭಟ್

Advt_Headding_Middle
Advt_Headding_Middle

ಸೋಲಿನ ಭೀತಿಯಿಂದಾಗಿ ಕಾಂಗ್ರೆಸ್‌ನವರಿಗೆ ಮತಿಭ್ರಮಣೆಯಾಗಿದೆ. ಆದ್ದರಿಂದ ಏನೇನೋ ಹೇಳಿಕೆ ನೀಡುತ್ತಿದ್ದಾರೆ ಎಂದು ಬಿಜೆಪಿ ಮಾಧ್ಯಮ ವಕ್ತಾರ ಮುಳಿಯ ಕೇಶವ ಭಟ್ ಆರೋಪಿಸಿದ್ದಾರೆ.
ಅವರು ಇಂದು ಸುಳ್ಯ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು. ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಅದಿತ್ಯನಾಥರವರು ಸುಳ್ಯಕ್ಕೆ ಬಂದಾಗ ಹತ್ತು ಸಾವಿರ ಜನ ಸೇರಿದ್ದರು. ಅಲ್ಲಿ ಕಾರ್ಯಕ್ರಮ ಮುಗಿಯುತ್ತಿರುವಾಗ ಮಳೆಯ ಹನಿ ಬಂದಿದೆ.ಇದನ್ನು ಕಾಂಗ್ರೆಸ್‌ನವರು ತಿರುಚಿ ಪ್ರಕೃತಿ ಮುನಿದಿದೆ ಎಂದು ಹೇಳಿದ್ದಾರೆ. ವಾಸ್ತವವಾಗಿ ಕಾಂಗ್ರೆಸ್‌ನವರು ಹೋದಲ್ಲಿ ಮಳೆ ಬರುತ್ತಿಲ್ಲ. ಬಿಜೆಪಿಯವರು ಇದ್ದಲ್ಲಿ ಮಳೆ ಬೆಳೆ ಆಗುತ್ತದೆ ಎಂದು ಹೇಳಿದ ಅವರು ಕಾಂಗ್ರೆಸ್ ಅಭ್ಯರ್ಥಿ ಡಾ.ರಘು ೫ ವರ್ಷಕ್ಕೊಮ್ಮೆ ಚುನಾವಣೆ ಬರುವಾಗ ಬರುತ್ತಾರೆಯೇ ಹೊರತು ಯಾವ ಹೋರಾಟದಲ್ಲೂ ಭಾಗವಹಿಸಿದವರಲ್ಲ. ಅವರ ಕಣ್ಣೀರು ನೋಡಿ ಮತ ಕೊಟ್ಟರೆ ಮುಂದಿನ ೫ ವರ್ಷ ಜನತೆ ಕಣ್ಣೀರು ಹಾಕಬೇಕಾಗುತ್ತದೆ ಎಂದು ಹೇಳಿದರು.
ಬ್ರಾಹ್ಮಣರ ಅಭಿವೃದ್ಧಿ ನಿಗಮ ಮಾಡುವುದಾಗಿ ಕಾಂಗ್ರೆಸ್‌ನವರು ಹೇಳಿದ್ದಾರೆ. ಅವರಿಗೆ ಈಗ ಚುನಾವಣೆ ಬಂದಾಗ ಬ್ರಾಹ್ಮಣರ ನೆನಪಾದುದೇ?ಎಂದು ಪ್ರಶ್ನಿಸಿದ ಮುಳಿಯ ಮೇ.೧೫ರಂದು ಕಾಂಗ್ರೆಸ್ ಅಭ್ಯರ್ಥಿ ರಾಜೀನಾಮೆ ನೀಡಿ ಮನೆಯಲ್ಲಿ ಕುಳಿತುಕೊಳ್ಳುತ್ತಾರೆ. ಅವರು ೧೫ ರಿಂದ ೨೦ಸಾವಿರ ಅಂತರದಲ್ಲಿ ಸೋಲುತ್ತಾರೆ ಎಂದು ಹೇಳದರು. ಬಿಜೆಪಿಯಲ್ಲಿ ಏನೂ ಅಲ್ಲದವರಿಗೆ ೫೦೦ ರೂ, ೧೦೦೦ರೂ ಕೊಟ್ಟು ಕಾಂಗ್ರೆಸ್ ಧ್ವಜ ಹಿಡಿಸಿ ಸೇರ್ಪಡೆ ಎಂದು ಹೇಳುತ್ತಾರೆ ಎಂದು ಮುಳಿಯವ್ಯಂಗ್ಯವಾಡಿದರು.

 

advertisement

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.