೨೫ಸಾವಿರ ಅಂತರದಿಂದ ಅಂಗಾರ ಗೆಲುವು : ಎ.ವಿ. ತೀರ್ಥರಾಮ

Advt_Headding_Middle
Advt_Headding_Middle

ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭ ನಾಯಕರ ಕಾರ್ಯಶೈಲಿಯಿಂದ ಜನತೆ ರೋಸಿ ಹೋಗಿದ್ದರು. ಆ ಕಾರಣದಿಂದ ನಮಗೆ ಸೋಲು ಉಂಟಾಗಿತ್ತು. ಆದರೆ ಈ ಬಾರಿ ಭಾರತೀಯ ಜನತಾ ಪಕ್ಷದ ದೂರದೃಷ್ಠಿ ಹಾಗೂ ಸಮರ್ಥ ನಾಯಕತ್ವ ಜನತೆಯ ಮೆಚ್ಚುಗೆಗೆ ಪಾತ್ರವಾಗಿದ್ದು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಸುಳ್ಯದಲ್ಲಿ ೨೫ ಸಾವಿರ ಮತಗಳ ಅಂತರದಿಂದ ಶಾಸಕ ಅಂಗಾರರು ಜಯಗಳಿಸುತ್ತಾರೆ ಎಂದು ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ ಅಧ್ಯಕ್ಷ ಎ.ವಿ. ತೀರ್ಥರಾಮ ಹೇಳಿದ್ದಾರೆ.
ಅವರು ಇಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.
” ಸುಳ್ಯ ವಿಧಾನಸಭಾ ಕ್ಷೇತ್ರದ ೨೨೮ಬೂತ್‌ಗಳಲ್ಲಿ ೧೭೫ ಬೂತ್‌ಗಳಲ್ಲಿ ಬಿಜೆಪಿ ಬಹುಮತ ಪಡೆಯುತ್ತದೆ” ಎಂದ ತೀರ್ಥರಾಮ ” ಯಡಿಯೂರಪ್ಪರವರು ತಪ್ಪನ್ನು ಒಪ್ಪಿ ಪಕ್ಷಕ್ಕೆ ಮರಳಿದ್ದಾರೆ. ಈಗ ಬಿಜೆಪಿ ಹೈಕಮಾಂಡ್ ಎಷ್ಟು ಗಟ್ಟಿಯಾಗಿದೆ ಎಂಬುವುದು ಯಡಿಯೂರಪ್ಪರ ಮಗನಿಗೆ ವರಣಾ ಕ್ಷೇತ್ರದಲ್ಲಿ ಟಿಕೆಟ್ ನಿರಾಕರಿಸಿದಾಗಲೇ ಸಾಬೀತಾಗಿದೆ ಎಂದು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಮುಳಿಯ ಕೇಶವ ಭಟ್, ಪಿ.ಜಿ.ಎಸ್..ಎನ್. ಪ್ರಸಾದ್, ವಿನಯ ಕಂದಡ್ಕ, ರಾಕೇಶ್ ರೈ ಕೆಡೆಂಜಿ, ಸದಾಶಿವ ಶೆಟ್ಟಿ, ಸುಬೋಧ್ ಶೆಟ್ಟಿ ಮೇನಾಲ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.