ಕಾಂಗ್ರೆಸ್‌ನಿಂದ ನೆಗೆಟಿವ್ ಪ್ರಚಾರ : ನಗರ ಬಿಜೆಪಿ ಖಂಡನೆ

Advt_Headding_Middle
Advt_Headding_Middle

ಕಾಂಗ್ರೆಸ್‌ನವರು, ಬಿಜೆಪಿಯ ಅಭ್ಯರ್ಥಿಯನ್ನು ಬದಲಿಸಬೇಕಿತ್ತು ಎಂಬ ನಕಾರಾತ್ಮಕ ಪ್ರಚಾರ ಮಾಡುತ್ತಿದ್ದಾರೆ. ಇದನ್ನು ನಗರ ಬಿಜೆಪಿ ಖಂಡಿಸುತ್ತದೆ ಎಂದು ನಗರ ಬಿಜೆಪಿ ಅಧ್ಯಕ್ಷ ವಿನಯ ಕಂದಡ್ಕ ಹೇಳಿದ್ದಾರೆ.
ಇಂದು ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಟಿ ನಡೆಸಿದ ಅವರು ಶಾಸಕರು ಸರಳತೆಯಿಂದ ಅಭಿವೃದ್ಧಿ ಕಾರ್ಯ ಮಾಡುತ್ತಿದ್ದಾರೆ. ಸುಳ್ಯ ನಗರಕ್ಕೆ ಕಾಂಗ್ರೆಸ್‌ನವರು ಏನು ಕೊಡುಗೆ ಕೊಟ್ಟಿದ್ದಾರೆ? ಯಡಿಯೂರಪ್ಪ ಮುಖ್ಯಮಂತ್ರಿಯಾಗಿರುವಾಗ ನಗರದ ಅಭಿವೃದ್ಧಿಗೆ ಬಂದ ಅನುದಾನ ಮತ್ತೆಯೂ ಬಂದಿಲ್ಲ.
ಕಾಂಗ್ರೆಸ್ ಅಭ್ಯರ್ಥಿ ಉತ್ತಮ ವೈದ್ಯರಾಗಿರಬಹುದು ಆದರೆ ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುವವರಲ್ಲ. ಚುನಾವಣೆ ಬಂದಾಗ ಮಾತ್ರ ಬರುತ್ತಾರೆ ಅವರ ಮಗ ಬಸ್‌ನಿಲ್ದಾಣದಲ್ಲಿ ಮತಕ್ಕಾಗಿ ಜನರ ಕಾಲಿಗೆ ಬೀಳುತ್ತಿದ್ದಾರೆ. ಇಂತಹ ದುಃಸ್ಥಿತಿಗೆ ಕಾಂಗ್ರೆಸ್ ಬಂದಿದೆ ಎಂದು ಲೇವಡಿ ಮಾಡಿದರು.
ಪತ್ರಿಕಾಗೋಷ್ಟಿಯಲ್ಲಿ ಸೋಮನಾಥ ಪೂಜಾರಿ, ಐ.ಬಿ.ಚಂದ್ರಶೇಖರ, ಗಿರೀಶ್ ಕಲ್ಲಗದ್ದೆ. ಸತ್ಯಪ್ರಸಾದ್, ಗುರುದತ್ ಶೇಟ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.