Breaking News

ಮೋದಿ ಮಾತು ಚೈನಾ ಸೆಟ್‌ನಂತೆ – ವಾರಂಟಿಯೂ ಇಲ್ಲ, ಗ್ಯಾರಂಟಿಯೂ ಇಲ್ಲ

Advt_Headding_Middle
Advt_Headding_Middle

ಪ್ರಧಾನಿ ನರೇಂದ್ರ ಮೋದಿ ಪ್ರಧಾನಿಯಾಗಿ ೪ವರ್ಷದ ಬಳಿಕವೂ ಕಾಂಗ್ರೆಸ್‌ನವರನ್ನು ದೂರುವ ಕೆಲಸ ಮಾಡುತ್ತಿದ್ದಾರೆ ಹೊರತು ತಾನು ಪ್ರಧಾನಿಯಾಗಿ ಜನರಿಗೆ ಏನೇನು ಒಳ್ಳೆಯದು ಮಾಡಿದ್ದೇನೆ ಎಂದು ಹೇಳುತ್ತಿಲ್ಲ. ಅವರ ಮಾತು ಚೈನಾ ಸೆಟ್‌ನಂತೆ, ಅದಕ್ಕೆ ವಾರಂಟಿಯೂ- ಗ್ಯಾರಂಟಿಯೂ ಇಲ್ಲ ಎಂದು ಕೆ.ಪಿ.ಸಿ.ಸಿ. ಕಾರ್ಯದರ್ಶಿ ಭರತ್ ಮುಂಡೋಡಿ ಟೀಕಿಸಿದ್ದಾರೆ.
ಇಂದು ಯಾರೊಡನೆ ಕೇಳಿದರೂ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ದಲಿತರ, ಬಡವರ, ಮಹಿಳೆಯರ, ವಿದ್ಯಾರ್ಥಿಗಳ ಪರವಾದ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ. ನರೇಂದ್ರ ಮೋದಿಯವರ ಸುಳ್ಳು ಮಾತುಗಳಿಗೆ ಸಮರ್ಥವಾಗಿ ಪ್ರತ್ಯುತ್ತರ ನೀಡುತ್ತಿರುವ ದೇಶದ ಏಕೈಕ ಮುಖ್ಯಮಂತ್ರಿ ಸಿದ್ಧರಾಮಯ್ಯ. ಕೃಷಿಕರ ಸಾಲಮನ್ನಾ ಮಾಡಿದ್ದಾರೆ, ಬಡವರಿಗೆ ಅನ್ನಭಾಗ್ಯದ ಮೂಲಕ ಉಚಿತವಾಗಿ ಅಕ್ಕಿ ಕೊಡುತ್ತಾರೆ. ಹಾಲು ಕೊಡುತ್ತಾರೆ. ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿಸುತ್ತಿದ್ದಾರೆ ಎಂದು ಭರತರು” ಬಿಜೆಪಿಯವರು ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿ ಬಂದ ಯಡಿಯೂರಪ್ಪನವರನ್ನು ಮತ್ತೆ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಮಾಡಿದ್ದು ಆ ಪಕ್ಷದ ಬಣ್ಣ ಬಯಲಾಗಿದೆ ಎಂದು ಅವರು ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ಪಿ.ಎಸ್.ಗಂಗಾಧರ್, ಸುರೇಶ್ ಎಂ.ಎಚ್, ಸುಧೀರ್ ರೈ ಮೇನಾಲ, ಉಪಸ್ಥಿತರಿದ್ದರು.

 

advertisement

 

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.