ವೋಟರ್ ಐಡಿ ಇಲ್ಲದಿದ್ರೆ ಚಿಂತೆ ಬೇಡ

Advt_Headding_Middle
Advt_Headding_Middle


12  ಪರ್ಯಾಯ ಗುರುತು ಚೀಟಿ ತೋರಿಸಿ ಮತ ಹಾಕಿ ಮತದಾರರ ಪಟ್ಟಿಯಲ್ಲಿ ಹೆಸರಿದ್ದು ಮತದಾರರ ಗುರುತಿನ ಚೀಟಿ ಇಲ್ಲದಿದ್ದರೆ ೧೨ ವಿವಿಧ ಬಗೆಯ ದಾಖಲಾತಿಗಳ ಪೈಕಿ ಯಾವುದಾದರೂ ಒಂದು ದಾಖಲಾತಿಯನ್ನು ಹಾಜರುಪಡಿಸಿ ಮತ ಚಲಾಯಿಸಬಹುದು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದ್ದಾರೆ.
ಇತ್ತೀಚೆಗೆ ಸುದ್ದಿಗೋಷ್ಠೀಯಲ್ಲಿ ಮಾಹಿತಿ ನೀಡಿದ ಅವರು ಮೇ.೧೨ರಂದು ನಡೆಯುವ ಮತದಾನ ದಿನದಂದು ಮತ ಚಲಾಯಿಸಲು ಮತ ಗಟ್ಟೆ ಪ್ರವೇಶಿಸುವ ಮತದಾರರು ಮತಗಟ್ಟೆ ಅಧಿಕಾರಿಗಳಿಗೆ ತಮ್ಮ ಗುರುತನ್ನು ಖಾತ್ರಿ ಪಡಿಸಲು ಮತದಾರರ ಗುರುತಿನ ಚೀಟಿಯನ್ನು ತೋರಿಸಬೇಕು. ಭಾವಚಿತ್ರ ಹೊಂದಿರುವ ಮತದಾರರ ಗುರುತಿನ ಚೀಟಿಯಲ್ಲಿ ದೋಷಗಳಿದ್ದರೆ ಅಥವಾ ತರಲು ಸಾಧ್ಯವಾಗದಿದ್ದರೆ ಕೇಂದ್ರ ಚುನಾವಣಾ ಆಯೋಗ ಪರಿಗಣಿಸಿರುವ 12 ದಾಖಲೆಗಳ ಪೈಕಿ ಒಂದನ್ನು ತೋರಿಸಿ ಮತದಾನ ಮಾಡಬಹುದು. ಮತದಾರರ ಪಟ್ಟಿಯಲ್ಲಿ ಹೆಸರಿರುವ ವ್ಯಕ್ತಿಯು ಬೇರೆ ವಿಧಾನಸಭಾ ಕ್ಷೇತ್ರದ ಗುರುತಿನ ಚೀಟಿ ತೋರಿಸಿದರೂ ಅವರಿಗೆ ಮತದಾನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಮತದಾರರ ಪಟ್ಟಿಯಲ್ಲಿ ಹೆಸರಿರುವ ಸಾಗರೋತ್ತರ ಮತದಾರರು ತಮ್ಮ ಗುರುತಿಗೆ ಮತ ಗಟ್ಟೆಯಲ್ಲಿ ಪಾಸ್ ಪೋರ್ಟ್ ಮೂಲ ಹೊರತು ಪಡಿಸಿ ಬೇರೆ ಯಾವುದೇ ಗುರುತಿನ ದಾಖಲೆಗಳನ್ನು ಪರಿಗಣಿಸುವುದಿಲ್ಲ ಎಂದು ಹೇಳಿದರು.
ಪರ್ಯಾಯ ಗುರುತು ಚೀಟಿಗಳು
ಪಾಸ್ ಪೋರ್ಟ್
ಚಾಲನಾ ಪರವಾನಗಿ
ಬ್ಯಾಂಕ್/ಪೋಸ್ಟ್ ಆಫೀಸ್ ಪೋಟೊ ವುಳ್ಳ ಪಾಸ್ ಬುಕ್
ನರೇಗಾ ಜಾಬ್ ಕಾರ್ಡ್
ಪೋಟೋವುಳ್ಳ ಪಿಂಚಣಿ ದಾಖಲೆ
ಆಧಾರ್ ಕಾರ್ಡ್
ಪಾನ್ ಕಾರ್ಡ್
ಕೇಂದ್ರ/ರಾಜ್ಯ/ಪಿಎಸ್‌ಯು
ನೌಕರರಾಗಿದ್ದರೆ ಸರ್ಕಾರ ಕೊಟ್ಟಿರುವ ಫೋಟೊ ಸಹಿತ ಗುರುತು ಚೀಟಿ
ರಾಷ್ಟ್ರೀಯ ಜನಸಂಖ್ಯಾ ನೋಂದಣಿ ನೀಡಿರುವ ಸ್ಮಾರ್ಟ್ ಕಾರ್ಡ್
ಅಧಿಕೃತ ಫೋಟೋ ವೋಟರ್ ಸ್ಲಿಪ್
ಸಂಸದರು, ಶಾಸಕರು, ಎಮ್ಮೆಲ್ಸಿಗಳಿಗೆ ನೀಡಿದ ಅಧಿಕೃತ ಗುರುತು ಚೀಟಿ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.