ಗಾಂಧಿನಗರ : “ಟ್ರೆಂಡ್” ನೂತನ ವಸ್ತ್ರ ಮಳಿಗೆ ಶುಭಾರಂಭ- ಹೇಗಿದೆ ಗೊತ್ತಾ? ಮುಂದಕ್ಕೆ ಓದಿ

Advt_Headding_Middle
Advt_Headding_Middle

ಗಾಂಧಿನಗರದಲ್ಲಿ ನೂತನವಾಗಿ ನಿರ್ಮಾಣವಾದ “ಟ್ರೆಂಡ್” ವಸ್ತ್ರ ಮಳಿಗೆ ಇಂದು ಗಾಂಧಿನಗರದಲ್ಲಿ ಶುಭಾರಂಭಗೊಂಡಿತು. ಸುಳ್ಯದ ಇತಿಹಾಸದಲ್ಲಿ ಪ್ರಥಮ ಬಾರಿಗೆ ೩೦೦೦ ಚದರ ಅಡಿಯ ವಿಶಾಲವಾದ ವಸ್ತ್ರ ಮಳಿಗೆಯ ಉದ್ಘಾಟನೆಯನ್ನು ದುಗಲಡ್ಕ ಅಸ್ಸಯ್ಯದ್ ಝೈನುಲ್ ಅಬೀದಿನ್ ತಂಞಳ್ (ಕುನ್ನುಂಗೈ) ನೆರವೇರಿಸಿದರು. ಮಳಿಗೆಯ ಮಹಿಳ ವಸ್ತ್ರ ವಿನ್ಯಾಸ ವಿಭಾಗವನ್ನು ಸುಳ್ಯ ನ್ಯಾಯವಾದಿ ಎಂ.ವೆಂಕಪ್ಪ ಗೌಡ ಉದ್ಘಾಟಿಸಿದರು. ಮಕ್ಕಳ ವಸ್ತ್ರ ವಿನ್ಯಾಸ ಹಾಗೂ ಆಟಿಕೆ ವಸ್ತುಗಳ ವಿನ್ಯಾಸವನ್ನು ತೆಕ್ಕಿಲ್ ಪ್ರತಿಷ್ಠಾನದ ಪ್ರತಿಷ್ಠಾಪಕ ಟಿ.ಎಂ. ಶಹೀದ್ ಮತ್ತು ವಕ್ಫ್ ಕೌನ್ಸಿಂಲ್‌ನ ಎಸ್. ಸಂಶುದ್ದೀನ್ ಅರಂಬೂರು, ಪುರುಷರ ವಸ್ತ್ರ ವಿನ್ಯಾಸ ವಿಭಾಗವನ್ನು ಲಯನ್ಸ್ ಮಾಜಿ ಗವರ್ನರ್ ಎಂ.ಬಿ.ಸದಾಶಿವ ಉದ್ಘಾಟಿಸಿದರು. ನಂತರ ನಡೆದ ಸಭಾಕಾರ್ಯಕ್ರಮದಲ್ಲಿ ಆಗಮಿಸಿದಂತ ಮುಖ್ಯ ಅತಿಥಿಗಳು ಮಾತನಾಡಿ ಸುಳ್ಯ ನಗರದಲ್ಲಿ ಉತ್ತಮ ರೀತಿಯ ಗ್ರಾಹಕರ ಸ್ಪಂದನೆಗಳು ದೊರಕುತ್ತಿದ್ದು ನೂತನ ಸಂಸ್ಥೆ ಸುಳ್ಯದ ಜನತೆಗೆ ಸಹಕಾರಿಯಾಗಲಿ ಎಂದು ಹಾರೈಸಿದರು. ವೇದಿಕೆಯಲ್ಲಿ ಎ.ಪಿ.ಎಂ.ಸಿ. ಮಾಜಿ ಸದಸ್ಯ ಆದಂ ಹಾಜಿ ಕಮ್ಮಾಡಿ, ಸಂಸ್ಥೆಯ ಮಾಲಕ ಆಶ್ರಪ್, ನ.ಪಂ.ಸದಸ್ಯ ಕೆ.ಎಸ್. ಉಮ್ಮರ್, ನ್ಯಾಯವಾದಿಗಳಾದ ಅಬ್ಬೂಬ್ಬಕ್ಕರ್ ಅಡ್ಕಾರ್, ಮೂಸಾ ಪೈಂಬೆಚ್ಚಾಲ್, ಹಾರೀಸ್ ಮಿಶ್ಬಾಹಿ, ಅಲ್ಪ ಸಂಖ್ಯಾತ ಸೊಸೈಟಿಯ ಅಧ್ಯಕ್ಷ ಆರ್.ಕೆ. ಮಹಮ್ಮದ್, ಕಟ್ಟಡ ಮಾಲಕ ಅಬ್ಬಾಸ್ ಹಾಜಿ ಮೊದಲಾದವರು ಉಪಸ್ಥಿತರಿದ್ದರು. ನ.ಪಂ. ಸದಸ್ಯ ಹಾಜಿ ಮುಸ್ತಫ ಜನತಾ ಗಣ್ಯರನ್ನು ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು. ಪ್ರಥಮ ಗ್ರಾಹಕರಾಗಿ ದಯಾನಂದ ಕುದ್ಪಾಜೆ ಹಾಗೂ ಆದಂ ಹಾಜಿ ಕಮ್ಮಾಡಿ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.