ಸೃಷ್ಟಿ ಪ್ಯಾನ್ಸಿ&ಮೊಬೈಲ್ ವಿಸ್ತೃತ ಮಳಿಗೆ ಶುಭಾರಂಭ

Advt_Headding_Middle
Advt_Headding_Middle

21ವರ್ಷಗಳಿಂದ ಸುಳ್ಯ ಮುಖ್ಯ ರಸ್ತೆಯಲ್ಲಿರುವ ಶ್ರೇಯಸ್ಸ್ ಕಾಂಪ್ಲೆಕ್ಸ್‌ನಲ್ಲಿ ಸೃಷ್ಟಿ ಪ್ಯಾನ್ಸಿ & ಮೊಬೈಲ್ ಸೆಲ್ಸ್ ಮತ್ತು ಸರ್ವಿಸ್ ಮಳಿಗೆ ಕಾರ್ಯಚರಿಸುತ್ತಿದ್ದು ಇದೀಗ ಮಳಿಗೆ ನವೀಕರಿಸಿ ವಿಸ್ತಾರವಾದ ಮಳಿಗೆ ಮೆ.೮ ರಂದು ಶುಭಾರಂಭಗೊಂಡಿತು. ಮಳಿಗೆಯನ್ನು ಉದ್ಘಾಟಿಸಿದ ಡಾ.ವಿದ್ಯಾಶಾಂಭವ ಪಾರೆಯವರು “೨೧ ವರ್ಷಗಳ ಹಿಂದೆ ಇ ಮಳಿಗೆಯನ್ನು ನಾನೇ ಉದ್ಘಾಟಿಸಿದೆ ಮಳಿಗೆಯಲ್ಲಿ ಗ್ರಾಹಕರ ಪ್ರಿತಿ ವಿಶ್ವಾಸದ ಸೇವೆಯಿಂದ ಇಷ್ಟು ಎತ್ತರಕ್ಕೆ ಬೆಳಯಿತು ಇದರಿಂದಾಗಿ ಸಂಸ್ಥೆಯು ನವೀಕರಣ ಗೊಂಡು ಮತ್ತೊಮ್ಮೆ ವಿಸ್ತೃತ ಮಳಿಗೆಯನ್ನು ಉದ್ಘಾಟಿಸುವ ಅವಕಾಶ ಸಿಕ್ಕಿತು ಮಳಿಗೆಯು ಉತ್ತಮ ರೀತಿಯಲ್ಲಿ ಬೆಳಯಲಿ ಎಂದು ಶುಭಹಾರೈಸಿದರು”. ಮುಖ್ಯ ಅತಿಥಿ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಕೆ.ವಿ ಚಿದಾನಂದ ಮಾತನಾಡಿ ಈಗಿನ ಕಾಲದಲ್ಲಿ ಎಲ್ಲರಿಗೂ ಮೊಬೈಲ್ ಅತ್ಯಗತ್ಯ ಎಲ್ಲರಲ್ಲಿಯೂ ಎರಡೆರಡು ಮೊಬೈಲ್‌ಗಳಿವೆ. ಮಕ್ಕಳು ಅಳುವಾಗ ಮೊಬೈಲ್ ಕೈಯಲ್ಲಿ ಕೊಟ್ಟರೆ ಅಳುವದನ್ನು ನಿಲ್ಲಸುತ್ತದೆ. ಅದರೆ ಮಕ್ಕಳ ಕೈಯಲ್ಲಿ ಮೊಬೈಲ್ ನಿಡಬೇಡಿ ಅದು ಅಪಾಯಕಾರಿ ಹಾಗೂ ಸಂಸ್ಥೆಯು ಉತ್ತಮ ಅಭಿವೃದ್ಧಿ ಹೊಂದಲಿ ಎಂದರು. ವರ್ತಕರ ಸಂಘದ ಅಧ್ಯಕ್ಷ ಸುಧಾಕರ ರೈ ಮಾತನಾಡಿ ನಾವು ಕಂಪನಿಯನ್ನು ನಂಬಿ ಮೊಬೈಲ್ ಖರೀದಿಗೆ ಬರುವುದಿಲ್ಲ ನಾವು ಶೈಲೇಂದ್ರ ಮತ್ತು ರಾಮಕೃಷ್ಣ ರವರನ್ನು ನಂಬಿ ಸೃಷ್ಟಿ ಮಳಿಗೆಗೆ ಬರುವುದು ನಮಿಗೆ ಅವರೇ ಗ್ಯಾರಂಟಿ. ಶ್ರೆಯಸ್ಸ್ ಕಾಂಪ್ಲೆಕ್ಸ್ ಮಾಲಕ ಸುಧಾಕರ ಕಾಮತ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಅಶೋಕ ಸರಳಾಯ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.