Breaking News

ಭಾಗ್ಯಶ್ರೀ ನೆಕ್ರಾಜೆಗೆ ಇಂಜಿನಿಯರ್ ಆಗುವ ಗುರಿ

Advt_Headding_Middle
Advt_Headding_Middle

ಎಸೆಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿಗೆ ದ್ವಿತೀಯ ಸ್ಥಾನ ಪಡೆದುಕೊಂಡಿರುವ ನೆಕ್ರಾಜೆ ಮೇದಪ್ಪ ಹಾಗೂ ಶ್ರೀಮತಿ ಭಾರತಿ ದಂಪತಿಗಳ ಪುತ್ರಿ, ಸುಳ್ಯ ರೋಟರಿ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಭಾಗ್ಯಶ್ರೀಗೆ ಇಂಜಿನಿಯರಿಂಗ್ ಆಗುವ ಗುರಿಯನ್ನು ಹೊಂದಿದ್ದಾರೆ.
ಸುದ್ದಿಯೊಂದಿಗೆ ಅಭಿಪ್ರಾಯ ಹಂಚಿಕೊಂಡ ವಿದ್ಯಾರ್ಥಿನಿ, “ನನ್ನ ವಿದ್ಯಾಸಂಸ್ಥೆಯ ಪ್ರಾಂಶುಪಾಲರು, ಶಿಕ್ಷಕರು ಹಾಗೂ ಸ್ನೇಹಿತರ ಮತ್ತು ಹೆತ್ತವರ ಪ್ರೋತ್ಸಾಹ ಹಾಗೂ ಸಹಕಾರದಿಂದ ಈ ಅಂಕವನ್ನು ಪಡೆಯಲು ಸಾಧ್ಯವಾಯಿತು. ಅಂದಿನ ಪಾಠವನ್ನು ಅಂದೇ ಓದಿ ಅರ್ಥೈಸಿಕೊಳ್ಳುತ್ತಿದ್ದೆ. ಮುಂದೆ ಪಿ.ಯು.ಸಿ. ವಿಜ್ಞಾನ ವಿಭಾಗವನ್ನು ಆಯ್ದುಕೊಂಡು ಅದರಲ್ಲಿಯೂ ಉತ್ತಮ ಅಂಕ ಗಳಿಸುತ್ತೇನೆ. ಬಳಿಕ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಿ ಇಂಜಿನಿಯರ್ ಆಗಬೇಕೆಂಬ ಗುರಿ ಇದೆ ಎಂದು ಹೇಳಿದರು.
ಭಾಗ್ಯಶ್ರೀ ಕನ್ನಡದಲ್ಲಿ ೧೨೫ರಲ್ಲಿ ೧೨೫, ಇಂಗ್ಲೀಷ್‌ನಲ್ಲಿ ೯೯, ಹಿಂದಿಯಲ್ಲಿ ೧೦೦, ಗಣಿತದಲ್ಲಿ ೯೮, ವಿಜ್ಞಾನದಲ್ಲಿ ೧೦೦, ಹಾಗೂ ಸಮಾಜ ವಿಜ್ಞಾನದಲ್ಲಿ ೯೯ ಅಂಕ ಪಡೆದುಕೊಂಡಿದ್ದಾರೆ. ಈಕೆಯ ತಂದೆ ಮೇದಪ್ಪ ನೆಕ್ರಾಜೆಯವರು ಸುಳ್ಯ ಕೆ.ವಿ.ಜಿ. ಪಾಲಿಟೆಕ್ನಿಕ್‌ನಲ್ಲಿ ಉಪನ್ಯಾಸಕರಾಗಿದ್ದಾರೆ. ತಾಯಿ ಶ್ರೀಮತಿ ಭಾರತಿಯವರು ಸುಳ್ಯ ಶ್ರೀ ಶಾರದಾ ಹೆಣ್ಣು ಮಕ್ಕಳ ಪ್ರೌಢ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.