Breaking News

ಪಾಲಡ್ಕದಲ್ಲಿ ಬೈಕ್‌ಗೆ ಕಾರು ಢಿಕ್ಕಿ ——-ಸವಾರ ಅರಂತೋಡಿನ ಮನೋಹರ ಮೃತ್ಯು

Advt_Headding_Middle
Advt_Headding_Middle

ಸುಳ್ಯದಿಂದ ಅರಂತೋಡಿಗೆ ಹೋಗುತ್ತಿದ್ದ ಬೈಕ್‌ಗೆ ತಮಿಳುನಾಡು ಮೂಲದ ಕಾರೊಂದು ಢಿಕ್ಕಿಯಾಗಿ ಸವಾರ ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟ ಘಟನೆ ಮೇ.೧೩ರಂದು ಪಾಲಡ್ಕದಲ್ಲಿ ನಡೆದಿದೆ.
ಸುಳ್ಯ ಜಟ್ಟಿಪಳ್ಳದ ಮರ್ಲಿಕಾರ್ಜುನ ಗ್ಯಾರೇಜ್‌ನಲ್ಲಿ ೨೮ ವರ್ಷಗಳಿಂದ ಉದ್ಯೋಗಿಯಾಗಿರುವ, ಅರಂತೋಡು ಪೂಜಾರಿಮನೆ ದಿ| ರಾಮಯ್ಯ ಗೌಡರ ಪುತ್ರ ಮನೋಹರ (೪೮) ಎಂಬವರು ಮೃತ ಪಟ್ಟ ದುರ್ದೈವಿ.
ಮನೋಹರರು ಅರಂತೋಡಿನ ತಮ್ಮ ಮನೆಯಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ ತಮ್ಮ ದೈವಸ್ಥಾನದ ಕೆಲಸದಲ್ಲಿ ನಿರತರಾಗಿದ್ದರು. ದೈವಸ್ಥಾನವನ್ನು ಜೀರ್ಣೋದ್ಧಾರ ಮಾಡಲು ಚಿಂತಿಸಲಾಗಿದ್ದು ದೈವದ ವಸ್ತುಗಳನ್ನು ಬಾಲಾಲಯಕ್ಕೆ ಇಡುವ ಕಾರ್ಯಕ್ರಮ ಮೇ.೧೪ರಂದು ನಡೆಯಬೇಕಿತ್ತು. ಅದರ ಸಿದ್ಧತೆಯ ಕೆಲಸದಲ್ಲಿ ಮನೆಯವರೊಂದಿಗೆ ತಾನು ತೊಡಗಿಸಿಕೊಂಡಿದ್ದರು. ಮಧ್ಯಾಹ್ನದ ತನಕ ಕೆಲಸ ಮಾಡಿದ್ದರು. ಬಳಿಕ ಸ್ವಲ್ಪ ಸಮಯ ಅಲ್ಲಿದ್ದು, ಸುಳ್ಯಕ್ಕೆ ಬೈಕ್‌ನಲ್ಲಿ ಬಂದರು. ವಾಪಸ್ ಮನೆಗೆ ಹೋಗುವಾಗ ಮಡಿಕೇರಿ ಕಡೆಯಿಂದ ಬಂದ ತಮಿಳುನಾಡು ಮೂಲದ ಫಾರ್ಚುನರ್ ಕಾರೊಂದು ಅರಂಬೂರಿನ ಪಾಲಡ್ಕದಲ್ಲಿ ಬೈಕ್‌ಗೆ ಢಿಕ್ಕಿಯಾಯಿತು. ಢಿಕ್ಕಿಯಾದ ರಭಸಕ್ಕೆ ಮನೋಹರರು ಬೈಕ್‌ನಿಂದ ಎಸೆಯಲ್ಪಟ್ಟು ಪಕ್ಕದ ತೋಟಕ್ಕೆ ಬಿದ್ದರು. ಇದರಿಂದ ಅವರ ತಲೆಗೆ ಗಂಭೀರ ಗಾಯವಾಯಿತು. ಇದನ್ನು ನೋಡಿದ ಸ್ಥಳೀಯರು ಮನೋಹರರನ್ನು ಮೇಲೆತ್ತಿ ಸುಳ್ಯ ಸರಕಾರಿ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಅವರು ಕೊನೆಯುಸಿರೆಳೆದರು. ಸುಳ್ಯ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತರು ತಾಯಿ, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಸುಳ್ಯ ಶಾಸಕ ಎಸ್.ಅಂಗಾರ, ಕೆ.ಪಿ.ಸಿ.ಸಿ. ಕಾರ್ಯದರ್ಶಿ ಎಂ.ವೆಂಕಪ್ಪ ಗೌಡ ಸೇರಿದತೆ ಅನೇಕ ಮಂದಿ ಸುಳ್ಯ ಸರಕಾರಿ ಆಸ್ಪತ್ರೆಗೆ ತೆರಳಿ ಮನೆಯವರಿಗೆ ಸಾಂತ್ವನ ಹೇಳಿದರು.

ಮತ್ತೊಂದು ಅಪಘಾತ : ಮನೋಹರಿಗೆ ಗುದ್ದಿದ ಬೈಕ್ ರಸ್ತೆಯಲ್ಲಿ ಬಿದ್ದಿತ್ತು. ಈ ಬೈಕನ್ನು ಪೋಲೀಸ್ ಸ್ಟೇಶನ್‌ಗೆ ತರಲೆಂದು ರವಿ ಕಾರಿನಲ್ಲಿ ಹೋಗಿದ್ದರು.

                                                                ಸಾಂದರ್ಭಿಕ ಚಿತ್ರ

ಈ ಸಂದರ್ಭದಲ್ಲಿ ಎದುರಿನಿಂದ ಬಂದ ಲಾರಿಯೊಂದು ಕಾರಿಗೆ ಢಿಕ್ಕಿಯಾಯಿತು. ಪರಿಣಾಮ ರಿಚಿಯವರ ತಲೆಗೆ ಗಾಯವಾಗಿದ್ದು ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ತಂದು ಚಿಕಿತ್ಸೆ ಕೊಡಿಸಿ, ಬಳಿಕ ಕೆ.ವಿ.ಜಿ. ಆಸ್ಪತ್ರೆಗೆ ದಾಖಲಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.