ಮತದಾರ ಅಭಿವೃದ್ಧಿಗೆ ಮತ ಹಾಕಿಲ್ಲವಾದ್ದರಿಂದ ನನಗೆ ಸೋಲಾಯಿತು:ಡಾ ರಘು

Advt_Headding_Middle
Advt_Headding_Middle

ರಾಜ್ಯದ ಕಾಂಗ್ರೆಸ್ ಸರಕಾರ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಜಿಲ್ಲೆಯ ಹಾಗೂ ರಾಜ್ಯದ ಸಚಿವರ ಸಂಪರ್ಕ ಇಟ್ಟುಕೊಂಡು ವಿಶೇಷ ಅನುದಾನವನ್ನು ತರಿಸಿ ಸುಳ್ಯ ಕ್ಷೇತ್ರದಲ್ಲಿ ನಾನು ಅಭಿವೃದ್ಧಿ ಕೆಲಸವನ್ನು ಮಾಡಿದ್ದೇನೆ. ಆದರೆ ಇದನ್ನು ಮತದಾರರು ಚುನಾವಣೆಯಲ್ಲಿ ಗಣನೆಗೆ ತೆಗೆದುಕೊಂಡಿಲ್ಲವಾದ್ದರಿಂದ ನನಗೆ ಸೋಲಾಗಿದೆ ಎಂದು ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ನ ಅಭ್ಯರ್ಥಿ ಡಾ.ರಘು  ಬೆಳ್ಳಿಪ್ಪಾಡಿಯವರು ಪ್ರತಿಕ್ರಿಯೆ ನೀಡಿದ್ದಾರೆ. ಚುನಾವಣಾ ಫಲಿತಾಂಶದ ಬಳಿಕ ಸುದ್ದಿ ವತಿಯಿಂದ ಡಾ.ರಘುರವರನ್ನು ಸಂಪರ್ಕಿಸಿ ಪ್ರತಿಕ್ರಿಯೆ ಕೇಳಿದಾಗ ಮಾತನಾಡಿದ ಅವರು ನಾನು ಫೀಲ್ಡ್ ಹೋದಲೆಲ್ಲ ಈ ಬಾರೀ ಬದಲಾವಣೆ ಮಾಡುತ್ತೇವೆ ಎಂದು ಆಶ್ವಾಶನೆ ನೀಡಿದ್ದರು. ಆದರೆ ಫಲಿತಾಂಶ ಮಾತ್ರ ನಮ್ಮ ನೀರಿಕ್ಷೆಯಂತೆ ಇರಲಿಲ್ಲ ರಾಜ್ಯದಲ್ಲಿ ಈ ಬಾರೀ ಬಿಜೆಪಿ ಬಹುಮತ ಬರಬಹುದೆಂಬ ನೀರಿಕ್ಷೆ ಮತದಾನರಲ್ಲಿ ಇದ್ದಿರಬೇಕು ಇದ್ದರಿಂದಲೇ ಸುಳ್ಯದಲ್ಲಿ ಕೂಡ ಅಂಗಾರರ ಗೆಲುವಾಗಿದೆ. ಆದರೆ ಇದು ಅಂಗಾರರ ಗೆಲುವುವಲ್ಲ ಅವರ ಪಕ್ಷದ ಗೆಲವು ಎಂದು ರಘು ಹೇಳಿದರು.

ಎಲ್ಲರೂ ದುಡಿದಿದ್ದಾರೆ:
ನಾನು ನಾಲ್ಕನೇ ಬಾರೀ ಚುನಾವಣೆಗೆ ಸ್ಪರ್ಧಿಸಿದ್ದೇನೆ ನಾಲ್ಕರಲ್ಲಿಯೂ ಸೋಲಾಗಿದೆ. ಆದರೆ ಮುಂದಿನ ಬಾರೀ ನಾನು ಟಿಕೆಟ್ ಕೇಳೋದಿಲ್ಲ. ನನ್ನ ಗೆಲುವಿಗೆ ಪಕ್ಷದ ಎಲ್ಲಾ ನಾಯಕರು ಒಟ್ಟಾಗಿ ದುಡಿದಿದ್ದಾರೆ ಎಂದು ರಘುರವರು ಹೇಳಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.