ಗಾಂಧಿನಗರ: 3500 ಚ.ಅಡಿ ವಿಸ್ತೀರ್ಣದ ಎಂಜೆಎಂ ಸಭಾಂಗಣದ ಲೋಕಾರ್ಪಣೆ

Advt_Headding_Middle
Advt_Headding_Middle

ಮುಹಿಯುದ್ದೀನ್ ಜುಮ್ಮಾ ಮಸೀದಿ ಗಾಂಧಿನಗರ ಸುಳ್ಯ ಇದರ ವತಿಯಿಂದ ಮದರಸ ಮೈದಾನದಲ್ಲಿ ಇಫ್ತಾರ್‌ಕೂಟ, ಆಧ್ಯಾತ್ಮಿಕ ಕ್ಲಾಸ್, ಮಹಿಳಾ ತರಗತಿ ಹಾಗೂ ಮದರಸ ಶಿಕ್ಷಣಾರ್ಥಿಗಳಿಗೆ ಬಹೂಪಯೋಗಿಯಾಗಿ ನಿರ್ಮಿಸಲ್ಪಟ್ಟ 3500 ಚದರ ಅಡಿ ವಿಸ್ತೀರ್ಣದ ಶಾಶ್ವತ ಶೀಟು ಛಾವಣಿಯ ಸಭಾಂಗಣವನ್ನು ಗಾಂಧಿನಗರ ಜುಮಾ ಮಸೀದಿಯ ಉಪಾಧ್ಯಕ್ಷ ಹಾಜೀ ಅಬ್ಬಾಸ್ ಕಟ್ಟೆಕ್ಕಾರ‍್ಸ್ ಲೋಕಾರ್ಪಣೆಗೊಳಿಸಿದರು.


ಗಾಂಧಿನಗರ ಖತೀಬರಾದ ಅಲ್‌ಹಾಜ್ ಅಶ್ರಫ್ ಕಾಮಿಲ್ ಸಖಾಫಿಯವರು ದುಆ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ರಾಜ್ಯ ವಕ್ಫ್ ಕೌನ್ಸಿಲ್ ಸದಸ್ಯ ಯಸ್ ಸಂಶುದ್ಧೀನ್, ಕೆಪೆಕ್ ನಿರ್ದೇಶಕ ಪಿ.ಎ. ಮಹಮ್ಮದ್, ಎ.ಪಿ.ಎಂ.ಸಿ. ನಿರ್ದೇಶಕ ಆದಂ ಹಾಜಿ ಕಮ್ಮಾಡಿ, ಮದರಸ ಮುಖ್ಯ ಗುರುಗಳಾದ ಇಬ್ರಾಹಿಂ ಸಖಾಫಿ ಪುಂಡೂರ್, ಕಾರ್ಯದರ್ಶಿಗಳಾದ ಜಿ. ಅಬೂಬಕ್ಕರ್, ಐ. ಇಸ್ಮಾಯಿಲ್, ಅನ್ಸಾರಿಯಾ ಯತೀಂಖಾನ ಅಧ್ಯಕ್ಷ ಹಾಜೀ ಅಬ್ದುಲ್ ಮಜೀದ್, ಹಾಜೀ ಕೆ.ಬಿ. ಮಹಮ್ಮದ್(ಕೆಟಿಎಸ್), ಮೊದಲಾದವರು ಉಪಸ್ಥಿತರಿದ್ದರು.
ಅನ್ಸಾರ್ ಅಧ್ಯಕ್ಷ ಹಾಜೀ ಕೆ.ಎಂ. ಮುಸ್ತಫ ಸ್ವಾಗತಿಸಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.