ಅಲೆಕ್ಕಾಡಿ: ಧಾರಾಕಾರ ಮಳೆ; ಅಲ್ಲಲ್ಲಿ ಹಾನಿ

Advt_Headding_Middle
Advt_Headding_Middle

ಅಲೆಕ್ಕಾಡಿ ಪರಿಸರದಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಿದ್ದು ಹಲವೆಡೆ ತೆಂಗು, ಅಡಿಕೆ ಮರಗಳು ಧರಶಾಯಿಯಾದ ಘಟನೆ ಮೇ.೧೫ರಂದು ನಡೆದಿದೆ. ಅಲೆಕ್ಕಾಡಿ ಜಗನ್ನಾಥ ಪೂಜಾರಿಯವರ ಮನೆಯ ದನದ ಕೊಟ್ಟಿಗೆಗೆ ಮರ ಬಿದ್ದು ಹಾನಿಯಾಗಿದೆ. ಅಲೆಕ್ಕಾಡಿ ಸಂದೇಶ್ ರೈಯವರ ತೋಟದಲ್ಲಿದ್ದ ೭೦ಕಂಗು ಮರ, ರಬ್ಬರ್ ಮರ ಹಾಗೂ ಅಲೆಕ್ಕಾಡಿ ನವೀನ್ ಕುಮಾರ್ ಬೊಳ್ಕಾಜೆಯವರ ತೊಟದಲ್ಲಿದ್ದ ೯೦ ಅಡಿಕೆ ಮರ, ನಾವೂರು ವೆಂಕಟ್ರಮಣ ಗೌಡರ ತೋಟದ ೪೦ ಅಡಿಕೆ ಮರ, ೧೫ರಬ್ಬರ್, ಅಲೆಕ್ಕಾಡಿ ದಿನೇಶ್ ಅಮಿನ್‌ರವರ ತೋಟದ ೧೫೦ ಅಡಿಕೆ ಮರ ಹಾಗೂ ಇತರ ಮರಗಳು ಧರಶಾಯಿಯಾಗಿದೆ. ಹಾಗೂ ಹುದೇರಿ ಜಗದೀಶ್‌ರವರ ಕೋಳಿಸಾಕಣಾ ಕಟ್ಟಡ ಪೂರ್ತಿ ನೆಲಸಮವಾಗಿ ಲಕ್ಷಾಂತರ ನಷ್ಟ ಸಂಭವಿಸಿದೆ. ಹಲವು ಕಡೆ ವಿದ್ಯುತ್ ತಂತಿಗಳಿಗೆ ಮರಬಿದ್ದು ಎರಡು ದಿನ ವಿದ್ಯುತ್ ವ್ಯತ್ಯಯ ಕೂಡಾ ಉಂಟಾಗಿತ್ತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.