ಜಿಯೋ vs ಏರ್ಟೆಲ್ vs ವೋಡಾಫೋನ್!! ಇಲ್ಲಿದೆ ಭರ್ಜರಿ ಪ್ಲಾನ್ ಗಳ ಡಿಟೇಲ್ಸ್..

Advt_Headding_Middle

ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಹೊಸ ಆಫರ್ ಗಳದ್ದೇ ಹವಾ..! ಟೆಲಿಕಾಂ ಕಂಪನಿಗಳು ಒಂದೇ ಬೆಲೆಯ ಹಲವಾರು ಪ್ಲಾನ್ ಗಳ ಮೂಲಕ ಗ್ರಾಹಕರನ್ನು ಸೆಳೆಯಲು ಪರಸ್ಪರ ಪೈಪೋಟಿಗೆ ಬಿದ್ದಂತಿವೆ.. ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ ಪ್ರವೇಶಾತಿಯು ಟೆಲಿಕಾಂ ವಿಭಾಗದಲ್ಲಿ ಬಿರುಗಾಳಿಯನ್ನು ಎಬ್ಬಿಸಿದೆ. ಹೀಗಾಗಿ ಏರ್ಟೆಲ್, ವೋಡಾಫೋನ್ ನಂತಹ ಕಂಪನಿಗಳು ಜಿಯೋನೊಂದಿಗೆ ಸ್ಪರ್ಧಿಸಲು ಹೊಸ ಆಫರ್ ಗಳೊಂದಿಗೆ ಮುನ್ನುಗ್ಗುತ್ತಿವೆ.. ಪ್ರಸ್ತುತ ಒಂದೇ ತೆರನಾದ ಮೊತ್ತಕ್ಕೆ ನೀಡುವ ಹಲವು ಯೋಜನೆಗಳಿವೆ. ಅವುಗಳಲ್ಲಿ ಯಾವುದು ಉತ್ತಮ ಎಂಬುದನ್ನು ಆಯ್ಕೆ ಮಾಡಿಕೊಳ್ಳಿ.

ಜಿಯೋ ಪ್ಲಾನ್ ರೂ. 149 ಜಿಯೋ ರೂ. 149ರ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಅನ್ನು ಪರಿಚಯಿಸಿದೆ. ವ್ಯಾಲಿಡಿಟಿ: 28 ದಿನ 3G/4G ಡೇಟಾ: ಪ್ರತಿದಿನ 1.5GB (ಒಟ್ಟು 42 GB) ಸ್ಥಳೀಯ ಹಾಗೂ ಎಸ್ಟಿಡಿ ಕರೆ: ಅನಿಯಮಿತ ರೋಮಿಂಗ್ ಕರೆಗಳು: ಅನಿಯಮಿತ ಎಸ್ಎಂಎಸ್: ಪ್ರತಿದಿನ 100

ಏರ್ಟೆಲ್ ಪ್ಲಾನ್ ರೂ. 149 ಏರ್ಟೆಲ್ ರೂ. 149 ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯನ್ನು ಘೋಷಿಸಿದೆ. ವ್ಯಾಲಿಡಿಟಿ: 28 ದಿನ 3G/4G ಡೇಟಾ: ಪ್ರತಿದಿನ 1GB (ಒಟ್ಟು 28 GB) ಸ್ಥಳೀಯ ಹಾಗೂ ಎಸ್ಟಿಡಿ ಕರೆ: ಅನಿಯಮಿತ ರೋಮಿಂಗ್ ಕರೆಗಳು: ಅನಿಯಮಿತ ಎಸ್ಎಂಎಸ್: ಪ್ರತಿದಿನ 100 ಏರ್ಟೆಲ್ ನ ಈ ಪ್ರಿಪೇಡ್ ರೀಚಾರ್ಜ್ ಯೋಜನೆ ಆಯ್ದ ವಲಯಗಳಲ್ಲಿ ಮಾತ್ರ ಲಭ್ಯವಿದೆ

ವೊಡಾಫೋನ್ ಯೋಜನೆ ರೂ. 149 ಜಿಯೋ ಹಾಗು ಏರಟೆಲ್ ನಂತೆ ವೊಡಾಫೋನ್ ಕೂಡ ಪ್ರಿಪೇಯ್ಡ್ ರೂ. 149 ಪ್ಲಾನ್ ಘೊಷಿಸಿದೆ. ವ್ಯಾಲಿಡಿಟಿ: 28 ದಿನ 2G/3G/4G ಡೇಟಾ: ಪ್ರತಿದಿನ 1.5 GB (ಒಟ್ಟು 42 GB) ಸ್ಥಳೀಯ ಹಾಗೂ ಎಸ್ಟಿಡಿ ಕರೆ: ಅನಿಯಮಿತ ರೋಮಿಂಗ್ ಕರೆಗಳು: ಅನಿಯಮಿತ ಎಸ್ಎಂಎಸ್: ಪ್ರತಿದಿನ 100

ಜಿಯೋ ರೂ.199 ಪ್ಲಾನ್ ಜಿಯೋ ತನ್ನ ಗ್ರಾಹಕರಿಗಾಗಿ ರೂ. 199ಕ್ಕೆ ತಿಂಗಳ ಪ್ಲಾನ್ ಅನ್ನು ಘೋಷಿಸಿದೆ. ಇದು ರೂ.199ಕ್ಕೆ ಪೋಸ್ಟ್ ಪೇಯ್ಡ್ ಪ್ಲಾನ್ ಅನ್ನು ನೀಲಿದ್ದು, ತಿಂಗಳಿಗೆ 25GB 4G ಡೇಟಾವನ್ನು ನೀಡಲಿದೆ. ಜಿಯೋ ಫೋಸ್ಟ್ ಪೇಯ್ಡ್ ಆಯ್ಕೆ ಮಾಡಿಕೊಳ್ಳಲು ಪ್ರಮುಖ ಕಾರಣವೇಂದರೆ ಇಂಟರ್ನ್ಯಾಷನಲ್ ಕರೆಗಳು ಪ್ರತಿ ನಿಮಿಷಕ್ಕೆ 50 ಪೈಸೆಯಿಂದ ಶುರುವಾಗಲಿದೆ. ಮೇ ೧೫ ರಿಂದ ಈ ಯೋಜನೆ ಪ್ರಾರಂಭವಾಗಲಿದೆ. ಜಿಯೋ ತನ್ನ ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ಉಚಿತ ಕರೆ ಮಾಡುವ ಮತ್ತು ಎಸ್ಎಂಎಸ್ ಕಳುಹಿಸುವ ಅವಕಾಶವನ್ನು ಮಾಡಿಕೊಟ್ಟಿದೆ ಎನ್ನಲಾಗಿದೆ.

ಒಂದೇ ಬೆಲೆಯ ಪ್ಲಾನ್ ಗಳು ಇತ್ತೀಚೆಗೆ ಟೆಲಿಕಾಂ ಕಂಪನಿಗಳು ಒಂದೇ ಬೆಲೆಯ ಪ್ಲಾನ್ ಗಳನ್ನು ಘೋಷಿಸಿ, ಅದರಲ್ಲಿ ಹೆಚ್ಚು ಸೌಲಭ್ಯಗಳನ್ನು ನೀಡುವುದರ ಮೂಲಕ ಗ್ರಾಹಕರನ್ನು ಆಕರ್ಷಿಸಲು ಮುಂದಾಗುತ್ತಿವೆ. ಹೆಚ್ಚು ಡೇಟಾ ಸೌಲಭ್ಯ ಹಾಗು ಅವಧಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿವೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.