Breaking News

ಅಂತರ್‌ರಾಜ್ಯ ಮಟ್ಟದ ಶ್ರೀಕೇಶವಕೃಪಾ ವೇದ-ಯೋಗ-ಕಲಾ ಶಿಬಿರ ಸಮಾಪನಾ ಹಾಗೂ “ ಶ್ರೀಕೇಶವ ಸ್ಮೃತಿ – 2018 ” ಪ್ರಶಸ್ತಿ ಪ್ರದಾನ ಸಮಾರಂಭ

Advt_Headding_Middle
Advt_Headding_Middle

ಸುಳ್ಯ: ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುತ್ತಿರುವ ಅಷ್ಟದಶ ವರ್ಷದ ವೇದ-ಯೋಗ-ಕಲಾ ಶಿಬಿರದ ಸಮಾಪನಾ ಸಮಾರಂಭ ಹಾಗೂ “ಶ್ರೀ ಕೇಶವ ಸ್ಮೃತಿ – 2018” ಪ್ರಶಸ್ತಿ ಪ್ರದಾನ ಸಮಾರಂಭ ಇದೇ ಮೇ ೨೧ರದಂದು ಅಪರಾಹ್ನ ಗಂಟೆ 3.೦೦ಕ್ಕೆ ‘ಶ್ರೀ ಕೇಶವಕೃಪಾ’ ಸಭಾಂಗಣ, ವಿದ್ಯಾನಗರ, ಹಳೆಗೇಟಿನಲ್ಲಿ ನಡೆಯಲಿದೆ ಎಂದು ಪುರೋಹಿತ ನಾಗರಾಜ್ ಭಟ್‌ರವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ದಿನಾಂಕ ಮೇ ೧೯ ರಂದು ಸದ್ರಿ ಶಿಬಿರವು ಪ್ರಾರಂಭಗೊಂಡು ವರ್ಷ ಪ್ರತಿಯಂತೆ ರಾಜ್ಯ ಹಾಗೂ ಹೊರ ರಾಜ್ಯಗಳ ಆಯ್ಕೆಯಾದ ೧೦೦ ಜನ ಶಿಬಿರಾರ್ಥಿಗಳಿಗೆ ಉಚಿತವಾಗಿ ಅಶನ-ವಸನ-ವಸತಿ, ವ್ಯಾಸಪೀಠ, ವೇದ ಪಾಠದ ಪುಸ್ತಕಗಳನ್ನು ನೀಡಿ ವೇದ ಪಾಠದೊಂದಿಗೆ ವಿದ್ಯಾರ್ಥಿಗಳ ಮನೋವಿಕಾಸಕ್ಕೆ ಪೂರಕವಾದ ಸೃಜನಾತ್ಮಕವಾದ ಕಲೆಗಳು, ಜಾನಪದ ನೃತ್ಯ ಪ್ರಕಾರಗಳು, ಭಜನೆ, ನೃತ್ಯ, ಯಕ್ಷಗಾನ, ರಂಗಭೂಮಿ ಬೌದ್ಧಿಕ ಮಾನಸಿಕ ಬೆಳವಣಿಗೆಗೆ ಪೂರಕವಾದ ಅಂಶಗಳನ್ನೊಳಗೊಂಡ ಆಟಗಳು ಇತ್ಯಾದಿ ವೈವಿಧ್ಯತೆಗಳೊಂದಿಗೆ ಸುಮಾರು ೩೫ ದಿನಗಳ ಪರ್ಯಂತ ನಡೆದಿರುವ ಅಂತರ್ ರಾಜ್ಯ ಮಟ್ಟದ ಶ್ರೀ ಕೇಶವಕೃಪಾ ವೇದ-ಯೋಗ-ಕಲಾ ಶಿಬಿರವು ದಿನಾಂಕ ಮೇ.21 ರಂದು ಸಮಾಪನಗೊಳ್ಳಲಿದೆ.
ಸಭಾ ಕಾರ್ಯಕ್ರಮದ ವಿವರ:
ಸಮಾಪನ ಹಾಗೂ ಶ್ರೀ ಕೇಶವಸ್ಮೃತಿ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆಯನ್ನು ಪುತ್ತೂರಿನ ಅಂಬಿಕಾ ಸಮೂಹ ವಿದ್ಯಾಸಂಸ್ಥೆಗಳ ಸಂಚಾಲಕರಾದ ಶ್ರೀ ಸುಬ್ರಹ್ಮಣ್ಯ ನಟ್ಟೋಜ, ಇವರು ವಹಿಸಲಿದ್ದು ವೇದ, ಯೋಗ ಕಲಾಕ್ಷೇತ್ರದಲ್ಲಿ ಗುರುತರ ಸಾಧನೆ ಮಾಡಿದ ಸಾಧಕರಿಗೆ ಹೊರನಾಡಿನ ಆದಿಶಕ್ತ್ಯಾತ್ಮಕ ಅನ್ನಪೂರ್ಣೇಶ್ವರೀ ದೇವಳದ ಧರ್ಮಕರ್ತರಾದ ಡಾ| ಭೀಮೇಶ್ವರ ಜೋಷಿ ಇವರು ಪ್ರತಿಷ್ಠಾನದ ವಾರ್ಷಿಕ ಪ್ರಶಸ್ತಿಗಳಾದ ‘ಶ್ರೀ ಕೇಶವ ಸ್ಮೃತಿ-೨೦೧೮’ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಹಾಗೂ ಸುಬ್ರಹ್ಮಣ್ಯ ಮಠದ ಯತಿಗಳಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿಯವರು ಅನುಗ್ರಹ ಆರ್ಶೀವಚನ ನೀಡಲಿದ್ದು, ಭಾಗವಹಿಸಿದ ಎಲ್ಲಾ ಶಿಬಿರಾರ್ಥಿಗಳಿಗೂ ಅರ್ಹತಾ ಪತ್ರವನ್ನು ನೀಡಲಿದ್ದಾರೆ.
ಈ ವರ್ಷದ ‘ಶ್ರೀಕೇಶವವೇದಸ್ಮೃತಿ-೨೦೧೮’ ನ್ನು ಖ್ಯಾತ ವೈದಿಕ ವಿದ್ವಾನ್ ವೇ| ಮೂ| ಸೂರ್ಯನಾರಾಯಣ ಭಟ್ ಕಶೆಕೋಡಿ ಇವರಿಗೆ ನೀಡಲಾಗುತ್ತದೆ. ‘ಶ್ರೀ ಕೇಶವಯೋಗಸ್ಮೃತಿ-೨೦೧೮’ ನ್ನು ಅಂತರಾಷ್ಟ್ರೀಯ ಯೋಗ ಗುರು ಡಾ| ಕೆ. ರಾಘವೇಂದ್ರ ಆರ್. ಪೈ ಇವರಿಗೆ ನೀಡಲಾಗುತ್ತದೆ. ‘ಶ್ರೀಕೇಶವಕಲಾಸ್ಮೃತಿ-೨೦೧೮’ ನ್ನು ಪಾಕತಜ್ಞರಾದ ಶ್ರೀ ಪದ್ಮನಾಭ ಭಟ್ ಪೆರಾಜೆ ಇವರಿಗೆ ನೀಡಲಾಗುತ್ತದೆ. ಇವರೆಲ್ಲರ ಬಗ್ಗೆ ಅಭಿನಂದನ ಭಾಷಣವನ್ನು ಶಿಬಿರ ಸಂಚಾಲಕ ಶ್ರೀ ಪ್ರಕಾಶ ಮೂಡಿತ್ತಾಯ ಮಾಡಲಿದ್ದು, ಶುಭಾಶಂಸನೆಯನ್ನು ಶಿಬಿರದ ಮೇಲ್ವಿಚಾರಕ ಶ್ರೀ ಎಂ.ಎಸ್. ನಾಗರಾಜ ರಾವ್ ಮಾಡಲಿದ್ದಾರೆ. ಪ್ರತಿಷ್ಠಾನದ ಗೌರವ ಅಧ್ಯಕ್ಷ ಗೋಪಾಲಕೃಷ್ಣ ಭಟ್ ವೇದಿಕೆಯಲ್ಲಿ ಉಪಸ್ಥಿತರಿರುವರು.
ಪತ್ರಿಕಾಗೋಷ್ಠಿಯಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಪುರೋಹಿತ ನಾಗರಾಜ ಭಟ್ ಶಿಬಿರದ ಮೇಲ್ವಿಚಾರಕರು ಹಾಗೂ ಯೋಗ ಮತ್ತು ನೈತಿಕ ಗುರುಗಳಾದ ಎಂ. ಎಸ್. ನಾಗರಾಜ ರಾವ್, ವೇದ ಗುರುಗಳಾದ ವೇ| ಮೂ| ಸುದರ್ಶನ ಭಟ್ ಉಜಿರೆ ಹಾಗೂ ವೇ| ಮೂ| ಅಭಿರಾಮ ಭಟ್ ಸರಳಿಕುಂಜ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.