ದೇಲಂಪಾಡಿ: ಶ್ರೀ ಮಹಾಲಿಂಗೇಶ್ವರ ದೇವರ ಕ್ಷೇತ್ರದಲ್ಲಿ ದೃಢಕಲಶ ಮಹಾಪೂಜೆ ಮಹೋತ್ಸವ

Advt_Headding_Middle
Advt_Headding_Middle

ದೇಲಂಪಾಡಿ ಶ್ರೀ ಮಹಾಲಿಂಗೇಶ್ವರ ದೇವರ ಕ್ಷೇತ್ರದಲ್ಲಿ ಇತ್ತೀಚೆಗೆ ನಡೆದ ಪುನರ್ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಉತ್ತರಾರ್ಧದಲ್ಲಿ ನಡೆಯುವ ದೃಢಕಲಶ ವೇದಮೂರ್ತಿ ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು ಅವರ ನಿರ್ದೇಶನದಂತೆ ಬ್ರಹ್ಮಶ್ರೀ ತಂತ್ರಿ ವಾಸುದೇವ ಅಸ್ರ ಕುಂಟಾರು ಹಾಗೂ ಸಂಗಡಿಗರಿಂದ ಮತ್ತು ಕ್ಷೇತ್ರ ಪುರೋಹಿತ ನಾಗಾರಜ್ ಭಟ್ ಅವರಿಂದ ಜ್ಯೋತಿಷಿ ವೆಂಕಟ್ರಮಣ ಭಟ್ ಮಾಡಾವು ಅವರ ಸಲಹೆಯಂತೆ ವಿವಿಧ ಧಾರ್ಮಿಕ ವಿಧಿ ವಿಧಾನದೊಂದಿಗೆ ನೆರೆದ ಗ್ರಾಮ ಸಮಸ್ತ ಭಕ್ತರ ಉಪಸ್ಥಿತಿಯಲ್ಲಿ ಇತ್ತೀಚೆಗೆ ನೆರವೇರಿತು.


ದೇವತಾ ಪ್ರಾರ್ಥನೆಯೊಂದಿಗೆ ಗಣ ಹೋಮ – ವಾಸ್ತು ಹೋಮ ಪ್ರಾಸಾದ ಶುದ್ಧಿ, ರಾಕ್ತೊಘ್ನ ಹೋಮ – ದೃಢ ಕಲಶ, ಕಲಶ ಪೂಜೆ, ಮಹಾಪೂಜೆ ನಡೆದು ನೆರೆದ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ನಡೆಯಿತು.
ಕ್ಷೇತ್ರದ ಆಡಳಿತ ಕುಟುಂಬದ ಹಿರಿಯರಾದ ಕಾಟೂರಾಯ ಮಹಾಲಿಂಗೇಶ್ವರ ಭಟ್, ಹಿರಿಯ ಭಾಗವತ ವಿಶ್ವ ವಿನೋದ ಬನಾರಿ, ಡಾ. ರವಿಶಂಕರ ಭಟ್ ಏಳ್ಕಾನ, ಕಲ್ಲಡ್ಕ ಶಿವರಾಮ ಕಲ್ಲೂರಾಯ, ನರಸಿಂಹ ಭಟ್ ಗೊಸಾಡ, ಡಿ. ವೆಂಕಟ್ರಮಣ ಭಟ್ ಮಾಸ್ತರ್ ದೇಲಂಪಾಡಿ, ಡಿ. ಸೂರ್ಯನಾರಾಯಣ ಬೃಂದಾವನ, ಕೋರೆಕ್ಕಾನ ನಾರಾಯಣ ಭಟ್, ಮುದಿಯಾರು ಜಗನ್ನಾಥ ರೈ, ಬಂದ್ಯಡ್ಕ ದಯಾನಂದ ಗೌಡ, ಬಿ.ವೆಂಕಟ್ರಮಣ ಭಟ್ ದೇಲಂಪಾಡಿ, ನಂದ ಕಿಶೋರ ಬನಾರಿ, ಬಿ.ಬಾಲಕೃಷ್ಣ ಗೌಡ, ಡಿ.ರಮೇಶ್ ದೇಲಂಪಾಡಿ, ಎನ್.ರಮಾನಂದ ರೈ, ನರಸಿಂಹ ಪ್ರಸಾದ್ ಪಟ್ಟಾಜೆ, ಸೃಜನ್‌ಕುಮಾರ್ ತಿರುವನಂತಪುರ, ರವಿಕುಮಾರ್ ಕುತ್ಯಾಳ ಮೊದಲಾದವರಿದ್ದರು.
ಆಡಳಿತ ಮೊಕ್ತೇಸರ ಡಿ. ರಾಮಭಟ್ ಸ್ವಾಗತಿಸಿ, ಸಾಹಿತಿ ಬೆಳ್ಳಿಪ್ಪಾಡಿ ಸದಾಶಿವ ರೈ ಕಾರ್ಯಕ್ರಮ ನಿರೂಪಿಸಿದರು. ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಕೃತಜ್ಞತೆ ಸಲ್ಲಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.