ರಾಜ್ಯಪಾಲರು ಒಂದು ಪಕ್ಷದ ಪರ ನಿಂತಿರುವುದು ಖೇದಕರ – ಎಂ. ವೆಂಕಪ್ಪ ಗೌಡ

Advt_Headding_Middle
Advt_Headding_Middle

ರಾಷ್ಟ್ರಪತಿ ಮತ್ತು ರಾಜ್ಯಪಾಲ ಎಂಬ ಹುದ್ದೆಗಳು ಸಾಂವಿಧಾನಿಕವಾಗಿದುದು ಅದು ಯಾವುದೇ ಪಕ್ಷಕ್ಕೆ ಸೀಮಿತವಾಗಿರುವುದಲ್ಲ. ಆದರೆ ಈ ರಾಜ್ಯದಲ್ಲಿ ರಾಜ್ಯಪಾಲರು ಒಂದು ಪಕ್ಷದ ಪರ ನಿಂತಿರುವುದು ಖಂಡನೀಯ. ಇದ್ದರಿಂದ ಪ್ರಜಾಪ್ರಭುತ್ವಕ್ಕೆ ಅಪಚಾರ ಎಸಗಿದಂತಾಗಿದೆ ಎಂದು ಕೆ.ಪಿ.ಸಿ.ಸಿ. ಕಾರ್ಯದರ್ಶಿ ಎಮ್.ವೆಂಕಪ್ಪ ಗೌಡ ಹೇಳಿದ್ದಾರೆ.
ಮೇ.೧೮ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಟಿ ನಡೆಸಿದ ಅವರು ಮತ ಎಣಿಕೆಯ ಬಳಿಕ ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ವಿಧ್ಯಾಮಾನಗಳನ್ನು ನಾವೆಲ್ಲ ಗಮನಿಸುತ್ತಿದ್ದೇವೆ. ಕರ್ನಾಟಕದ ರಾಜ್ಯಪಾಲರು ಒಂದು ಪಕ್ಷದಿಂದ ಬಂದವರು ಆಗಿರಬಹುದು. ಆದರೆ ರಾಜ್ಯಪಾಲ ಹುದ್ದೆಯನ್ನು ಅಲಂಕರಿಸಿದ ಮೇಲೆ ನ್ಯಾಯದ ಪರ ನಿಲ್ಲಬೇಕು. ಹಾಗೆ ನಿಲ್ಲದಿದ್ದರೆ ಅದು ಅರಾಜಕತೆಯ ಸಂಕೇತ. ಯಾರು ಬಹುಮತವನ್ನು ತೋರಿಸುತ್ತಾರೋ ಅವರಿಗೆ ಸರಕಾರ ರಚನೆಗೆ ಅವಕಾಶ ನೀಡಬೇಕು. ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಮಾತ್ರಕ್ಕೆ ಬಹುಮತವಿಲ್ಲದೇ ಸರಕಾರ ರಚನೆ ಮಾಡಲು ಅನುಮತಿ ನೀಡುವುದು ಸರಿಯಲ್ಲ. ಹಿಂದೆ ಗೋವಾ, ಮಣಿಪುರ, ಮೇಘಾಲಯದಲ್ಲಿ ಇಂತಹ ಸಂದರ್ಭಗಳು ಬಂದಾಗ ನೀಡಿರುವ ತೀರ್ಪು ಮತ್ತು ಈಗ ರಾಜ್ಯದಲ್ಲಿ ನೀಡುತ್ತಿರುವ ತೀರ್ಪು ಬೇರೆ ಬೇರೆಯಾಗಿರುವುದು ಏಕೆ? ಎಂದು ಅವರು ಪ್ರಶ್ನಿಸಿದರು. ಒಂದು ವೇಳೆ ಬಿಜೆಪಿ ದೊಡ್ಡ ಪಕ್ಷವೆಂದು ಸರಕಾರ ರಚನೆಗೆ ಅವಕಾಶ ನೀಡಿದ್ದರು ವಿಶ್ವಾಸ ಮತ ಸಾಭೀತುಪಡಿಸಲು ಎರಡು ದಿನದ ಕಾಲವಕಾಶವನ್ನಷ್ಟೆ ನೀಡಬೇಕು ಆದರೆ ಇಲ್ಲಿ ರಾಜ್ಯಪಾಲರು ೧೫ ದಿನಗಳ ಅವಕಾಶ ನೀಡಿರುವುದ್ದರಿಂದ ಕುದುರೆ ವ್ಯಾಪಾರಕ್ಕೆ ಅವರೇ ಅವಕಾಶಮಾಡಿಕೊಟ್ಟಂತಾಗಿದೆ ಎಂದು ವೆಂಕಪ್ಪ ಗೌಡರು ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ಯೂತ್ ಕಾಂಗ್ರೆಸ್ ಅಧ್ಯಕ್ಷ ಸಿದ್ಧಿಕ್ ಕೊಕ್ಕೋ, ಸುರೇಶ ಅಮೈ ಇದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.